April 18, 2026
IMG_20260403_162758

ಕೊಪ್ಪಳ: ಮಾಹಿತಿ ಸಂಗ್ರಹಿಸಲು ಗಣತಿದಾರರು ಮನೆಗೆ ಬಂದಾಗ ಸಾರ್ವಜನಿಕರು ನೈಜ ಮಾಹಿತಿ ನೀಡಿ ಸಹಕರಿಸುವಂತೆ ಭಾಗ್ಯನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ರಮೇಶ್ ಹ್ಯಾಟಿ ಮನವಿ ಮಾಡಿದರು.
 ಅವರು ಶುಕ್ರವಾರದಂದು ಭಾಗ್ಯನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜನಗಣತಿ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಜನಗಣತಿಯು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಕೌಟುಂಬಿಕ ಮತ್ತು ಗೃಹ ಹೀಗೆ ಅನೇಕ ದತ್ತಾಂಶಗಳನ್ನು ಒಂದೇ ಸೂರಿನಲ್ಲಿ ದಾಖಲಿಸುವುದು, ಜನಗಣತಿ, ನಮ್ಮ ದೇಶದ ಅಭಿವೃದ್ಧಿ ಜನಗಣತಿ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಅವರು ಭಾಗ್ಯನಗರ ಪಟ್ಟಣ ಪಂಚಾಯಿತಿಯಿಂದ ಜನಗಣತಿ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶ್ರೀನಿವಾಸ್ ಗುಪ್ತಾ ಮಾತನಾಡಿ ಗಣತಿದಾರರಿಗೆ ಸರಿಯಾದ ಮಾಹಿತಿಯನ್ನು ಒದಗಿಸಿ ದೇಶದ ಅಭಿವೃದ್ಧಿಗೆ ಸಾರ್ವಜನಿಕರು ಸಹಕರಿಸಿ, ಕೇಂದ್ರ ಸರ್ಕಾರ 2027ರ ಜನಗಣತಿಯನ್ನು ನಡೆಸಲು ಅಧಿಸೂಚನೆ ಹೊರಡಿಸಿದ್ದು ಶಿಕ್ಷಕ ವೃಂದ ಮನೆ ಮನೆಗೆ ತೆರಳಿ ಮಾಹಿತಿಯನ್ನು ಸಂಗ್ರಹಿಸಿ ಜನಗಣತಿ ಕಾರ್ಯವನ್ನು ಯಶಸ್ವಿಗೊಳಿಸುವಂತೆ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಪಟ್ಟಣ ಪಂಚಾಯಿತಿ ಸದಸ್ಯ ಪರಶುರಾಮ್ ನಾಯಕ ಮಾತನಾಡಿ ಜನಗಣತಿ ಮಾಹಿತಿ ಸಂಗ್ರಹಿಸಲು ಶಿಕ್ಷಕರು ಅತ್ಯಂತ ಉತ್ಸಾಹಕರಾಗಿ ತರಬೇತಿಯಲ್ಲಿ ಪಾಲ್ಗೊಂಡಿದ್ದು ಸಾರ್ವಜನಿಕರು ಗಣತಿದಾರರು ಮನೆಗೆ ಬಂದಾಗ ನೈಜ ಮಾಹಿತಿಯನ್ನು ಒದಗಿಸಿ ಜನಗಣತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ತಿಳಿಸಿದರು.
‌‌ ಈ ಸಂದರ್ಭದಲ್ಲಿ ಭಾಗ್ಯನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುರೇಶ್ ಬಬಲಾದ. ಕ್ಷೇತ್ರ ತರಬೇತುದಾರರಾದ ಮಂಜುನಾಥ ತಿಮ್ಮಕ್ಕನವರ್, ಸುನಿಲ್ ಕುಮಾರ್, ಹಾಗೂ ಪಟ್ಟಣ ಪಂಚಾಯತ್ ಸಿಬ್ಬಂದಿಯವರು ಹಾಗೂ ಗಣತಿದಾರರು ಮೇಲ್ವಿಚಾರರಕರು. ತರಬೇತಿಯಲ್ಲಿ ಭಾಗವಹಿಸಿದ್ದರು

Leave a Reply

Your email address will not be published. Required fields are marked *