ಕೊಪ್ಪಳ : ಕನಾ೯ಟಕ ರಾಜ್ಯ ಸಕಾ೯ರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಲ್. ಬೈರಪ್ಪನವರು, ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಕಟಪೂರ್ವ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಹಲಗೇರಿ ಅವರನ್ನು ಕನಾ೯ಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಕೇಂದ್ರ ಸಂಘದ ರಾಜ್ಯ ಹಿರಿಯ ಉಪಾಧ್ಯಕ್ಷರನ್ನಾಗಿ ನೇಮಕಗೂಳಿಸಿ ಆದೇಶ ಪ್ರಮಾಣಪತ್ರವನ್ನು ನೀಡಿದರು.
ನೇಮಕಗೊಂಡ ಬಳಿಕ ಮಾತನಾಡಿದ ಶಂಭುಲಿಂಗಗೌಡ ಪಾಟೀಲ ಹಲಗೇರಿ ಅವರು ರಾಜ್ಯದ ಎಲ್ಲಾ ನಿವೃತ್ತ ಸರ್ಕಾರಿ ನೌಕರರ ಹಿತಾಸಕ್ತಿಯನ್ನು ಕಾಪಾಡುವುದು ತಮ್ಮ ಮೊದಲ ಆದ್ಯತೆಯಾಗಿದ್ದು, ನಿವೃತ್ತ ನೌಕರರು ಎದುರಿಸುತ್ತಿರುವ ಪಿಂಚಣಿ, ವೈದ್ಯಕೀಯ ಸೌಲಭ್ಯ, ಆರ್ಥಿಕ ಭದ್ರತೆ ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಸಂಘವನ್ನು ಇನ್ನಷ್ಟು ಬಲಪಡಿಸಲಾಗುವುದು ಎಂದು ತಿಳಿಸಿದರು.
ಸಂಘದ ರಾಜ್ಯ ಹಾಗೂ ಜಿಲ್ಲಾ ಘಟಕಗಳೊಂದಿಗೆ ಸಮನ್ವಯ ಸಾಧಿಸಿ, ನಿವೃತ್ತ ನೌಕರರ ಧ್ವನಿಯನ್ನು ಸರ್ಕಾರದ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಪ್ರತಿನಿಧಿಸುವ ಕೆಲಸಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ರಾಜ್ಯದ ಎಲ್ಲ ಜಿಲ್ಲೆಗಳ ನಿವೃತ್ತ ನೌಕರರನ್ನು ಒಗ್ಗೂಡಿಸಿ, ಅವರ ಹಕ್ಕುಗಳ ರಕ್ಷಣೆ ಹಾಗೂ ಕಲ್ಯಾಣಕ್ಕಾಗಿ ನಿರಂತರ ಹೋರಾಟ ನಡೆಸುವುದಾಗಿ ಅವರು ಹೇಳಿದರು.
ನಿವೃತ್ತ ನೌಕರರು ಮಾತನಾಡಿ ಶಂಭುಲಿಂಗಗೌಡ ಪಾಟೀಲ ಸಂಘಟನಾ ಅನುಭವ, ಸೇವಾ ಮನೋಭಾವ ಹಾಗೂ ನಾಯಕತ್ವದ ಗುಣಗಳು ಸಂಘದ ಬೆಳವಣಿಗೆಗೆ ಮತ್ತಷ್ಟು ಬಲ ತುಂಬಲಿವೆ ಎಂಬ ವಿಶ್ವಾಸವನ್ನು ಸಂಘದ ಮುಖಂಡರು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು, ನಿವೃತ್ತ ಸರ್ಕಾರಿ ನೌಕರರು ಹಾಗೂ ಗಣ್ಯರು ಶಂಭುಲಿಂಗಗೌಡ ಪಾಟೀಲ ಹಲಗೇರಿ ಅವರಿಗೆ ಅಭಿನಂದನೆ ಸಲ್ಲಿಸಿ, ಅವರ ಅವಧಿಯಲ್ಲಿ ಸಂಘವು ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಎಲ್ ಬೈರಪ್ಪನವರು ಹಾಗೂ ಪ್ರಧಾನ ಕಾರ್ಯದರ್ಶಿ ರಂಗೇಗೌಡರು ಹಿರಿಯ ಉಪಾಧ್ಯಕ್ಷರಾದ ಎನ್ ನಂಜಪ್ಪನವರು ಹಾಗೂ ಉಪಾಧ್ಯಕ್ಷರಾದ ಮುನಿದೇವಕುಮಾರ, ಶ್ರೀ ಮತಿ ಪ್ರಭಾರವರು,ಕಾಯ೯ದಶಿ೯ಯಾದ ನಾರಾಯಣಸ್ವಾಮಿರವರು ಹಾಗೂ ಪುಟ್ಟಸ್ವಾಮಿರವರು ಜಂಟಿ ಕಾಯ೯ದಶಿ೯ಯಾದ ನಾಗೇಂದ್ರರವರು ಹಾಗೂ ಕನಾ೯ಟಕ ರಾಜ್ಯ ಸಕಾ೯ರಿ ನೌಕರರ ಸಂಘ ರಾಜ್ಯ ಉಪಾಧ್ಯಕ್ಷರಾದ ಸದಾನಂದ ನೆಲಕುದ್ರಿ ಅವರು ಬೆಂಗಳೂರಿನ ಕೆ ಆರ್ ಪುರಂ ಕ್ಷೇತ್ರದ ಸಮಾಜ ಸೇವಕರಾದ ದ್ಯಾಮಣ್ಣ ಬಡಿಗೇರ, ಕಳಕನಗೌಡ ಪಾಟೀಲ ಹಲಗೇರಿ ಅವರು ಮಂಜುನಾಥ ಕುರಿ ಅವರು ಉಪಸ್ಥಿತರಿದ್ದರು*
