ಕೊಪ್ಪಳ: ಬೆಂಗಳೂರಿನ ಸುರ್ವೆ ಕಲ್ಚರಲ್ ಅಕಾಡೆಮಿಯು ನಗರದ ಸಮಾಜ ಸೇವಕರು ಸಹಕಾರಿ ರಂಗದ ಹರಿಕಾರರು, ಸರಳ ಸ್ನೇಹಜೀವಿ ಮಾತೃ ಹೃದಯದ ಧೀಮಂತ ವ್ಯಕ್ತಿತ್ವದ ನೀಲಕಂಠಯ್ಯ ಹಿರೇಮಠ ಅವರು ಸಹಕಾರಿ ರಂಗದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಬೆಂಗಳೂರಿನ ನಯನ ರಂಗಮಂದಿರದಲ್ಲಿ ರಾಷ್ಟ್ರೀಯ ಸಹಕಾರ ರತ್ನ ರಾಷ್ಟ್ರ ಪ್ರಶಸ್ತಿ ಪಡೆದ ನಿಮಿತ್ತ
ಬುಧವಾರದಂದು ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ನೀಲಕಂಠಯ್ಯ ಹಿರೇಮಠರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರ ಶಾಸಕರಾದ ಮಹೇಶ್ ತೆಂಗಿನಕಾಯಿ. ಮಾಜಿ ಸಚಿವ ಹಾಲಪ್ಪ ಆಚಾರ್ ಪರಣ್ಣ ಮುನವಳ್ಳಿ. ಡಾ. ಬಸವರಾಜ್. ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ್. ಮಾಜಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು ಮಹಾಂತೇಶ್ ಪಾಟೀಲ್ ಮೈನಹಳ್ಳಿ. ರಾಜು ಬಾಕಳೆ ಚಂದ್ರಶೇಖರ್ ಗೌಡ ಪಾಟೀಲ್ ಹಲಿಗೇರಿ, ಗಣೇಶ್ ಹೊರತಟ್ನಾಳ, ಚಂದ್ರಶೇಖರ್ ಕವಲೂರು. ಉಮೇಶ್ ಕುರುಡೇಕರ್. ಬಂಧುಗಳು ಇತರರು ಭಾಗವಹಿಸಿದ್ದರು
