ಕೊಪ್ಪಳ: ಜಿಲ್ಲಾ ವಕೀಲರ ಸಂಘದ ಸಮಗ್ರ ಅಭಿವೃದ್ಧಿಗೆ ಬೆಂಬಲಿಸುವಂತೆ ಕೊಪ್ಪಳ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಪ್ರಕಾಶ್ ಆನಂದಳ್ಳಿ ಹೇಳಿದರು.
ಪ್ರಕಾಶ್ ಆನಂದಳ್ಳಿ ಬಣದಿಂದ
ಉಪಾಧ್ಯಕ್ಷ ಸ್ಥಾನಕ್ಕೆ – ಡಿ. ಎಮ್. ಪೂಜಾರ್ ವಕೀಲರು
ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ -ಬಿ. ವಿ. ಸಜ್ಜನ್ ವಕೀಲರು,ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ -ನೂರ್ ಅಹಮದ್ ಹೊಸಳ್ಳಿ ವಕೀಲರು,ಖಜಾಂಚಿ ಸ್ಥಾನಕ್ಕೆ -ಶ್ರೀಮತಿ ಪುಷ್ಪಾ ಬೇವುರು ವಕೀಲರು ನಾಮಪತ್ರವನ್ನು ಮುಖ್ಯ ಚುನಾವಣಾಧಿಕಾರಿ ಎಸ್.ವಿ. ಹಿರೇಮಠ್ ವಕೀಲರು, ಸಹಾಯಕ ಚುನಾವಣಾಧಿಕಾರಿ ಬಿ. ಬಿ. ಪಾಟೀಲ್ ವಕೀಲರಿಗೆ ತಮ್ಮ ನಾಮಪತ್ರವನ್ನು ಸಲ್ಲಿಸಿದರು.
ನಂತರ ಕೊಪ್ಪಳ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಪ್ರಕಾಶ್ ಆನಂದಳ್ಳಿ ಮಾತನಾಡಿ
ವಕೀಲರ ಸಂಘದ ಅಭಿವೃದ್ಧಿಗೆ ಎಲ್ಲಾ ಹಿರಿಯ ಹಾಗೂ ಕಿರಿಯ ವಕೀಲರ ಸಲಹೆ, ಮಾರ್ಗದರ್ಶನ ಮೇರೆಗೆ
ಕಾರ್ಯನಿರ್ವಹಿಸುವೆ, ಸಂಘದ ಮೂಲಸೌಕರ್ಯ ಅಭಿವೃದ್ಧಿ, ಸದಸ್ಯರಿಗೆ ಅಗತ್ಯ ಸೌಲಭ್ಯಗಳು, ಯುವ ವಕೀಲರಿಗೆ ತರಬೇತಿ ಮತ್ತು ಮಾರ್ಗದರ್ಶನ ಕಾರ್ಯಕ್ರಮಗಳಿಗೆ ವಿಶೇಷ ಗಮನ ನೀಡಲಾಗುವುದು ಸಂಘದ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಾರದರ್ಶಕ ಹಾಗೂ ಸಮನ್ವಯದ ಆಡಳಿತ ನಡೆಸಲಾಗುವುದು. ಹಿರಿಯ ಮತ್ತು ಕಿರಿಯ ವಕೀಲರ ನಡುವೆ ಒಳ್ಳೆಯ ಬಾಂಧವ್ಯ ಬೆಳೆಸುವ ಮೂಲಕ ಸಂಘವನ್ನು ಸದೃಢಗೊಳಿಸುವ ಗುರಿ ಹೊಂದಲಾಗಿದೆ ಈ ಬಾರಿ ಬೆಂಬಲಿಸುವಂತೆ ಮನವಿ ಮಾಡಿದರು.
ಹಿರಿಯ ವಕೀಲರಾದ ಪಿ. ಎಮ್. ನಾಯಕ್, ಡಿ. ಎಸ್. ಕಂಪ್ಲಿ, ಉಮೇಶ್ ಮಾಳೇಕೊಪ್ಪ,ಆರ್.ಎಂ. ಕಿಲ್ಲೇದಾರ್ ಮಾತನಾಡಿ ಜಿಲ್ಲಾ ವಕೀಲರ ಸಂಘದ ಸಮಗ್ರ ಅಭಿವೃದ್ಧಿಗೆ ಪ್ರತಿಯೊಬ್ಬ ಸದಸ್ಯರ ಸಹಕಾರ ಅಗತ್ಯವಾಗಿದೆ,ಎಲ್ಲರ ಸಲಹೆ ಸಹಕಾರದೊಂದಿಗೆ ಸಂಘವನ್ನು ಮಾದರಿ ಸಂಘವನ್ನಾಗಿ ರೂಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಈ ಬಾರಿ ಪ್ರಕಾಶ್ ಆನಂದಳ್ಳಿ ಬಣಕ್ಕೆ ಬೆಂಬಲಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹಿರಿಯ ವಕೀಲರು, ಕಿರಿಯ ವಕೀಲರು, ಸಹೋದ್ಯೋಗಿ ಮಿತ್ರರು ಹಾಗೂ ಮಹಿಳಾ ನ್ಯಾಯವಾದಿಗಳು ಉಪಸ್ಥಿತರಿದ್ದರು
