April 18, 2026
IMG_20251203_154106

ಕೊಪ್ಪಳ: ಬೀರಪ್ಪ ಅಂಡಗಿ ಎಂಬ ಹೆಸರು ಕೇಳಿದಾಕ್ಷಣ ಮೊದಲಿಗೆ ನೆನಪಾಗುವುದು ಹೋರಾಟ ಎಂಬ ಪದ,ಹೌದು ಬೀರಪ್ಪ ಅಂಡಗಿ ಎಂಬ ಹೆಸರೇ ಹಾಗೇ ಹುಟ್ಟು ಹೋರಾಟಗಾರ,ಛಲದಂಕಮಲ್ಲ,ಹಠವಾದಿ,ಸ್ನೇಹಿ ಜೀವಿ,ಕೊಪ್ಪಳದ ಅಣ್ಣಾ ಹಜಾರೆ ಎಂದೇ ಖ್ಯಾತಿಯಾಗಿರುವ ಇವರು ತಮ್ಮ ಅಂಗವೈಕಲ್ಯಯ ಕಡೆಗೆ ಹೆಚ್ಚು ಗಮನವನ್ನು ಹರಿಸದೇ ಸಂಕುಚಿತವಾದ ಮನೋಭಾವನೆಯನ್ನು ಬಿಟ್ಟು ವಿಶಾಲ ಮನೋಭಾವದೊಂದಿಗೆ ಸಮಾಜದಲ್ಲಿ ಇತರರಂತೆ ಕಷ್ಟ ಪಟ್ಟು ಸತತ ಪರಿಶ್ರಮದ ಪಲವಾಗಿ ಶಿಕ್ಷಕರ ವೃತ್ತಿಯನ್ನು ಆಯ್ಕೆ ಮಾಡಿಕೊಂಡರು.

ಶಿಕ್ಷಕರ ವೃತ್ತಿಯನ್ನು ಸೇರುವ ಮುಂಚೆನೆ ಶಿಕ್ಷಕರ ತರಬೇತಿ (ಡಿ.ಎಡ್) ಪದವಿ ಯಲ್ಲಿ ಉಚಿತವಾಗಿ ೬ ತಿಂಗಳ ಕಾಲ ತರಬೇತಿ ಮಾಡಬೇಕಿತ್ತು ಇದನ್ನು ಪ್ರಶ್ನೆ ಮಾಡಿದ ಬೀರಪ್ಪ ಅಂಡಗಿ ಅವರು ಡಿ.ಎಡ್.ಹೋರಾಟ ಸಮಿತಿಯ ರಾಜ್ಯಾಧ್ಯಕ್ಷರಾಗಿ ಆಗಿನ ಮುಖ್ಯಮಂತ್ರಿಗಳಾಗಿದ್ದ ಧರ್ಮಸಿಂಗ್ ಹಾಗೂ ಶಿಕ್ಷಣ ಸಚಿವರಾಗಿದ್ದ ರಾಮಲಿಂಗಾರಡ್ಡಿ ಅವರ ಬಳಿ ಸಮಸ್ಯೆಯ ಕುರಿತು ಚರ್ಚೆ ಮಾಡಿ ಡಿ.ಎಡ್.ಪದವಿಯನ್ನು ಎರಡು ವರ್ಷ ಮಾಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಶಿಕ್ಷಕರ ವೃತ್ತಿ ಸೇರಿದ ಮೇಲೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಆನಮಾನಹಳ್ಳಿ ಶಾಲೆಯಲ್ಲಿ ಶಿಕ್ಷಕರಾಗಿ ನೇಮಕವಾದ ನಂತರ ಹೊಸ ಶಿಕ್ಷಕರಿಗೆ ವೇತನ ಸುಮಾರು 8 ತಿಂಗಳು ಕಾಲ ಆಗದೇ ಇದುದ್ದರಿಂದ ಅವರಿಗೆ ಸಮಸ್ಯೆ ಆಗಿತ್ತು.ಅದನ್ನು ಕೂಡಾ ಪ್ರತಿಭಟಿಸುವ ಮೂಲಕ ಶಿಕ್ಷಕರಿಗೆ ವೇತನ ಮಾಡಿಸುವ ಜೊತೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿನ ಶೌಚಾಲಯಗಳ ಕುರಿತು ಕೂಡಾ ಮಾಧ್ಯಮದಲ್ಲಿ ಪ್ರಕಟ ಮಾಡಿಸಿ ಅದನ್ನು ಕೂಡಾ ಸರಿ ಮಾಡಿಸುವ ಪ್ರಯತ್ನ ಮಾಡಿದರು.ಇವರು ಮಾಡಿದ ಹೋರಾಟಗಳನ್ನು ವಿವರಿಸುತ್ತಾ ಹೋದರೆ ಸಮಯ, ಸ್ಥಳ ಕೂಡಾ ಸಾಕಾಗದು.ಆದರೂ ಇವರು ಮಾಡಿದ ಹೋರಾಟಗಳ ಕೇಲವು ಮಾತ್ರ ಇಲ್ಲಿ ಸ್ಮರಿಸೋಣ,

   ಬೀರಪ್ಪ ಅಂಡಗಿ ಅವರು ತಮ್ಮ ವೃತ್ತಿಯನ್ನು ಪ್ರಾರಂಭಿಸಿದ ರಾನನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿ ಕೇವಲ ಒಂದೇ ವರ್ಷದ ಅವಧಿಯಲ್ಲಿ ಜರುಗಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ತಾಲೂಕಿಗೆ ಅತಿ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಆಯ್ಕೆಯಾದರು.ನಂತರ 2010 ರಲ್ಲಿ ಕೊಪ್ಪಳಕ್ಕೆ ವರ್ಗಾವಣೆ ಆದ ಬಳಿಕ ವಿಕಲಚೇತನ ನೌಕರರ ಸಂಘವನ್ನು ಕಟ್ಟಿಕೊಂಡು ರಾಜ್ಯ ಪ್ರತಿಯೊಂದು ತಾಲೂಕು ಹಾಗೂ ಜಿಲ್ಲಾಗಳಿಗೆ ಭೇಟಿ ನೀಡುವ ಮೂಲಕ ವಿಕಲಚೇತನ ನೌಕರರ ಸಂಘವನ್ನು ಕಟ್ಟಿಗೊಳಿಸುವ ಜೊತೆಗೆ ಪ್ರತಿ 5 ವರ್ಷಕ್ಕೆ ಒಮ್ಮೆ ವೇತನದ ಆಯೋಗದಲ್ಲಿ ವಿಕಲಚೇತನ ನೌಕರರಿಗೆ ಮೂಲವೇತನ ಶೇಕಡಾ 6 ರಷ್ಟು ಸಂಚಾರಿ ಭತ್ಯೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕೊಡಿಸಿದ್ದಾರೆ.ಅಲ್ಲದೇ ಸತತ 5 ಗಂಟೆಗಳ ಕಾಲ ಟೋಲ್ ಗೇಟ್ ನಲ್ಲಿ ಧರಣಿ ಮಾಡುವ ಮೂಲಕ ದೇಶದ ಎಲ್ಲಾ ಟೋಲ್ ಗಳಲ್ಲಿ ವಿಕಲಚೇತನರ ವಾಹನಗಳಿಗೆ ಉಚಿತ ಸೌಲಭ್ಯ ಮಾಡಿಸಿದ್ದಾರೆ.ವಿಕಲಚೇತನ ನೌಕರರಿಗೆ ಅವರ ಸೇವಾ ಜೇಷ್ಠತೆಯನ್ನು ಅನುಸರಿಸಿ ಶೇಕಡಾ 4. ರಷ್ಟು ಬಡ್ತಿ ಮೀಸಲಾತಿ ಜಾರಿಗೆ ಮಾಡದ ಸರಕಾರ ನಡೆಯನ್ನು ಪ್ರಶ್ನೆ ಮಾಡಿ ನ್ಯಾಯಾಲದ ಮೂಲ ಎ ವೃಂದ ಡಿ ವೃಂದದ ವರೆಗೆ ಬಡ್ತಿ‌ ಮೀಸಲಾತಿ ಆದೇಶ ಮಾಡಿಸಿದ್ದಾರೆ,ಇಲ್ಲದೇ ವಿಕಲಚೇತನ ನೌಕರರಿಗೆ ಅನೇಕ ಸೌಲಭ್ಯಗಳ ಸಲುವಾಗಿ ಅನೇಕ ಹೋರಾಟಗಳನ್ನು ಮಾಡಿದ್ದಾರೆ.ಅಲ್ಲದೇ 2006 ಎಪ್ರೀಲ್ 1 ರ ನಂತರ ನೇಮಕಗೊಂಡ ರಾಜ್ಯ ಸರಕಾರಿ ನೌಕರರಿಗೆ ಮರಣ ಶಾಸನವಾಗಿರುವ ಎನ್.ಪಿ.ಎಸ್.ಯೋಜನೆಗೆ ಒಳಪಡುವ ಸರಕಾರಿ ನೌಕರರ ಸಂಘವನ್ನು ರಚನೆ ಮಾಡಿ ತಮ್ಮ ವೇತನದ ಹಣದಿಂದ ರಾಜ್ಯಾಧ್ಯಂತಹ ಪ್ರವಾಸ ಮಾಡಿ ಸಂಘಟನೆ ಮಾಡುವುದರ ಜೊತೆಯಲ್ಲಿ ಸ್ವತ ಅವರೇ ಮೂರು ದಿನಗಳ ಕಾಲ ಕೊಪ್ಪಳ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಧರಣಿ‌ ಮಾಡಿದ ಸಮಯದಲ್ಲಿ ಅಂದಿನ‌ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಅವರೇ ನೇರವಾಗಿ ಕರೆ ಮಾಡಿದ ನಂತರ ಉಪವಾಸ ಕೈ ಬಿಟ್ಟಿದ್ದಾರೆ.
ವಿಶೇಷ ಇತ್ತಿಚೆಗೆ ರಾಜ್ಯ ಸರಕಾರ ಕೈಗೊಂಡಿದ್ದ ಸಮಾಜಿಕ ಹಾಗೂ ಶೈಕ್ಷಣಿಕ ಗಣತಿ ಕಾರ್ಯಕ್ಕೆ ಬೆಂಗಳೂರಿನ ಬಿಬಿಎಂಪಿ ಅವರು ಸುಮಾರು 350 ಜನ ವಿಕಲಚೇತನ ನೌಕರರನ್ನು ನೇಮಕ ಮಾಡಿತ್ತು.ಇದರ ವಿರುದ್ದ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಅವರು ಹೋರಾಟ ಮಾಡುವುದರ ಮೂಲಕ ವಿಕಲಚೇತನ ನೌಕರರಿಗೆ ನ್ಯಾಯ ಒದಗಿಸಿ‌ ಕೊಡುವ ಕೆಲಸ ಮಾಡಿದ ಪರಿಣಾಮವಾಗಿ ರಾಜ್ಯದ ಪ್ರತಿಷ್ಠಿತ ಸುದ್ದಿ ವಾಹಿನಿಯಾದ ಜೀ ಕನ್ನಡ ಬೀರಪ್ಪ ಅಂಡಗಿ ಅವರ ಹೋರಾಟವನ್ನು ಗುರುತಿಸಿ “ವೀರಕನ್ನಡಿಗ” ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ.ಇದರ ಜೊತೆಯಲ್ಲಿ ಪ್ರಶಸ್ತಿ ಪಡೆಯುತ್ತಿರುವ ಬೀರಪ್ಪ ಅಂಡಗಿ ಅವರಿಗೆ ಈ ಪ್ರಶಸ್ತಿ ಅವರಿಗೆ ಮತ್ತಷ್ಟು ಜವಾಬ್ದಾರಿಗಳನ್ನು ನೀಡಿದ್ದು,ಮುಂದಿನ‌ ದಿನಗಳಲ್ಲಿ ಬೀರಪ್ಪ ಅಂಡಗಿ ಅವರು ವಿಕಲಚೇತನ, ಸರಕಾರಿ ನೌಕರರ ಹಾಗೂ ಶಿಕ್ಷಕರ ಸಮಸ್ಯೆಗಳಿಗೆ ಧ್ವನಿಯಾಗುವ ಮೂಲಕ ಅವರ ಬೇಕು- ಬೇಡಿಕೆಗಳ ಕುರಿತು ಹೋರಾಟ ಮಾಡಲಿ ಎಂಬುದೇ ಪತ್ರಿಕೆಯ ಆಶಯವಾಗಿದೆ.

Leave a Reply

Your email address will not be published. Required fields are marked *