ಕೊಪ್ಪಳ: ರಾಜ್ಯಾದ್ಯಂತ ತೆರೆಕಂಡಿರುವ ಭಾರತಿ ಟೀಚರ್ ಚಿತ್ರದ ನಾಯಕ ನಟ ರೋಹಿತ್ ರಾಘವೇಂದ್ರ ಅವರು ಮಕ್ಕಳ ಮನಸ್ಸನ್ನು ಗೆದ್ದಿದ್ದಾರೆ.
ಅವರು ಕೊಪ್ಪಳದ ಶ್ರೀ ಶಿವ ಚಿತ್ರಮಂದಿರದಲ್ಲಿ ಪ್ರದರ್ಶನ ಗೊಳ್ಳುತ್ತಿರುವ ಚಿತ್ರಮಂದಿರಕ್ಕೆ ಭೇಟಿ ನೀಡಿದಾಗ ಚಿತ್ರ ವೀಕ್ಷಿಸುತ್ತಿರುವ ಮಕ್ಕಳು ನಾಯಕ ನಟನನ್ನು ಕಂಡು ಖುಷಿಪಟ್ಟರು ಅಭಿಮಾನಕ್ಕೆ ನಾಯಕ ನಟ ರೋಹಿತ್ ರಾಘವೇಂದ್ರ ಅವರ ಕಣ್ಣಲ್ಲಿ ಆನಂದ ಭಾಷ್ಪ ಕಂಡವು.
ಮಕ್ಕಳು ನಾಯಕನಟನಿಗೆ ಚಿತ್ರ ತುಂಬಾ ಸೂಪರ್ ಆಗಿದೆ, ಚೆನ್ನಾಗಿದೆ, ಚಿತ್ರದಲ್ಲಿ ಒಳ್ಳೆಯ ಸಂದೇಶವಿದೆ ಎಂದು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ರಾಜ್ಯದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಅಭಿನಯಿಸಿದ್ದಾರೆ.
ಚಿತ್ರದಲ್ಲಿ ಭಾರತಿ ಎಂಬ ಏಳನೇ ತರಗತಿ ಓದುತ್ತಿರುವ ಹುಡುಗಿಯೊಬ್ಬಳು ತನ್ನ ಊರಿನ ಪ್ರತಿಯೊಬ್ಬರನ್ನು ಸಹ ಕನ್ನಡದಲ್ಲಿ ಓದುವ ಬರೆಯುವ ಹಾಗೆ ಮಾಡುವ ದೃಢ ಸಂಕಲ್ಪ ಮಾಡುತ್ತಾಳೆ ತನ್ನ ಸಂಕಲ್ಪವನ್ನು ಯಾವ ರೀತಿಯಾಗಿ ಎಲ್ಲಾ ಅಡೆ ತಡೆಗಳನ್ನು ಎದುರಿಸಿ ಯಶಸ್ವಿಯಾಗಿ ನೆರವೇರಿಸಿಕೊಳ್ಳುತ್ತಾಳೆ ಎಂಬ ಕಥಾಹಂದರ ಈ ಚಿತ್ರದಲ್ಲಿದೆ. ಹತ್ತಕ್ಕೂ ಹೆಚ್ಚು ಹಾಡುಗಳೊಂದಿಗೆ ಚಿತ್ರವು ಸಂಗೀತಮಯವಾಗಿದೆ. ಚಿತ್ರ ಪ್ರತಿಯೊಬ್ಬ ಮಕ್ಕಳ ಹೃದಯ ಮಿಡಿಯುವಂತಿದೆ. ನೋಡುಗರಿಗೆ ಆಪ್ತವೆನಿಸುವಂತಿದೆ.
ನಾಡಿನ ಪ್ರತಿಯೊಂದು ಮಗುವು ಕೂಡ ಕನಿಷ್ಠ 10 ಜನರಿಗೆ ಕನ್ನಡವನ್ನು ಕಲಿಸುವ ಸಂಕಲ್ಪಕ್ಕೆ ಸ್ಫೂರ್ತಿಯಾಗಲಿ ಎಂಬ ಸಂದೇಶವನ್ನು ಈ ಚಿತ್ರದ ಮೂಲಕ ಜನರಿಗೆ ತಲುಪಿಸಲು ಯತ್ನಿಸಲಾಗಿದೆ, ಇಂಥದೊಂದು ಮಹತ್ಕಾರ್ಯ ಮಕ್ಕಳಿಂದ ಮಾತ್ರ ಸಾಧ್ಯ ಎಂದು ಚಿತ್ರದಲ್ಲಿ ತೋರಿಸಲಾಗಿದೆ
“ಭಾರತಿ ಟೀಚರ್” ಕನ್ನಡ ಚಲನಚಿತವು ಜನವರಿ 16 ರಿಂದ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ
ಮಕ್ಕಳು ಏಕೆ ಈ ಸಿನಿಮಾ ನೋಡಬೇಕು?ಕಲಿಯುವ ಹಂತದಲ್ಲಿರುವ ಮಕ್ಕಳು ತಮ್ಮನ್ನು ಚಿಕ್ಕವರು ಎಂದೇ ಭಾವಿಸುತ್ತಾರೆ. ಆದರೆ ಕಲಿಸುವ ಹಂತಕ್ಕೆ ಬದಲಾದಾಗ ಅವರ ವ್ಯಕ್ತಿತ್ವ ಪ್ರೌಢವಾಗುತ್ತದೆ. ವಿಕಸನಗೊಳ್ಳುತ್ತದೆ. ಸಾಮಾಜಿಕ ಒಡನಾಟಗಳು ಅವರಲ್ಲಿ ಸಾಮಾಜಿಕ ಜಾಗೃತಿಯನ್ನು ಕೂಡ ತರುತ್ತದೆ. ಇತರರು ಆ ಮಕ್ಕಳನ್ನು ಗೌರವಿಸುವಾಗ ಆ ಗೌರವವನ್ನು ಉಳಿಸಿಕೊಳ್ಳುವ ರೀತಿಯಲ್ಲಿ ಬದುಕಬೇಕು ಎಂಬ ಮನೋಭಾವನೆ ಮೂಡುತ್ತದೆ. ತಪ್ಪು ಸರಿಗಳ ವಿಶ್ಲೇಷಣೆ ಕಾಣುತ್ತದೆ.
ಮಕ್ಕಳಲ್ಲದೆ ದೊಡ್ಡವರು ಕೂಡ ಸಿನಿಮಾ ಏಕೆ ನೋಡಬೇಕು?
ಕಲಿಸಲು ಪ್ರಯತ್ನಿಸುವ ಮಕ್ಕಳನ್ನು ಅರ್ಥ ಮಾಡಿಕೊಳ್ಳಲು, ಅವರನ್ನು ಪ್ರೋತ್ಸಾಹಿಸಲು, ಬೆಂಬಲಿಸಲು, ಗೌರವಿಸಲು, ಮಾರ್ಗದರ್ಶಕರಾಗಲು ಇದೆಲ್ಲಕ್ಕಾಗಿ ಒಂದು ಚಿಕ್ಕ ಸ್ಪೂರ್ತಿಯನ್ನು ಪಡೆದುಕೊಳ್ಳಲು ಈ ಸಿನಿಮಾ ನೋಡಬಹುದು. ಒಂದು ಉತ್ತಮ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಲು ಒಂದು ನೆಪ ಬೇಕಿದೆ. ಆ ನೆಪ ಈ ಚಲನಚಿತ್ರ,
ದಯವಿಟ್ಟು ಬನ್ನಿ ಚಿತ್ರವನ್ನು ನೋಡಿ ಹರಸಿ ಹಾರೈಸಿ. ನಿಮ್ಮ ನಿರೀಕ್ಷೆ ನಂಬಿಕೆಗಳಿಗೆ ಈ ಚಿತ್ರವು ಮೋಸ ಮಾಡುವುದಿಲ್ಲವೆಂದು ಖಂಡಿತ ಭರವಸೆ ನೀಡುತ್ತೇವೆ. ಕನ್ನಡವನ್ನು ಉಳಿಸಿ ಬೆಳೆಸಿ ವಿದ್ಯಾರ್ಥಿಗಳು ಪಾಲಕರು ಪೋಷಕರು ಚಿತ್ರವನ್ನು ಹೆಚ್ಚು ಹೆಚ್ಚು ವೀಕ್ಷಿಸಿ ಪ್ರೋತ್ಸಾಹಿಸುವಂತೆ ಚಿತ್ರದ ನಿರ್ಮಾಪಕ ರಾಘವೇಂದ್ರ ರೆಡ್ಡಿ, ಸಹ ನಿರ್ಮಾಪಕ ಗುರುರಾಜ್ ರೆಡ್ಡಿ, ಚಿತ್ರದ ನಿರ್ದೇಶಕ ಎಂ.ಎಲ್ .ಪ್ರಸನ್ನ ತಿಳಿಸಿದ್ದಾರೆ.
ಶಿಕ್ಷಣ ಮತ್ತು ಮಾರ್ಗದರ್ಶನದ ಮಹತ್ವವನ್ನು ಸಾರುವ ಕಥಾಹಂದರವನ್ನು ಹೊಂದಿರುವ ಭಾರತಿ ಟೀಚರ್ ಚಲನಚಿತ್ರ
ರಾಜ್ಯದಾದ್ಯಂತ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ, ಕೊಪ್ಪಳದ ಮಕ್ಕಳ ಅಭಿಮಾನಿಕ್ಕೆ ನಾನು ಮನಸೋಕೆ ನಿಮ್ಮ ಆಶೀರ್ವಾದ ನಿಮ್ಮ ಹಾರೈಕೆ ಸದಾ ನನ್ನ ಮೇಲೆ ಇರಲಿ.
–ನಾಯಕ ನಟ ರೋಹಿತ್ ರಾಘವೇಂದ್ರ.
* ನಾಯಕ ನಟ ರೋಹಿತ್ ರಾಘವೇಂದ್ರ ಅವರನ್ನು ಸನ್ಮಾನಿಸಿ ಗೌರವಿಸಿ ಚಿತ್ರ ಉತ್ತಮವಾಗಿ ಮೂಡಿಬಂದಿದೆ ಇದು ಮಕ್ಕಳಿಗೆ ಒಳ್ಳೆ ಸಂದೇಶವನ್ನು ನೀಡುವ ಚಿತ್ರವಾಗಿದ್ದು ರೋಹಿತ್ ರಾಘವೇಂದ್ರ ನಟನೆ ಚೆನ್ನಾಗಿದೆ ಚಿತ್ರ ಯಶಸ್ವಿಯಾಗಲೆಂದು ಎಂದರು.
–ಡಾ.ಮಹಾಂತೇಶ್ ಮಲ್ಲನಗೌಡರ್
ಚಲನಚಿತ್ರ ಸಾಹಿತಿಗಳು ಕೊಪ್ಪಳ
