ಕೊಪ್ಪಳ : ಶ್ರೀ ಶಾರದಾ ಸಂಗೀತ ಕಲಾ ಶಿಕ್ಷಣ ಸಂಸ್ಥೆ ಕಿನ್ನಾಳ, ಶ್ರೀ ಪುರಂದರರದಾಸರ ಕೊಪ್ಪಳ ವತಿಯಿಂದ ಸಂಸ್ಕಾರ ಭಾರತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ, ಶ್ರೀರಾಘವೇಂದ್ರ ಸ್ವಾಮಿಗಳ ಮಠ ಕೊಪ್ಪಳ, ಪಾನಘಂಟಿ ಫೌಂಡೇಷನ್ ಭಾಗ್ಯನಗರ ಸಹಕಾರದೊಂದಿಗೆ ದಿ.ಶ್ರೀ ಹನುಮಂತರಾವ್ ಬಂಡಿ (ಕುಲಕರ್ಣಿ) ಇವರ15 ನೇ ವರ್ಷದ ಸ್ವರ ಶ್ರದ್ದಾಂಜಲಿ ಕಾರ್ಯಕ್ರಮ ಹಾಗೂ 18 ನೇ ವರ್ಷದ ಸಂಗೀತ ಮಹೋತ್ಸವ ಕಾರ್ಯಕ್ರಮ,
ಸುಪ್ರಸಿದ್ಧ ಕಲಾವಿದರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆಗೈಯುತ್ತಿರುವ ಗಣ್ಯರಿಗೆ ಸನ್ಮಾನ ಕಾರ್ಯಕ್ರಮವನ್ನು ನಾಳೆ ದಿ.22 ರಂದು ಸೋಮವಾರ ಸಂಜೆ 6ಕ್ಕೆ ನಗರದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಜರುಗುವುದು.
ಉದ್ಘಾಟನೆಯನ್ನು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪ್ರಧಾನ ಅರ್ಚಕ ರಾದ ಪಂ.ರಘುಪ್ರೇಮಾಚಾರ ಮುಳಗುಂದ ನೆರವೇರಿಸುವರು.
ಮುಖ್ಯ ಅತಿಥಿಗಳಾಗಿ ಸಂಸದ ಕೆ.ರಾಜಶೇಖರ ಹಿಟ್ನಾಳ, ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ.ಕಣವಿ, ಹಿರಿಯ ನ್ಯಾಯವಾದಿ ರಾಘವೇಂದ್ರ ಪಾನಘಂಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ, ಜಿಲ್ಲಾ ಸಂಸ್ಕಾರ ಭಾರತಿ ಅಧ್ಯಕ್ಷ ಪ್ರಲ್ಲಾದ ಅಗಳಿ,
ರಾಜ್ಯ ಸಿರಿಗನ್ನಡ ವೇದಿಕೆ ಅಧ್ಯಕ್ಷ ಜಿ.ಎಸ್. ಗೋನಾಳ, ಜಿಲ್ಲಾ ವಕೀಲ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಎಲ್.ಹಾದಿಮನಿ ಪಾಲ್ಗೊಳ್ಳುವರು.
ಶ್ರೀಮತಿ ಅಂಜಲಿ ಮಧುಕರ ತೊರವಿ ಸಾಹಿತಿಗಳು ಮುಂಬಯಿ ಇವರನ್ನು ಸನ್ಮಾನಿಸಲಾಗುವುದು.
ಕಲಾವಿದರಾದ ಪಂ.ಪ್ರವೀಣ ಗೋಡ್ಕಿಂಡಿ ಬೆಂಗಳೂರು ಖ್ಯಾತ ಬಾನ್ಸುರಿ ವಾದಕರು, ಅರ್ಜುನ ಆನಂದ ಬೆಂಗಳೂರು ಸಿತಾರ ವಾದನ,ವಿದೂಷಿ ಶ್ರೀಮತಿ ಕವಿತಾ ಸಾಗರ ಶಾಸ್ತ್ರೀಯ ಭರತ ನಾಟ್ಯ,ವಿದೂಷಿ ಶ್ರೀಮತಿ ಸಂಗಮ್ಮ ಎಸ್.ಸೋಮಾ ಶಾಸ್ತ್ರೀಯ ಭರತ ನಾಟ್ಯ, ವಾದಿರಾಜ ಪಾಟೀಲ್ ಕೊಪ್ಪಳ ದಾಸವಾಣಿ, ಲಚ್ಚಣ್ಣ ಕಿನ್ನಾಳ ಶಾಸ್ತ್ರೀಯ ಸಂಗೀತ,ಶ್ರೀಮತಿ ಶ್ವೇತಾ ಸುಂಕರ್ಣಿ ಗದಗ ಕಥಕ್ ನೃತ್ಯ ಪಾಲ್ಗೊಳ್ಳುವರು ಎಂದು ಶಾರದಾ ಸಂಗೀತ ಕಲಾ ಶಿಕ್ಷಣ ಸಂಸ್ಥೆಯ ಲಚ್ಚಣ್ಣ ಕಿನ್ನಾಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
