ಗವಿಮಠದಲ್ಲಿ ಪಂಚಾಂಗ ಪಠಣ : ಈ ವರ್ಷ ಉತ್ತಮ ಮಳೆ, ಬೆಳೆ, ಬೆಲೆ ಹೆಚ್ಚಳ
ಕೊಪ್ಪಳ: ಕೊಪ್ಪಳದ ಗವಿಮಠದಲ್ಲಿ ಪ್ರತಿ ವರ್ಷ ಯುಗಾದಿ ಪಾಡ್ಯದಂದು ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಸಮ್ಮುಖದಲ್ಲಿ ಪಂಚಾಂಗವನ್ನು ಶ್ರೀ ಸಂಸ್ಥಾನ ಗವಿಮಠದ ಜ್ಯೋತಿಷ್ಯರಾದ ಶ್ರೀ ವೆ.ಮೂ.ರುದ್ರಯ್ಯಸ್ವಾಮಿ. ವಿ. ಚೆನ್ನವಡೆಯರ ಮಠ ಅವರು ಭಕ್ತಾದಿಗಳು, ಸಾರ್ವಜನಿಕರಿಗೆ ಈ ವರ್ಷದಲ್ಲಿ ನಡೆಯುವ ಆಗು ಹೋಗುಗಳನ್ನು ಪಠಣಿಸುತ್ತಾರೆ.
ಈ ವರ್ಷದ ಮಳೆ ಫಲವು
ಮೇಘಾರಾಜನು ಭಾರತದೇಶದಲ್ಲಿ ಸಮೃದ್ದೀಯಾಗಿ ಮಳೆ ಸುರಿಸುವನು ಹಿಮಾಚಲ ಪ್ರದೇಶದಿಂದ ಗಂಗಾನದಿಯವರೆಗೆ ವಿಂಧ್ಯಪರ್ವತದಿಂದ ಸಾಧಾರಣಮಳೆಯು ಉತ್ತಮ ಮಳೆಯು ಹಿಮಾಚಲದಿಂದ ಕೃಷ್ಣಾನದಿಯವರೆಗೆ ಹಾಗೂ ಉತ್ತರ ಭಾಗ ಪ್ರದೇಶದಲ್ಲಿ ಅತಿವೃಷ್ಟಿಯು ವಿಂಧ ಪರ್ವತದಿಂದ ಗೋದಾವರಿ ನದಿಯುವರೆಗೆ ಹಾಗೂ ಸುತ್ತಮುತ್ತ ಪ್ರದೇಶದವರೆಗೆ ಅತಿವೃಷ್ಟಿಯು ಹಿಮಾಚಲದಿಂದ ಗೋದಾವರಿ ರಾಮೇಶ್ವರಂ ಸುತ್ತಮುತ್ತಲಿನ ಪ್ರದೇಶ ಹಾಗೂ ದೇಶದ ದಕ್ಷಿಣ ಹಾಗೂ ಉತ್ತರ ಭಾಗಗಳಲ್ಲಿ ಸುವೃಷ್ಠಿಯು, ಪಶ್ಚಿಮ ಭಾಗಗಳಲ್ಲಿ ಸಾಧಾರಣ ಮಳೆಯಾಗುವುದು ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡು, ದೆಹಲಿ, ಮಧ್ಯಪ್ರದೇಶ, ಉತ್ತರಪ್ರದೇಶ, ಹಾಗೂ ಮಹಾರಾಷ್ಟ್ರ, ಅತಿವೃಷ್ಟಿ ಸಂಭವಿಸುವುದು ಹಾಗೂ ಅತಿವೃಷ್ಟಿಯಿಂದ ಭೂಕಂಪ ಗುಡ್ಡ ಕುಸಿತ ಹೆಚ್ಚಾಗುವುದು.ಬಿಸಿಲಿನ ತಾಪಮಾನ ಹೇಚ್ಚಾಗುವುದು ಜನರು ಹೆಚ್ಚರದಿಂದ ಇರಬೇಕು ಹಾಗೂ ದೇಶದಲ್ಲಿ ಯುದ್ಧದ ಭೀತಿ ಇರುತ್ತದೆ. ಈ ಸಂವತ್ಸರದಲ್ಲಿ 2 ಪಟ್ಟು ಮಳೆ 4ಪಟ್ಟು ಗಾಳಿಬೀಸುವುದು ಹಾಗೂ ತಮೀಳುನಾಡು ಕೇರಳ ಪಶ್ಚಿಮಬಂಗಾಳ ಓರಿಸ್ಸಾ ಮಹಾರಾಷ್ಟ್ರಕ್ಕೆ ಚಂಡಮಾರುತ ಬೀಸುವುದು.
ಮಳೆಯಿಂದ ಉತ್ತಮವಾಗಿ ಬೆಳೆದ ಬೆಳೆಯ ಫಲಗಳು :
ಈ ಸಂವತ್ಸರದಲ್ಲಿ ದೇಶದೊಳಗೆ ಉತ್ತಮ ಮಳೆ ಆಗುವುದರಿಂದ ಎಲ್ಲಾ ಬೆಳೆಗಳು ಉತ್ತಮವಾಗಿ ಬೆಳೆಯುವವು ಜೋಳ, ಗೋದಿ, ಗೋವಿನಜೋಳ, ಭತ್ತ, ರಾಗಿ, ಸಜ್ಜಿ, ಕಡಲೆ, ಉದ್ದು, ತೋಗರಿ, ಅವರೆ, ಹೆಸರು, ಅಲಸಂದಿ, ಮಡಕಿ, ಎಳ್ಳು, ಗುರೇಳು, ಔಡಲ, ಕುಸುಬಿ, ಹತ್ತಿ, ಮತ್ತು ಎಣ್ಣೆ ಕಾಳುಗಳು ಹಾಗೂ ಶೇಂಗಾ, ಸೂರ್ಯಾಪಾನ, ಹತ್ತಿಕಾಳು, ಬೇನುಬಿಜಾ ತೇಜಿಯಾಗಿ ಮಾರುವವು ಮತ್ತು ಉದ್ದು ಉರುಳಿ ನೆವಣಿ ಆರ್ಕ ಸಜ್ಜಿ ಎಳ್ಳು ತೇಜಿಯಾಗಿ ಮಾರುವವು ಈ ಎಲ್ಲಾ ಬೆಳೆಗಳು ಚೆನ್ನಾಗಿ ಬೆಳೆಯುವವು ಮಳೆ ಉತ್ತಮವಾಗಿರುವುದರಿಂದಕೆರೆ, ಬಾವಿ, ಕಾಲುವೆ, ಹಳ್ಳಗಳು,ನೀರಿನಿಂದ ತುಂಬಿತುಳಕಾಡುವವು ಗೋಮಹಿಷಾಧಿಗಳು ಹಾಲು, ತುಪ್ಪ, ಬೆಣ್ಣೆ, ಅಧಿಕವಾಗಿ ದೊರೆಯುವುದು.
ಮೆಣಸು ಏಲಕ್ಕಿ, ಗೋಡಂಬಿ ಉತ್ತಮವಾಗಿಪಲಿಸುವವು ಬಾಳೆ, ಮಾವು, ದ್ರಾಕ್ಷಿ, ಮೊಸಂಬಿ, ಕಿತ್ತಳೆ, ನಿಂಬೆ, ತೆಂಗು, ಸಾಕಷ್ಟು ಉತ್ತಮ ಫಲ ಕೊಡುವುದು. ಸೇವಂತಿ ಮಲ್ಲಿಗೆ ಗುಲಾಬಿ ಕನಕಾಂಬರ ದಾಸವಾಳ ಮೊದಲಾದ ಪುಷ್ಪಗಳು ಅಧಿಕ ಫಲಿಸುವವು
ಬೆಲೆ ಹೆಚ್ಚಳ
ಈ ಸಮವತ್ಸರದಲ್ಲಿ ಜೋಳ ಗೋದಿ ಜವೆ ಗೋಧಿ, ಗೋವಿನಜೋಳ, ಬತ್ತ, ಸಾವಿ, ರಾಗಿ ಹತ್ತಿ ಬೀಜಗಳು ತೇಜಿಯಾಗುವವು. ಅಗಸಿ, ಕುಸಬಿ, ಸೂರ್ಯಪಾನಬೀಜ, ಔಡಲ, ಸಾಧ್ಯ. ಮೊದಲಾದ ಎಣ್ಣೆ ಕಾಳುಗಳು ಬೆಲೆಯಲ್ಲಿ ಹೆಚ್ಚಳವು. ಜೀರಿಗೆ ಸಾನ್ನಿ ಅರಿಶಿಣ ಪತ್ರಿ ಚಕ್ಕೆ ದ್ರಾಕ್ಷಿ ಗೋಡಂಬಿ ಕೇರಬೀಜಾ ಮೊಗ್ಗು ಮುಂತಾದ ಮಸಾಲೆಯ ಪದಾರ್ತಗಳು ತುಟ್ಟಿಯಾಗುವವು ಬೆಣ್ಣೆ, ತುಪ್ಪ ಜೇನುತುಪ್ಪ ಕಬ್ಬು ಬೆಲ್ಲ ಸಕ್ಕರೆ ಹಾಲು ಮೊಸರು ಮುಂತಾದವುಗಳು ಸಮಾಧಾರಣೆಯಲ್ಲಿ ಮಾರಾಟವು. ಬೆಳ್ಳಿ ಬಂಗಾರ, ಮುತ್ತು, ರತ್ನ, ವಜ್ರ ತಾಮ್ರ ಹಿತ್ತಾಳಿ ಕಂಚು ಧಾತುಗಳ ಬೆಲೆಯೂ ಗಗನಕ್ಕೆರುವವು, ನೂಲು ರೇಷ್ಮೆಸೀರೆ ಮಡಿ ಪೀತಾಂಬರಗಳು ಬಿಳಿಯ ಬಟ್ಟೆಗಳು ಬಿಳಿಯ ಬಣ್ಣದ ವಸ್ತುಗಳು ತೇಜಿಯಾಗುವವು ಪೆಟ್ರೋಲ್, ಡೀಸೆಲ ದಾರಣೆಯಲ್ಲಿ ಭಾರಿ ಏರಿಳಿತ ಕಂಡುಬರುವುದು ಸೈಕಲ್ ಮೋಟಾರ್ ಸೈಕಲ್ ಕಾರು ಲಾರಿ ಬಸ್ಸು ಮೊದಲಾದ ವಾಹನಗಳು ಮತ್ತು ಸರ್ವ ವಾಹನಗಳ ಬಿಡಿ ಭಾಗಗಳು ತೇಜಿಯಾಗುವವು ಕಬ್ಬಿಣ ಸೀಸ ತವರ ಉಕ್ಕು ಸಮಧಾರಣೆಯಲ್ಲಿ ಮಾರಾಟವು ಉಸುಗು ಇಟ್ಟಿಗೆ ಸಿಮೆಂಟ್, ತಗಡು ಮತ್ತಿ, ನಂದಿ ಹೆದ್ದೇಗು ಮೊದಲಾದ ಕಟ್ಟಿಗೆಗಳು ಗೃಹ ಉಪಯೋಗಿ ವಸ್ತುಗಳು, ಕಂಪ್ಯುಟರ್, ಎಲೆಕ್ಟ್ರೀಕಲ್ ವಸ್ತುಗಳು ತುಟ್ಟಿಯಾಗುವವು
ಶ್ರೀ ಶಾಲಿವಾಹನ ಶಕೆ 1948 ಪರಾಭವ ನಾಮ ಸಂವತ್ಸರವು ಸೇನಾಧಿಪತಿಯು ಚಂದ್ರನಾಗಿರುವುದರಿಂದ ಸೇನೆಯು ವ್ಯವಸ್ಥಿತ ರೀತಿ ಇಂದಿರುವುದು ದೇಶದ ಸೈನ್ಯ ಬಲವು ಅಧಿಕವಾಗುವುದು ಮಿಲಿಟರಿ ಸೈನಿಕರು ದೇಶ ರಕ್ಷಣೆಯ ಕಾರ್ಯ ಕೈಗೊಳ್ಳುವರು. ದೇಶದೊಳು ಸುಖ ಸುಭಿಕ್ಷಗಳು ಉಂಟಾಗುವವು ದೇಶದೊಳು ರಾಜಕಾರಣಿಗಳು ರಾಜ್ಯ ಪರಿಪಾಲನೆ ಮಾಡುವರು ದೇಶದ ಮತ್ತು ಎಲ್ಲಾ ಪ್ರಜೆಗಳು ಸುಖ ಸಂತೋಷದಿಂದ ಇರುವರು.
ಈ ಸಂವತ್ಸರದಲ್ಲಿ ಹೊಸ ಮಳೆಯ ಪ್ರಾರಂಭವೂ ದಿನಾಂಕ 14-4-2026 ರಂದು ಮಂಗಳವಾರ ಅಶ್ವಿನಿ ಹೊಸ ಮಳೆ ಕಲೆಯಿವುದು. ಈ ಸಂವತ್ಸರದಲ್ಲಿ ಜೇಷ್ಠ ಮಾಸ ಅಧಿಕಮಾಸವಾಗಿರುತ್ತದೆ
ದೇಶದ ಜನರಿಗೆ ಒಳ್ಳೆ ಮಳೆ ಬೆಳೆ ಸಮೃದ್ಧಿ ಆಗುವದು ಈ ಸಂವತ್ಸರದಲ್ಲಿ 2 ಭಾಗ ಮಳೆಯು 2 ಭಾಗ ಗಾಳಿಬೀಸುವುದು.
ಈ ಸಂದರ್ಭದಲ್ಲಿ ಗಣ್ಯರಾದ ಸಿದ್ದಣ್ಣ ನಾಲ್ವಡ, ಪ್ರಭು ಹೆಬ್ಬಾಳ್, ಗವಿಸಿದ್ದಪ್ಪ ಕೊಪ್ಪಳ, ಪರಮೇಶ್ವರಪ್ಪ ಕೊಪ್ಪಳ, ಸಂಜಯ್ ಕೋತ್ಬಾಳ್, ಎಸ್. ಎಂ.ಕಂಬಾಳಿಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
