ಕೊಪ್ಪಳ : ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಭಾಗ್ಯನಗರ ಪಟ್ಟಣ ಪಂಚಾಯಿತಿ ಹಂಗಾಮಿ ಅಧ್ಯಕ್ಷ ಹೊನ್ನೂರುಸಾಬ್ ಬೈರಾಪುರ ಭಾನುವಾರದಂದು ಚಾಲನೆ ನೀಡಿದರು.
ಅವರು ಭಾಗ್ಯನಗರ ಪಟ್ಟಣ ಪಂಚಾಯಿತಿ ಆವರಣದಲ್ಲಿ ಮಗುವಿಗೆ ಪೋಲಿಯೋ ಹಾನಿ ಹಾಕಿ ನಂತರ ಮಾತನಾಡಿ ಪ್ರತಿಯೊಬ್ಬರು ತಪ್ಪದೇ ಮಗುವಿಗೆ ಪೋಲಿಯೋ ಹಾಕಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಭಾಗ್ಯನಗರ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಂ ಮ್ಯಾಗಳಮನಿ, ಸದಸ್ಯರಾದ ಗವಿಸಿದ್ದಪ್ಪ, ಆಶ್ರಯ ಸಮಿತಿ ಸದಸ್ಯರಾದ ಶಿಲ್ಪಾ ಗುಡ್ಲಾನೂರ್, ಮುಖ್ಯಾಧಿಕಾರಿ ಸುರೇಶ್ ಬಬಲಾದಿ, ಪಟ್ಟಣ ಪಂಚಾಯಿತಿಯ ಸಿಬ್ಬಂದಿ ವರ್ಗದವರಾದ ಅರುಣ್ ಕುಮಾರ್, ಭಾಗ್ಯನಗರ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಪ್ರಶಾಂತ್ ತಟ್ಟಿ, ಆರೋಗ್ಯ ನಿರೀಕ್ಷಣಾಧಿಕಾರಿ ಗೋವಿಂದಪ್ಪ .ಜಿ, ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ ಸಂಜೀವ್ ಕುಮಾರ್, ಸಮುದಾಯ ಅಧಿಕಾರಿ ಹೇಮಾ, ಭಾಗ್ಯನಗರದ ಆಶಾ ಕಾರ್ಯಕರ್ತರು ಹಾಗೂ ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು.
