ಕೊಪ್ಪಳ: ಜಿಲ್ಲೆಯ ತಾವರಗೇರಾ ಪಟ್ಟಣದ ಸೌಹಾರ್ದ ಸಹಕಾರಿ ಬ್ಯಾಂಕ್ ಗೆ ಆಡಳಿತ ಮಂಡಳಿಗೆ ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು.
ನಿರ್ದೇಶಕರ ವಿವರ : ಸಾಮಾನ್ಯ ಸ್ಥಾನದಿಂದ ಬಸನಗೌಡ ಪೊಲೀಸ್ ಪಾಟೀಲ್, ಮಲ್ಲನಗೌಡ ಓಲಿ, ಶರಣಪ್ಪ ಗೌಡ ಚನ್ನನಗೌಡ ಚನ್ನಪ್ಪಗೌಡ್ರು, ಆದಪ್ಪ ನಾಲತ್ವಾಡ್, ಶರಣಪ್ಪ ಐಲಿ, ಶಂಕ್ರಪ್ಪ ಎ.ನಾಲತ್ವಾಡ್, ರುಕುಮಸಿಂಗ್ ಬಪ್ಪರಗಿ, ಪರಿಶಿಷ್ಟ ಜಾತಿ ಸ್ಥಾನದಿಂದ ನಾಗೇಂದ್ರ ಎನ್.ಹುನಗುಂದ, ಪರಿಶಿಷ್ಟ ಪಂಗಡ ಸ್ಥಾನದಿಂದ ಶಶೀಕಲಾ ವೈ ಬೀಳೆಗುಡ್ಡ, ಹಿಂದುಳಿದ ವರ್ಗ ಅ ಸ್ಥಾನದಿಂದ ಪ್ರಕಾಶ ಜಿ.ಉಪ್ಪಳ, ಹಿಂದುಳಿದ ವರ್ಗ ಬ ಸ್ಥಾನದಿಂದ ವಿದ್ಯಾಶ್ರೀ ಶೇಖರಪ್ಪ ಮುತ್ತೇನವರ್, ಮಹಿಳಾ ಮೀಸಲು ಸ್ಥಾನದಿಂದ ಅನಿತಾ ವಿ ತಾಳಿಕೋಟಿ, ಕವಿತಾ ವಾಸುದೇವ ಗುಡಸಲಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಆಯ್ಕೆಯಾದ ಎಲ್ಲಾ ನಿರ್ದೆಶಕರಿಗೆ ಬ್ಯಾಂಕಿನ ಅಧಿಕಾರಿ ಹಾಗೂ ಸಿಬ್ಬಂದಿಗಳು ಸನ್ಮಾನಿಸಿ ಗೌರವಿಸಿದರು.
ಅಹಿತಕರ ಘಟನೆ ನಡೆಯದಂತೆ ಪಿಎಸ್ಐ ಚಂದ್ರಶೇಖರ ನೇತೃತ್ವದಲ್ಲಿ ಪಿಸಿಗಳಾದ ವೀರೇಶ, ಶಿವಪುತ್ರಪ್ಪ ತಿಪ್ಪಣ್ಣ, ಮರಿಬಸಪ್ಪನವರ್, ಬಸವರಾಜ, ಎಐಸಿ ಶಿವಪುತ್ರಪ್ಪ ಸೂಕ್ತ ಪೊಲೀಸ್ ಭದ್ರತೆಗೆ ನಿಯೋಜಿಸಲಾಗಿತ್ತು.
ಶೇಖರಪ್ಪ ಮುತ್ತೇನವರ ಹರ್ಷ : ತಾವರಗೇರಾ ಪಟ್ಟಣದ ಸೌಹಾರ್ದ ಸಹಕಾರಿ ಬ್ಯಾಂಕ್ ಗೆ ಹಿಂದುಳಿದ ವರ್ಗ ಬ ಮೀಸಲು ಸ್ಥಾನದಿಂದ ನಿರ್ದೇಶಕರಾಗಿ ಶ್ರೀಮತಿ ವಿದ್ಯಾಶ್ರೀ ಶೇಖರಪ್ಪ ಮುತ್ತೇನವರ ಅವಿರೋಧವಾಗಿ ಆಯ್ಕೆಯಾಗಿದ್ದು ಹರ್ಷ ತಂದಿದೆ ಎಂದು ಶೇಖರಪ್ಪ ಮುತ್ತೇನವರ ತಿಳಿಸಿದ್ದಾರೆ.
ಸೌಹಾರ್ದ ಸಹಕಾರಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಿರುವ ಶ್ರೀಮತಿ ವಿದ್ಯಾಶ್ರೀ ಅವರ ಪತಿ ಶೇಖರಪ್ಪ ಅವರು ಇದೇ ಬ್ಯಾಂಕಿನಲ್ಲಿ ಸುಮಾರು ಐದು ವರ್ಷಗಳ ಕಾಲ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಿದ್ದಾರೆ. ತಮ್ಮ ಪತ್ನಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಕ್ಕೆ ಸಂತಸ ವ್ಯಕ್ತ ಪಡಿಸಿದ್ದಾರೆ. ಒಟ್ಟು 13 ನಿರ್ದೇಶಕರಲ್ಲಿ 6 ಜನ ಅವಿರೋಧವಾಗಿ ಆಯ್ಕೆಯಾಗಿದ್ದು, ಇನ್ನೂಳಿದ 7 ಜನ ಚುನಾವಣೆಯ ಮೂಲಕ ಆಯ್ಕೆಯಾಗಿದ್ದಾರೆ.
