July 28, 2026
IMG-20260704-WA0030

ಇರಕಲ್ಗಡ : 2026-27 ನೇ ಸಾಲಿನ ಮುಂಗಾರು ಬೆಳೆ ವಿಮೆ ನೋಂದಾಯಿಸಲು ರೈತರಿಗೆ ಕೃಷಿ ಇಲಾಖೆ ಸೂಚನೆ.

  ಕೊಪ್ಪಳ: ಕೊಪ್ಪಳ ತಾಲೂಕಿನ ಇರಕಲ್ ಗಡಾ ಹೋಬಳಿಯ 2026-27 ನೇ ಸಾಲಿನ ಮುಂಗಾರು ಹಂಗಾಮಿನ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನಯಡಿಯಲ್ಲಿ ಬೆಳೆ ವಿಮೆಗೆ ನೋಂದಾಯಿಸಲು ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ ಇರಕಲ್ಗಡ ಇವರು ರೈತರಿಗೆ ಸೂಚಿಸಿದ್ದಾರೆ.

ಹತ್ತಿ(ನೀರಾವರಿ), ಹೆಸರು (ಮಳೆಆಶ್ರಿತ) ಬೆಳೆಗಳಿಗೆ ಜುಲೈ 15 ಬುಧವಾರ ಕೊನೆ ದಿನಾಂಕವಾಗಿರುತ್ತದೆ. ಇತರೆ ಪ್ರಮುಖ ಬೆಳೆಗಳಾದ ತೊಗರಿ(ಮ.ಆ.), ಮೆಕ್ಕೆಜೋಳ (ಮ.ಆ. & ನೀರಾವರಿ), ಸಜ್ಜೆ(ಮ.ಆ. & ನೀರಾವರಿ), ಸೂರ್ಯಕಾಂತಿ(ನೀರಾವರಿ) ಹಾಗೂ ಇತರೆ ಬೆಳೆಗಳಿಗೆ ಜುಲೈ 31 ಕೊನೆಯ ದಿನವಾಗಿದೆ. ಈ ಯೋಜನೆಯನ್ನು ವಿಮಾ ಕಂಪನಿ IFFCO Tokio General Insurance company LTD. ಸಂಸ್ಥೆಯ ಮೂಲಕ ಜಾರಿಗೊಳಿಸಲಾ ಗುತ್ತಿದ್ದು. ಇರಕಲ್ಗಡ ಹೋಬಳಿಯ ರೈತರು ವಿವಿಧಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಬಹುದು.     ರೈತರು ಸಮೀಪದ ಸೇವಾ ಕೇಂದ್ರ, ಗ್ರಾಮ ಒನ್, ಕರ್ನಾಟಕ ಒನ್, ಅಥವಾ ಬ್ಯಾಂಕ ಮುಖಾಂತರ ಬೆಳೆ ವಿಮೆ ನೋಂದಾಣಿ ಮಾಡಿಸಿಕೊಳ್ಳಬಹುದು ಹೆಚ್ಚಿನ ಮಾಹಿತಿಗೆ 18001035490 ಸಂಪರ್ಕಿಸಬಹುದು ಎಂದು ಕೃಷಿ ಅಧಿಕಾರಿ ಯೋಗೇಶ್ ಕಾಟ್ರಳ್ಳಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *