ಕೊಪ್ಪಳ: ತಾಲೂಕಿನ ಗಿಣಿಗೇರಿ ಗ್ರಾಮದಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತೋತ್ಸವ ಅಂಗವಾಗಿ ದಿನಾಂಕ 20 ರಂದು ಜಗಜ್ಯೋತಿ ಬಸವೇಶ್ವರ ವೃತ್ತ. ಅಮ್ಮ ಹೋಟೆಲ್ ಹತ್ತಿರ ಬೆಳಿಗ್ಗೆ 9 ಗಂಟೆಗೆ ಶ್ರೀ ಬಸವೇಶ್ವರ ಪ್ರತಿಮೆಗೆ ಪೂಜಾ ಹಾಗೂ ಪುಷ್ಪಾರ್ಪಣೆ ಕಾರ್ಯಕ್ರಮ ಜರುಗುವುದು.

ನಂತರ ಬೆಳಿಗ್ಗೆ 10 ಗಂಟೆಗೆ ವಚನ ಸಂಗೀತ ಕಾರ್ಯಕ್ರಮದಲ್ಲಿ ಆರ್ ಕೆ ಡಿ ಸಿ ಸಿ ಬ್ಯಾಂಕ್ ನಿರ್ದೇಶಕ, ಸಹಕಾರಿ ಧುರೀಣರಾದ ಶರಣಪ್ಪ ಹ್ಯಾಟಿ ಇವರಿಂದ ಬಸವಣ್ಣನವರ ವಚನ ಸುಧೆ ಪುಸ್ತಕಗಳ ವಿತರಣೆ ಮಾಡುವರು,ಬೆಳಿಗ್ಗೆ 11 ಗಂಟೆಗೆ ಕೊಪ್ಪಳ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಕುಮಾರ್ ಕುಕುನೂರ್ ಇವರಿಂದ ಬಸವ ಜಗತ್ತು, ಅಮರೇಶ ಗಡಿ ಹಳ್ಳಿ. ಪ್ರಗತಿ ಪರ ರೈತರು ಬಸವಣ್ಣನವರ ಜೀವನ ಮೌಲ್ಯಗಳು ಕುರಿತು ಪ್ರವಚನ ಮದ್ಯಾಹ್ನ ಪ್ರಸಾದ ವಿತರಣೆ.
ಈ ಕಾರ್ಯಕ್ರಮಕ್ಕೆ ಗ್ರಾಮದ ಎಲ್ಲಾ ಗುರು ಹಿರಿಯರಿಗೂ, ಜನ ಪ್ರತಿನಿಧಿಗಳಿಗೂ, ಜನ ಪ್ರತಿನಿಧಿಗಳಿಗೂ, ವಿವಿಧ ಸಂಘ ಸಂಸ್ಥೆಯ ಪಧಾಧಿಕಾರಿಗಳು ಗಿಣಿಗೇರಿ – ಕನಕಪುರ ಗ್ರಾಮದ ಭಕ್ತಾದಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
