ಕೊಪ್ಪಳ : ಭಾಗ್ಯನಗರ ಪಟ್ಟಣ ಪಂಚಾಯಿತಿ ಹಂಗಾಮಿ ಅಧ್ಯಕ್ಷರಾಗಿ ಹೊನ್ನೂರ್ ಸಾಬ್ ಬೈರಾಪುರ ಅಧಿಕಾರ ಸ್ವೀಕರಿಸಿದರು.
ಭಾಗ್ಯನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ತುಕಾರಾಮಪ್ಪ ಗಡಾದವರ ರಾಜೀನಾಮೆ ನೀಡಿದ್ದರು ಹೀಗಾಗಿ ಹಂಗಾಮಿ ಅಧ್ಯಕ್ಷರಾಗಿ ಉಪಾಧ್ಯಕ್ಷ ಹೊನ್ನುರ್ ಸಾಬ್ ಬೈರಾಪುರ ಅವರು ಅಧಿಕಾರ ಸ್ವೀಕರಿಸಿದರು.
ನಂತರ ಹಂಗಾಮಿ ಅಧ್ಯಕ್ಷ ಹೊನ್ನೂರ್ ಸಾಬ್ ಬೈರಾಪುರ ಮಾತನಾಡಿ ಸಂಸದ ರಾಜಶೇಖರ್ ಹಿಟ್ನಾಳ್, ಶಾಸಕ ರಾಘವೇಂದ್ರ ಹಿಟ್ನಾಳ್, ನಗರ ಪ್ರಾಧಿಕಾರ ಅಧ್ಯಕ್ಷ ಶ್ರೀನಿವಾಸ್ ಗುಪ್ತಾ, ಸಹಕಾರದೊಂದಿಗೆ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ತುಕಾರಾಮಪ್ಪ ಗಡಾದ್ ಹಾಗೂ ಎಲ್ಲಾ ಸದಸ್ಯರ ಸಲಹೆ ಸೂಚನೆ ಮೇರೆಗೆ ಭಾಗ್ಯನಗರ ಪಟ್ಟಣದ ಅಭಿವೃದ್ಧಿಗಾಗಿ ಶ್ರಮಿಸೋಣ, ನಂತರ ಚುನಾವಣೆಯಾಗಿ ನೂತನ ಅಧ್ಯಕ್ಷರೊಂದಿಗೆ ಎಲ್ಲರೂ ಕೈಜೋಡಿಸಿ ಅಭಿವೃದ್ಧಿ ಕಾರ್ಯಗಳನ್ನು ಮಾಡೋಣ ಎಂದರು.
ಈ ಸಂದರ್ಭದಲ್ಲಿ ನಗರ ಪ್ರಾಧಿಕಾರ ಅಧ್ಯಕ್ಷ ಶ್ರೀನಿವಾಸ್ ಗುಪ್ತಾ,ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಯಮನಪ್ಪ ಕಬ್ಬೇರ್,ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ತುಕಾರಾಮಪ್ಪ ಗಡಾದ, ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಮ ಮ್ಯಾಗಳಮನಿ, ಸದಸ್ಯರಾದ ವಾಸುದೇವ ಮೇಘರಾಜ್, ಸರಸ್ವತಿ ಇಟ್ಟಂಗಿ, ಮಂಜುಳಾ ಮ್ಯಾಗಳಮನಿ, ಮೋಹನ್ ಅರಕಲ್, ಪರಶುರಾಮ್ ನಾಯಕ್, ರಮೇಶ್ ಹ್ಯಾಟಿ, ಗೌರಮ್ಮ ಉಂಕಿ, ಗವಿಸಿದ್ದಯ್ಯ ಕೆಂಭಾವಿಮಠ, ಜಯಮಾಲಾ ಶೆಡಮಿ, ಗವಿ ಮಗಿಮಹಾನಳ್ಳಿ, ಪಾಲಾಕ್ಷಮ್ಮ ಕವಲೂರ್, ಕಸ್ತೂರಿ ಹಂಚಿನಮನಿ, ಮಂಜುಳಾ ಶ್ಯಾವಿ, ರೋಷನ ಅಲಿ ಮಂಗಳೂರು, ಜಗದೀಶ್ ಮಾಲಗಿತ್ತಿ, ಲಲಿತಾ ಡಂಬಳ, ನಾಮನಿರ್ದೇಶನ ಸದಸ್ಯರಾದ ಇಬ್ರಾಹಿಂ ಸಾಬ್ ಬಿಸರಳ್ಳಿ, ಹನುಮಂತಪ್ಪ ಬಂಡಿ, ಸವಿತಾ ಗೋರಂಟ್ಲಿ ,ಮುಖ್ಯಾಧಿಕಾರಿಗಳಾದ ಸುರೇಶ್ ಬಾಬಲಾದ,
ಅಭಯಂತರರಾದ ಶಿಲ್ಪಾ. ಜಿ, ಪಂಚಾಯಿತಿ ಸಿಬ್ಬಂದಿ ವರ್ಗದವರು ಹಾಗೂ ಪಟ್ಟಣದ ಗುರು ಹಿರಿಯರು ಉಪಸ್ಥಿತರಿದ್ದರು.
