June 2, 2026
IMG_20260525_170020

ಕೊಪ್ಪಳ: ಭೂಮಿ ಕಳೆದುಕೊಂಡ ನಿರಾಶ್ರಿತ ರೈತರ ಒಕ್ಕೂಟದಿಂದ ರೈತರು ಮತ್ತು ರೈತರ ಮಕ್ಕಳಿಂದ ಸತ್ಯಾಗ್ರಹ ಹಮ್ಮಿಕೊಂಡು ಬಲ್ದೋಟ ಕಾರ್ಖಾನೆ ಸ್ಥಾಪಿಸಿ ಇಲ್ಲವೇ ಸರ್ಕಾರಿ ನೌಕರಿ ಕೊಡಿ ಎಂದು ಆಗ್ರಹಿಸಿ ತಹಶೀಲ್ದಾರ್ ಕಚೇರಿ ಆವಣದಲ್ಲಿ 172 ನೇ ದಿನದ ಅನಿರ್ಧಿಷ್ಟಾವಧಿ ಧರಣಿ ಮುಂದುವರೆದಿದೆ.
  ರೈತ ಮುಖಂಡರಾದ ಸ್ವಾಮಿ ಹಾಲವರ್ತಿ ಮಾತನಾಡಿ 20 ವರ್ಷದ ಹಿಂದೆ ಸರ್ಕಾರ ನಮ್ಮ ಜಮೀನನ್ನು ಒತ್ತಾಯ ಪೂರಕವಾಗಿ ತೆಗೆದುಕೊಂಡು ಬಲ್ದೋಟ ಕಂಪನಿ ಗೆ ಲೀಸ್, ಅಗ್ರಿಮೆಂಟ್ ಮಾಡಿಕೊಟ್ಟಿದೆ. ಇನ್ನುವರೆಗೂ ಕಾರ್ಖಾನೆ ಸ್ಥಾಪನೆಯಾಗಿಲ್ಲ ರೈತ ಕುಟುಂಬಗಳಿಗೆ ಉದ್ಯೋಗ ಕೊಡುವುದಾಗಿ ನಂಬಿಸಿದ್ದರು ಇತ್ತ ಕಾರ್ಖಾನೆಯೂ ಇಲ್ಲ ಭೂಮಿಯು ಇಲ್ಲ ಉದ್ಯೋಗವಿಲ್ಲದೆ ರೈತರ ಬದುಕು ಚಿಂತಾಜನಕವಾಗಿದೆ ಸರ್ಕಾರ ನಮಗೆ ಅನ್ಯಾಯ ಮಾಡಿದೆ ಈಗ ಕಾರ್ಖಾನೆ ಸ್ಥಾಪನೆ ಆಗುವ ಸಂದರ್ಭದಲ್ಲಿ ಕಾರ್ಖಾನೆಯನ್ನು ಸ್ಥಾಪನೆ ಮಾಡುತ್ತಿಲ್ಲ ಉನ್ನತ ತಂತ್ರಜ್ಞಾನವನ್ನು ಉಪಯೋಗಿಸಿ ಕಾರ್ಖಾನೆಯನ್ನು ಸ್ಥಾಪನೆ ಮಾಡಲೇಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಪ್ರಾಣೇಶ್ ಹಾಲವರ್ತಿ, ಮನೋಜ ಹಾಲವರ್ತಿ,ಹನುಮೇಶ್ ಹಾಲವರ್ತಿ, ಮುಖಂಡರು ಭೂಮಿ ಕಳೆದುಕೊಂಡ ರೈತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *