ಕೊಪ್ಪಳ: ತಾಲೂಕಿನ ಮುನಿರಾಬಾದ್ ಸಮೀಪದ ಬಸಾಪುರ ಹಾಗೂ ಬಂಡಿ ಹರ್ಲಾಪುರ ಗ್ರಾಮಗಳ ನಡುವಿನ 13ನೇ ಮೈಲಿಯ ವ್ಯಾಪ್ತಿಯ ತುಂಗಭದ್ರಾ
ಎಡದಂಡೆ ಮುಖ್ಯ ಕಾಲುವೆ ಒಡೆದ ಸ್ಥಳಕ್ಕೆ ಕೆಪಿಸಿಸಿ ಸಂಯೋಜಕ ಡಾ.ಕೆ.ಎಂ.ಸೈಯದ್ ಭೇಟಿ ನೀಡಿ ಪರಿಶೀಲಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಸಂಸದ ರಾಜಶೇಖರ್ ಹಿಟ್ನಾಳ್, ಶಾಸಕ ರಾಘವೇಂದ್ರ ಹಿಟ್ನಾಳ್, ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ವಿಷಯವನ್ನು ಚರ್ಚಿಸಿ ವಿಷಯ ತಿಳಿಸುವುದಾಗಿ ರೈತರೊಂದಿಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
