ಕೊಪ್ಪಳ : ಕ್ರಿಕೆಟ್ ಪಂದ್ಯಾವಳಿಯನ್ನು ಗ್ರಾಮದ ಎಲ್ಲಾ ಯುವಕರ ಸಹಕಾರದಿಂದ ಆಯೋಜಿಸಿ ಯಶಸ್ವಿಗೊಳಿಸಿದ್ದಾರೆ ಎಂದು ಕೆಪಿಸಿಸಿ ಸಂಯೋಜಕ ಹಾಗೂ ಕೆಎಂಎಸ್ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ.ಕೆ.ಎಂ.ಸೈಯದ್ ಹೇಳಿದರು.
ಅವರು ತಾಲೂಕಿನ ಹಳೇ ಬಂಡಿ ಹರ್ಲಾಪುರ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಎಚ್‌ಪಿಎಲ್ ಸೀಸನ್ 1 ರ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು ಕ್ರಿಕೆಟ್ ಇಂದು ಗ್ರಾಮೀಣ ಮಟ್ಟದ ಯುವಕರ ನೆಚ್ಚಿನ ಆಟವಾಗಿದೆ
ಕ್ರಿಕೆಟ್ ಇಂದು ಜಗತ್ತಿನಲ್ಲಿ ಪ್ರಸಿದ್ಧವಾದ ಆಟವಾಗಿದೆ ಕ್ರಿಕೆಟ್ ಆಟದಲ್ಲಿ ಕ್ರೀಡಾಪಟುಗಳು ಪಾಲ್ಗೊಂಡು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಎಂದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರು, ಹಳೇ ಬಂಡಿ ಹರ್ಲಾಪುರ ಗ್ರಾಮದ ಎಲ್ಲಾ ಕ್ರಿಕೆಟ್ ಅಭಿಮಾನಿಗಳು ಭಾಗವಸಿದ್ದರು.
