April 18, 2026
IMG_20260117_182059
ಕೊಪ್ಪಳ: ಬೆಂಗಳೂರಿನ ಸುರ್ವೆ ಕಲ್ಚರಲ್ ಅಕಾಡೆಮಿಯು  ನಗರದ ಸಮಾಜ ಸೇವಕರು,ಸಹಕಾರಿ ರಂಗದ ಹರಿಕಾರರು, ಸರಳ ಸ್ನೇಹಜೀವಿ ಮಾತೃ ಹೃದಯದ ಧೀಮಂತ ವ್ಯಕ್ತಿತ್ವದ, ಮಾರ್ಗದರ್ಶಕರಾದ ನೀಲಕಂಠಯ್ಯ ಹಿರೇಮಠ ಅವರಿಗೆ ರಾಷ್ಟ್ರೀಯ‘ಸಹಕಾರ ರತ್ನ’  ರಾಷ್ಟ್ರೀಯ ಪುರಸ್ಕಾರ ಲಭಿಸಿದ ಹಿನ್ನೆಲೆಯಲ್ಲಿ ಶನಿವಾರದಂದು ಸಂಜೆ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷರಾದ ನಾಗಭೂಷಣ ಸಾಲಿಮಠ ಅವರ ನಿವಾಸದಲ್ಲಿ  ಸನ್ಮಾನಿಸಿ ಗೌರವಿಸಲಾಯಿತು.
                ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು ನೀಲಕಂಠಯ್ಯ ಹಿರೇಮಠ ಅವರ ಸಮಾಜಮುಖಿ ಸೇವೆ, ಮಾರ್ಗದರ್ಶನ ಹಾಗೂ ಸಹಕಾರ ಕ್ಷೇತ್ರದಲ್ಲಿ ಸಲ್ಲಿಸಿದ ಅಮೂಲ್ಯ ಕೊಡುಗೆಯನ್ನು ಸ್ಮರಿಸಿ ಅಭಿನಂದಿಸಿದರು. ಕಾರ್ಯಕ್ರಮವು ಅತ್ಯಂತ ಸೌಹಾರ್ದಯುತ ಹಾಗೂ ಭಾವಪೂರ್ಣವಾಗಿ ಜರುಗಿತು.
     ಕಾರ್ಯಕ್ರಮದಲ್ಲಿ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷರಾದ ನಾಗಭೂಷಣ ಸಾಲಿಮಠ, ರಮೇಶ್ ಕವಲೂರು, ಸೋಮನಗೌಡ ಹೊಗರನಾಳ, ವಿರುಪಾಕ್ಷಯ್ಯ ಹಿರೇಮಠ, ಕೀರ್ತಿ ಪಾಟೀಲ್, ಸವಿತಾ ಹಿರೇಮಠ ಅಂದಪ್ಪ ಯಲ್ಲಮ್ಮನವರು,  ಪಂಪಯ್ಯ ಹಿರೇಮಠ, ದೇವರಾಜ ಹಾಲಸಮುದ್ರ, ಚನ್ನಬಸವ ಗಾಳಿ,ರುದ್ರಯ್ಯ ವಕೀಲರು, ಗವಿಸಿದ್ದಯ್ಯ ಸಸಿಮಠ, ವೆಂಕಯ್ಯ ಸ್ವಾಮಿ,ಶರಣಯ್ಯ ಮುಂಡರಿಗಿಮಠ ಸೇರಿದಂತೆ ಹಿರಿಯರು  ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *