ಕೊಪ್ಪಳ: ಕೊಪ್ಪಳದ ತಹಸಿಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರಿಗಾಗಿ ಇರುವ ಕುಡಿಯುವ ನೀರಿನ ವ್ಯವಸ್ಥೆ ಸರಿ ಇಲ್ಲದ ಕಾರಣ ಸಾರ್ವಜನಿಕರಿಗೆ ತುಂಬಾ ತೊಂದರೆ ಉಂಟಾಗಿದೆ.
ಹಾಗಾಗಿ ಈ ಕೂಡಲೇ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸರಿಪಡಿಸಿದಿದ್ದರೆ ಕೂಡಲೇ ಸಂಬಂಧಪಟ್ಟವರ ಮೇಲೆ ಕ್ರಮ ಜರುಗಿಸಬೇಕು ಎಂದು ನಮ್ಮ ಜೈ ಕರುನಾಡು ರಕ್ಷಣಾ ಸೇನೆ ಸಂಘಟನೆ ವತಿಯಿಂದ ಆಗ್ರಹಿಸಿದೆ.
ಸುಮಾರು 2-3 ತಿಂಗಳಿನಿಂದ ಈ ಕುಡಿಯುವ ನೀರಿನ ಸಮಸ್ಯೆ ಸೃಷ್ಟಿಯಾಗಿದೆ ಸಂಬಂಧ ಪಟ್ಟ ಅಧಿಕಾರಿಗಳು ಕಂಡರು ಕಾಣದಂತೆ ವರ್ತಿಸುತ್ತಿದ್ದಾರೆ. ಕಚೇರಿಗೆ ಬರತಕ್ಕಂತಹ ಸಾರ್ವಜನಿಕರಿಗೆ ಬೇಸಿಗೆ (ಬಿಸಿಲು) ಬಹಳ ಇರುವ ಕಾರಣ ಅಲ್ಲಿ ಬರತಕ್ಕಂತ ರೈತರಿಗೆ ಮತ್ತು ಸಾರ್ವಜನಿಕರಿಗೆ ಶುದ್ಧೀಕರಣವಾದ ನೀರು ಕೂಡ ಇಲ್ಲ ಜಿಲ್ಲಾ ತಹಶೀಲ್ದಾರ್ ಕಚೇರಿಯಲ್ಲಿ, ಇದು ಹಳ್ಳಿಗರ ನೋವು ಜಿಲ್ಲಾ ಕೇಂದ್ರದ ಕಚೇರಿಗೆ ಏನು ಗೊತ್ತಾಗ್ತಿಲ್ಲ. ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಮತ್ತು ತಹಶೀಲ್ದಾರ್ ಸರಿಪಡಿಸುವ ಕೆಲಸ ಮಾಡಲೇಬೇಕು ಹಾಗೂ ತಹಸಿಲ್ದಾರ್ ಸ್ವಚ್ಛತೆ ಇರುವುದಿಲ್ಲ ಎಂದು ಜೈ ಕರುನಾಡು ರಕ್ಷಣಾ ಸೇನೆ ಕೊಪ್ಪಳ ಜಿಲ್ಲೆಯ ಜಿಲ್ಲಾ ಉಪಾಧ್ಯಕ್ಷ ಸ್ವಾಮಿ ಹಾಲವರ್ತಿ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.