June 2, 2026
IMG-20260525-WA0027(1)
ಕೊಪ್ಪಳ : ಜಿಲ್ಲೆಯ ಕುಕುನೂರು ತಾಲೂಕಿನ ಮಂಗಳೂರು ರೈತ ಸಂಪರ್ಕ ಕೇಂದ್ರದ  ಆವರಣದಲ್ಲಿ  ನಡೆದ ಬೀಜೋಪಚಾರ ಆಂದೋಲನ ಮತ್ತು ಕೀಟನಾಶಕಗಳ ಸುರಕ್ಷಿತ ಬಳಕೆ ಕುರಿತಾದ ಪ್ರಾತ್ಯಕ್ಷಿಕೆ ಜರುಗಿತು.
  ಕೃಷಿ ಅಧಿಕಾರಿಗಳಾದ ನಿಂಗಪ್ಪ ಹಿರೇಹಾಳ ಮಾತನಾಡಿ ಬೆಳೆಗಳಿಗೆ ಸೂಕ್ತ ರೀತಿಯಲ್ಲಿ ಕೀಟ ನಾಶಕ ಬಳಕೆ ಮಾಡುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದು’ ಎಂದರು
ಕೃಷಿ ಅಧಿಕಾರಿ ಶಿವಾನಂದ ಮಳಗಿ  ಮಾತನಾಡಿ, ‘ಹೆಸರು ಕಡಿಮೆ ಅವಧಿಯ ದ್ವಿದಳ ಧಾನ್ಯದ ಬೆಳೆಯಾಗಿದೆ. ತಾಲ್ಲೂಕಿನಲ್ಲಿ ಅತಿ ಹೆಚ್ಚು ರೈತರು ಬೆಳೆಯುವುದರಿಂದ ಬಿತ್ತನೆ ಮಾಡುವಾಗ ಒಂದು ಕೆ.ಜಿ. ಬೀಜಕ್ಕೆ 4 ಗ್ರಾಂ ಟ್ರೈಕೋಡ್ರೋಮಾ ಲೇಪನ ಮಾಡಬೇಕು. ಒಂದು ಎಕರೆ ಬೀಜಕ್ಕೆ 200 ಗ್ರಾಂ ರೈಜೋಬಿಯಂ, 500 ಗ್ರಾಂ ರಂಜಕ ಕರಗಿಸುವ ಗೊಬ್ಬರದ ಜೊತೆಗೆ ಬೆರೆಸಿ ಬಿತ್ತನೆ ಮಾಡಬೇಕು’ ಎಂದರು.
40 ದಿನದ ಬೆಳೆಯಾದ ನಂತರ ಎರಡು ಬಾರಿ ಅಂತರ ಬೇಸಾಯ ಮಾಡಿ ಕಳೆ ನಿಯಂತ್ರಣ ಮಾಡಬೇಕು. ಭೂಮಿಯಲ್ಲಿ ತೇವಾಂಶ ಕಾಪಾಡಿಕೊಂಡು ಹೋಗಲು ಎಡೆ ಕುಂಟಿ ಹೊಡೆಯಬೇಕು’ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಚನ್ನಬಸವನಗೌಡ. ಸಿಬ್ಬಂದಿ ವೀರೇಶ್ ಹಳ್ಳಿಕೇರಿ. ಗವಿಸಿದ್ದಪ್ಪ ವಾಲಿ. ನವೀನ್. ಆನಂದ್. ರೈತರದಾ ಯಮನೂರಪ್ಪ ಮಳೆಕೊಪ್ಪ. ಸಕ್ರಪ್ಪ ಚಿನ್ನೂರ್. ಮುದಿಯಪ್ಪ ಚಿಗರಿ. ಸೋಮಪ್ಪ ಸಣ್ಣಹಳ್ಳಿಇತರ ರೈತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *