ಕೊಪ್ಪಳ: ಅಖಿಲ ಭಾರತ ವೀರಶೈವ ಮಹಾಸಭೆಯ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಗೌರವಾಧ್ಯಕ್ಷರಾದ ಭೀಮಣ್ಣ ಖಂಡ್ರೆ ಅವರು ನಿಧನರಾದ ಹಿನ್ನಲೆಯಲ್ಲಿ ಕೊಪ್ಪಳ ನಗರದಲ್ಲಿ ಶನಿವಾರ ಸಂಜೆ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷರಾದ ನಾಗಭೂಷಣ ಸಾಲಿಮಠರವರ ನಿವಾಸದಲ್ಲಿ ಸಂತಾಪ ಸಭೆಯನ್ನು ಆಯೋಜಿಸಿ ಮೃತರಿಗೆ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ನೀಲಕಂಠಯ್ಯ ಹಿರೇಮಠ ಮಾತನಾಡಿ ಗಣ್ಯರು ಭೀಮಣ್ಣ ಖಂಡ್ರೆ ಅವರು ವೀರಶೈವ ಮಹಾಸಭೆ ಹಾಗೂ ಸಮಾಜದ ಅಭಿವೃದ್ಧಿಗೆ ಸಲ್ಲಿಸಿದ ಅಮೂಲ್ಯ ಸೇವೆಯನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದರು.
ಸಂತಾಪ ಸಭೆಯಲ್ಲಿ ರುದ್ರಯ್ಯ ವಕೀಲರು ಹಾಗೂ ಗವಿಸಿದ್ದಯ್ಯ ಸಸಿಮಠ ಸಮಾಜದ ಹಿರಿಯರು, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷರಾದ ನಾಗಭೂಷಣ ಸಾಲಿಮಠ, ರಮೇಶ್ ಕವಲೂರು,ಸೋಮನಗೌಡ ಹೊಗರನಾಳ, ವೀರಶೈವ ಮಹಾಸಭಾ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಕೀರ್ತಿ ಪಾಟೀಲ್, ವಕೀಲರಾದ ಸವಿತಾ ಹಿರೇಮಠ, ಅಂದಪ್ಪ ಯಲ್ಲಮ್ಮನವರು, ಪಂಪಯ್ಯ ಹಿರೇಮಠ, ವೀರಶೈವ ಮಹಾಸಭಾ ಸದಸ್ಯರಾದ ದೇವರಾಜ ಹಾಲಸಮುದ್ರ, ಚನ್ನಬಸವ ಗಾಳಿ, ಶರಣಯ್ಯ ಮುಂಡರಗಿಮಠ ಉಪಸ್ಥಿತರಿದ್ದರು.
