ಕೊಪ್ಪಳ: ಶಿಕ್ಷಣ ಮತ್ತು ಮಾರ್ಗದರ್ಶನದ ಮಹತ್ವವನ್ನು ಸಾರುವ ಕಥಾಹಂದರವನ್ನು ಹೊಂದಿರುವ ಭಾರತಿ ಟೀಚರ್ ಚಲನಚಿತ್ರದ ನಾಯಕ ನಟ ರೋಹಿತ್ ರಾಘವೇಂದ್ರ ಶನಿವಾರ ನಗರದ ಶಿವ ಚಿತ್ರಮಂದಿರದಲ್ಲಿ ಮಕ್ಕಳನ್ನು ಭೇಟಿ ಮಾಡಿ ಖುಷಿಪಟ್ಟರು.
ನಾಯಕ ನಟ ರೋಹಿತ್ ರಾಘವೇಂದ್ರ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಪಟಾಕಿ ಸಿಡಿಸಿ ಭರ್ಜರಿ ಸ್ವಾಗತಿಸಿದರು.
ನಂತರ ಮಕ್ಕಳನ್ನು ಚಿತ್ರ ಹೇಗಿದೆ ಎಂದು ಕೇಳಿದರು ಮಕ್ಕಳು ಚಿತ್ರ ತುಂಬಾ ಚೆನ್ನಾಗಿದೆ ಇದು ಶಿಕ್ಷಣದ ಸುತ್ತ ಹೆಣೆಯಲಾದ ಕಥೆ ಎಂದ ಅವರು ಮಕ್ಕಳೊಂದಿಗೆ ಚಿತ್ರ ವೀಕ್ಷಿಸಿದರು.
ಹಿರಿಯ ಸಾಹಿತಿ ಡಾ. ಮಹಾಂತೇಶ ಮಲ್ಲನಗೌಡರ ನಾಯಕ ನಟ ರೋಹಿತ್ ರಾಘವೇಂದ್ರ ಅವರನ್ನು ಸನ್ಮಾನಿಸಿ ಗೌರವಿಸಿ ಚಿತ್ರ ಉತ್ತಮವಾಗಿ ಮೂಡಿಬಂದಿದೆ ಇದು ಮಕ್ಕಳಿಗೆ ಒಳ್ಳೆ ಸಂದೇಶವನ್ನು ನೀಡುವ ಚಿತ್ರವಾಗಿದ್ದು ನಿಮ್ಮ ನಟನೆ ಚೆನ್ನಾಗಿದೆ ಚಿತ್ರ ಯಶಸ್ವಿಯಾಗಲೆಂದು ಶುಭ ಹಾರೈಸಿದರು.
ನಾಯಕ ನಟ ರೋಹಿತ್ ರಾಘವೇಂದ್ರ ಮಾತನಾಡಿ ರಾಜ್ಯದ ಅತ್ಯಂತ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ, ಮಕ್ಕಳ ಅಭಿಮಾನಿಕ್ಕೆ ನಾನು ಮನಸೋಕೆ ನಿಮ್ಮ ಆಶೀರ್ವಾದ ನಿಮ್ಮ ಹಾರೈಕೆ ಸದಾ ನನ್ನ ಮೇಲೆ ಇರಲಿ ಎಂದರು.
ಈ ಸಂದರ್ಭದಲ್ಲಿ ಚಲನಚಿತ್ರ ಮಂದಿರದ ಮಾಲೀಕರಾದ ವಿಶ್ವನಾಥ ಮಹಾಂತಯ್ಯನ ಮಠ, ಚಿತ್ರಮಂದಿರದ ವ್ಯವಸ್ಥಾಪಕ ಶಿವಾನಂದಯ್ಯ ಉತ್ತಂಗಿ ಮಠ ಸೇರಿದಂತೆ ಅಭಿಮಾನಿಗಳು ಉಪಸ್ಥಿತರಿದ್ದರು.
