ಕೊಪ್ಪಳ : ಛಲವಾದಿ ಸಮಾಜ ವಧು-ವರರ ಸಮ್ಮೇಳನವು ಕೇವಲ ಮದುವೆ ಸಂಬಂಧಗಳಿಗಾಗಿ ಮಾತ್ರವಲ್ಲ, ಸಮಾಜದ ಒಗ್ಗಟ್ಟಿನ ಮತ್ತು ಪ್ರಗತಿಯ ಪ್ರಮುಖ ವೇದಿಕೆಯಾಗಬೇಕು,ಇಂತಹ ಸಮ್ಮೇಳನಗಳಲ್ಲಿ ಛಲವಾದಿ ಸಮಾಜ ಜಾಗೃತಗೊಳ್ಳುವುದು ಬಹಳ ಮುಖ್ಯ ಎಂದು ನೀರಾವರಿ ಇಲಾಖೆಯ ನಿವೃತ್ತ ಪ್ರಧಾನ ಕಾರ್ಯದರ್ಶಿ ಆರ್.ರುದ್ರಯ್ಯ ಹೇಳಿದರು.
ಅವರು ನಗರದ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಛಲವಾದಿ ವಧು ವರರ ಸಮ್ಮೇಳನದ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿ ಮಾತನಾಡಿ ಶಿಕ್ಷಣದ ಮಹತ್ವವನ್ನು ಅರಿತು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಒದಗಿಸುವುದು
ಸಾಮಾಜಿಕ ಏಕತೆ ಮತ್ತು ಪರಸ್ಪರ ಸಹಕಾರವನ್ನು ಬೆಳೆಸುವುದು ಉದ್ಯೋಗ, ಸ್ವ ಉದ್ಯಮ ಮತ್ತು ಆರ್ಥಿಕ ಸ್ವಾವಲಂಬನೆ ಕಡೆ ಗಮನ ಹರಿಸುವುದು
ಯುವಜನತೆಗೆ ಸರಿಯಾದ ದಾರಿ ತೋರಿಸುವುದು ಈ ರೀತಿಯ ಸಮ್ಮೇಳನಗಳನ್ನು ಸಮಾಜದ ಅಭಿವೃದ್ಧಿಗೆ ದಿಕ್ಕು ತೋರಿಸುವ ಶಕ್ತಿಯುತ ವೇದಿಕೆಗಳಾಗಬಹುದು ಎಲ್ಲರೂ ಒಂದಾಗಿ ಚಿಂತನೆ ಮಾಡಿ ಕಾರ್ಯಪ್ರವೃತ್ತರಾದರೆ ಛಲವಾದಿ ಸಮಾಜವು ಇನ್ನಷ್ಟುಮುಂದುವರೆಯಬಹುದು, ತಂದೆ ತಾಯಿಗಳು ಆಸ್ತಿ ಅಂತಸ್ತು ಎಂದು ನೋಡಿಕೊಂಡು ಕುಳಿತುಕೊಳ್ಳದೆ ಸರಳ ಉತ್ತಮ ವ್ಯಕ್ತಿತ್ವವನ್ನು ಯಾವುದೇ ವೃತ್ತಿ ಮಾಡುವರಿಗೆ ಕನ್ಯಾ ವರವನ್ನು ಕೊಟ್ಟು ಸಂಬಂಧ ಬೆಳೆಸಿ ಎಂದು ಹೇಳಿದರು.
ವಧು ವರರ ಸಮ್ಮೇಳನದ ಉದ್ಘಾಟನೆಯನ್ನು ಅರವಿಂದ ಗಟ್ಟಿಯವರು ನೆರವೇರಿಸಿದರು, ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆಯನ್ನು ಕೆಜಿಎಫ್ ಮಾಜಿ ಶಾಸಕ ವೈ. ಸಂಪಂಗಿ ನೆರವೇರಿಸಿದರು. ಸಮ್ಮೇಳನದ ಅಧ್ಯಕ್ಷತೆಯನ್ನು ಗವಿಸಿದ್ದಪ್ಪ ಬೆಲ್ಲದ ವಹಿಸಿಕೊಂಡಿದ್ದರು.
ಈ ಸಂದರ್ಭದಲ್ಲಿ ವೇದಿಕೆ ಮೇಲೆ ಚಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಸಿದ್ದಣ್ಣ ಮ್ಯಾಗೇರಿ, ಮಾಜಿ ನಗರಸಭೆ ರಾಧ ಕನಕಮೂರ್ತಿ ಚಲವಾದಿ, ಪಟ್ಟಣ ಪಂಚಾಯತಿ ಸದಸ್ಯರಾದ ಸರಸ್ವತಿ ಇಟ್ಟಂಗಿ,ಚಲವಾದಿ ಚಿಂತಕರ ವೇದಿಕೆಯ ಜಿಲ್ಲಾಧ್ಯಕ್ಷರಾದ ಸೋಮಣ್ಣ ಚಲವಾದಿ, ಚಲವಾದಿ ಸಮಾಜದ ಮುಖಂಡರಾದ ಕೃಷ್ಣ ಇಟ್ಟಂಗಿ, ಕನಕ ಮೂರ್ತಿ ಚಲವಾದಿ, ಸಣ್ಣ ಕನಕಪ್ಪ ಚಲವಾದಿ, ಛತ್ರಪ್ಪ ಚಲವಾದಿ, ಅನಿಲ್ ಕುಮಾರ್ ಬ್ಯಾಗರ್, ನಿಂಗಪ್ಪ ಕಾಳೆ, ಹನುಮಂತಪ್ಪ ಚಲವಾದಿ, ರಾಘು ಚಲವಾದಿ, ಕಾಶಪ್ಪ ಚಲವಾದಿ, ಸುರೇಶ್ ಬಳಗಾನೂರು, ಶ್ರೀಧರ್ ಬನ್ನಿಕೊಪ್ಪ, ಮಂಜು ದೊಡ್ಡಮನಿ, ಮಾರ್ಕಂಡಪ್ಪ ಬೆಲ್ಲದ, ಲಕ್ಷ್ಮಣ ಕಾಳೆ. ಚಲವಾದಿ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.
