April 18, 2026
IMG-20260203-WA0011(1)

ಕೊಪ್ಪಳ : ಯಾವುದೇ ಉನ್ನತ ಹುದ್ದೆಗೆ ಹೋಗಲುˌ ಹಾಗೂ ಸಾಧನೆ ಮಾಡಲು ಆ ವ್ಯಕ್ತಿಯ ಆಸಕ್ತಿ ಮುಖ್ಯವಾಗುತ್ತದೆ ಎಂದು ಬೆಂಗಳೂರಿನ ಆಲ್ಮಾ ಮೀಡಿಯಾ ಸಂಸ್ಥಾಪಕ ˌ ಸುದ್ಧಿ ನಿರೂಪಕ ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕ್ರತರಾದ ಗೌರೀಶ ಅಕ್ಕಿಯವರು ಹೇಳಿದರು.
.    ಅವರು ಜಿಲ್ಲೆಯ ಯಲಬುರ್ತಾ ತಾಲೂಕಿನ ಮುಧೋಳ ಗ್ರಾಮದ ಶ್ರೀ ತ್ರಿಲಿಂಗೇಶ್ವರ ಪ್ರೌಢ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮೊಬೈಲನೆಂಬ ಆಯುಧ ಒಳ್ಳೆಯದಕ್ಕೂ ಇದೆ ಕೆಟ್ಟದಕ್ಕೂ ಇದೆ
ಅದರ ಸದುಪಯೋಗ ಮಾಡಿಕೊಳ್ಳಿಎಂದು ವಿದ್ಯಾರ್ಥಿಗಳಿಗೆ ಕರೆ ನೀಡುತ್ತಾ ತಮ್ಮದೆ ಆದ ಸ್ಥಾನಮಾನಗಳಿಂದ ಗೌರವ ಬರಬೇಕಾದರೆ ತಮ್ಮ ವ್ರತ್ತಿಯಲ್ಲಿ ಶ್ರದ್ಧೆ ˌ ಪ್ರಾಮಣಿಕತೆ ಮುಖ್ಯವಾಗಿರುತ್ತವೆ ಅಂತಹ ನಡಾವಳಿಕೆಯನ್ನು ತಾವು ರೂಢಿಸಿಕೊಳ್ಳ ಬೇಕಾಗಿದೆ . ಆಕರ್ಷಣೆಗೆ ಬಲಿಯಾಗದೆ ಆದರ್ಶಕ್ಕೆ ಮಾರು ಹೋಗಬೇಕು
ನಮ್ಮ ಗೆಳೆಯರ ಸಂಪರ್ಕ ಒಳ್ಳೆಯದಾಗಿರಲಿ
ಚಿಕ್ಕ ವಿಚಾರಗಳಿಗೆ ಆಸ್ಪದ ಮಾಡಿ ಮನಸ್ಥಾಪ ಮಾಡಿಕೊಳ್ಳಬೇಡಿ ಸಾಧ್ಯವಾದರೆ ಒಳ್ಳೆ ಕೆಲಸ ಮಾಡಿ ಕೆಟ್ಟ ಕೆಲಸಕ್ಕೆ ಎಂದೂ ಮನಸ್ಸು ಮಾಡಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು . ಪಾಲಕರು ಮಕ್ಕಳಿಗೆ ಮಾರ್ಗದರ್ಶನ ಮಾಡಬೇಕು ಆದರೆ ಮಕ್ಕಳು ತೆಗೆದು ಕೊಳ್ಳುವ ನಿರ್ಧಾರಕ್ಕೆ ಅಡ್ಡಗಲ್ಲು ಹಾಕಬೇಡಿ ಎಂದರು ಮಕ್ಕಳಲ್ಲಿರುವ ಸೂಪ್ತ ಪ್ರತಿಭೆ ಯನ್ನು ಹೊರತರಲು ಹೆತ್ತವರು ಸಹಕರಿಸಬೇಕು ಅಂದಾಗ ಆ ಮಕ್ಕಳ ಸರ್ವಾಂಗೀಣ ಅಭಿವ್ರದ್ಧಿ ಆಗುವಲ್ಲಿ ಎರಡು ಮಾತಿಲ್ಲ ಎಂದರು.
ಸಣ್ಣ ಪುಟ್ಟ ಕಷ್ಟಗಳು ಎಲ್ಲರಿಗೂ ಇರಬಹುದು ಆದರೆ ಅವುಗಳ ನೆಪದಲ್ಲಿ ನಮ್ಮ ಬಾಳಿನಲ್ಲಿ ಹಿನ್ನಡೆ ಆಗಕೂಡದು ˌ ಕಷ್ಟಗಳನ್ನ ಸವಲಾಗಿ ಸ್ವೀಕರಿಸಿ ಜೀವನವನ್ನು ಪಾವನ ಮಾಡಿಕೊಳ್ಳ ಬೇಕು
“ನಿಮ್ಮ ಪಾದದ ಧೂಳ ನನ್ನ ತಲೆ ಮೇಲೆ ಇರಲಿ ಆದರೆ ಕಣ್ಣುಗಳ ಮೇಲೆ ಬೀಳದಿರಲಿ” ಎನ್ನುವ ಕವಿವಾಣಿಯನ್ನು ಸ್ಮರಿಸುತ್ತಾ ಸಂಕುಚಿತತೆಯಿಂದ ಹೊರ ಬಂದಾಗ ಉನ್ನತಿಗೆ ಬರಬೇಕು ಆ ದಿಶೆಯಲ್ಲಿ ಆತ್ಮ ವಿಶ್ವಾಸ ಹೊಂದಿರಿ ಎಂದರು
ಒಳ್ಳೆ ಮೌಲ್ಯಗಳಿಂದ ಒಳ್ಳೆ ಸಮಾಜ ಕಟ್ಠಿರಿ ಎಂದರು.
ವಿಧಾನ ಪರಿಷತ ಸದಸ್ಯರಾದ ಶಶೀಲ್ ನಮೋಶಿ ಮಾತನಾಡಿ ಐದು ಲಕ್ಷ ಅನುದಾನ ತ್ರಿಲಿಂಗೇಶ್ವರ ಶಾಲೆಗೆ ಕೊಡುವದಾಗಿ ಘೋಷಿಸಿದರು.
ಶಿವಶರಣಪ್ಪ ಬಳಿಗಾರ ನಿರೂಪಿಸಿದರು
ಅಮರಯ್ಯ ವಂದಿಸಿದರು

 

Leave a Reply

Your email address will not be published. Required fields are marked *