
ಎಂ.ಎಸ್.ಪಿ.ಎಲ್. ನಿಂದ ಅಂಗವಿಕಲರಿಗೆ ಉಚಿತ ಕೃತಕ ಕಾಲು ಜೋಡಣೆ
=====
ಅಂಗವಿಕಲರಿಗೆ ಅನುಕಂಪಕ್ಕಿಂತ ಸಹಕಾರ ಅಗತ್ಯ: ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ
=========
ಕೊಪ್ಪಳ ಜುಲೈ 24, ಅಂಗವಿಕಲರು ಗಳಲ್ಲಿ ನಾನಾ ಪ್ರತಿಭೆ ಅಡಗಿದೆ ಅವರ ಬಗ್ಗೆ ಅನುಕಂಪ ಕ್ಕಿಂತ ಅವರಿಗೆ ಪ್ರೋತ್ಸಾಹ ಸಹಾಯ ಸಹಕಾರ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಅವರಿಗೆ ಸಹಕಾರ ನೀಡಿದರೆ ಅವರು ಕೂಡ ಎಲ್ಲರಂತೆ ಸ್ವಾವಲಂಬಿಗಳಾಗಿ ತಮ್ಮ ಬದುಕು ಕಟ್ಟಿಕೊಳ್ಳುತ್ತಾರೆ ಎಂದು ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ಅಭಿಪ್ರಾಯ ಪಟ್ಟರು.
ಅವರು ಗುರುವಾರ ನಗರದ ಮುಸ್ಲಿಂ ಶಾದಿ ಮಹಲ್ ಸಭಾಂಗಣದಲ್ಲಿ ಎಂ.ಎಸ್.ಪಿ.ಎಲ್ ಬಲ್ದೋಟ ಸಂಸ್ಥೆ ಹಾಗೂ ಭಗವಾನ್ ಮಹಾವೀರ್ ಅಂಗವಿಕಲರ ಸಹಕಾರ ಸಮಿತಿ ಜೈಪುರ್ ಮತ್ತು ಬೆಂಗಳೂರು ಇವುಗಳ ಸಹಯೋಗದಲ್ಲಿ ಏರ್ಪಡಿಸಿದ ಅಂಗವಿಕಲರಿಗೆ ಉಚಿತ ಜಯಪುರ ಕೃತಕ ಕಾಲು ಜೋಡಣೆ ಶಿಬಿರದ ಉದ್ಘಾಟನೆ ನೆರವೇರಿಸಿ ಕಾಲಿಲ್ಲದ ಅಂಗವಿಕಲರಿಗೆ ಕೃತಕ ಕಾಲು ಜೋಡಣೆ ಮಾಡುವುದರ ಮೂಲಕ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಮುಂದುವರೆದು ಮಾತನಾಡಿ, ಎಂ ಎಸ್ ಪಿ ಎಲ್ ಸಂಸ್ಥೆಯು ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಇಂತಹ ಶಿಬಿರಗಳನ್ನು ಏರ್ಪಡಿಸಿ ಅಂಗವಿಕಲರ ಸ್ವಾವಲಂಬಿ ಬದುಕಿಗೆ ಸಂಜೀವಿನಿಯಾಗಿ ಶ್ರಮಿಸುತ ಬಂದಿದೆ ಇವರ ಇಂತಹ ಮಹತ್ತರದ ಕಾರ್ಯಕ್ಕೆ ನಾವೆಲ್ಲರೂ ಕೈಜೋಡಿಸೋಣ ಎಂದ ಅವರು ಇಂಥ ಕಾರ್ಯ ಕ್ರಮ ಮತ್ತು ಶಿಬಿರ ನಮ್ಮ ಜಿಲ್ಲೆಯಲ್ಲಿ ನಡುವೆಯುತ್ತಿರುವುದು ಈ ಭಾಗದ ಅಂಗವಿಕಲರಿಗೆ ಬಹಳಷ್ಟು ಅನುಕೂಲವಾಗಿದೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಂ.ಎಸ್.ಪಿ.ಎಲ್ ಬಲ್ದೋಟಾದ ಮ್ಯಾನೇಜಿಂಗ್ ಡೈರೆಕ್ಟರ್ ನರೇಂದ್ರ ಕುಮಾರ್ ಬಲ್ದೋಟ ರವರು ಮಾತನಾಡಿ, ಪಕ್ಕದ ಹೊಸಪೇಟೆಯಲ್ಲಿ 10 ಬಾರಿ ಮತ್ತು ಕೊಪ್ಪಳದಲ್ಲಿ ಒಂದು ಬಾರಿ ಇಂಥ ಶಿಬಿರ ಆಯೋಜಿಸಲಾಗಿದೆ ಶಿಬಿರದಲ್ಲಿ ಸುಮಾರು 2.615 ಅಧಿಕ ಫಲಾನುಭವಿಗಳು ಪ್ರಯೋಜನ ಪಡೆದಿರುತ್ತಾರೆ 1.320 ಜನರಿಗೆ ಕೃತಕ ಕಾಲು 770 ಕ್ಯಾಲಿಪರ್ಸ್ ೪೪ ವಾಕರ್ಸ್ 78 ಗೋಲು 271 ಜನರಿಗೆ ಊರುಗೋಲುಗಳನ್ನು 41ಜನರಿಗೆ ಗಾಲಿ ಕುರ್ಚಿಗಳನ್ನು ಮತ್ತು 38 ಜನರಿಗೆ ಕೈ ಚಾಲಿತ ಸೈಕಲ್ ನೀಡಲಾಗಿದೆ 53 ಲಘು ಶಾಸ್ತ್ರ ಚಿಕಿತ್ಸೆಗೆ ಸಹ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ವಿವರಿಸಿದ್ದರು.
ಜಿಲ್ಲಾ ವಿಕಲಚೇತನರ ಕಲ್ಯಾಣ ಇಲಾಖೆಯ ಅಧಿಕಾರಿ ವೆಂಕಟೇಶ್ ದೇಶಪಾಂಡೆ ಮಾತನಾಡಿ ಇಂಥ ಶಿಬಿರ ಕೊಪ್ಪಳ ವಿಜಯನಗರ ಬಳ್ಳಾರಿ ಗದಗ್ ಮತ್ತು ರಾಯಚೂರು ಜಿಲ್ಲೆಗಳ ಜನರಿಗೆ ಅನುಕೂಲವಾಗುವ ಉದ್ದೇಶದಿಂದ ಕೊಪ್ಪಳ ನಗರದಲ್ಲಿ ಆಯೋಜಿಸಲಾಗಿದೆ ಇಂತಹ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡಿರುವ ಎಂ.ಎಸ್.ಪಿ.ಎಲ್ ಬಲ್ದೋಟ ಕಂಪನಿ ಅವರ ಕಾರ್ಯ ಅತ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಹೇಳಿದರು.
ಭಗವಾನ್ ಮಹಾವೀರ್ ಅಂಗವಿಕಲರ ಸಹಕಾರ ಸಮಿತಿಯ ಮುಖ್ಯಸ್ಥರಾದ ಅನಿಲ್ ಸುರಾನ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಹುಟ್ಟಿನಿಂದ ಕಾಲಿನ ಅಂಗವಿಕಲತೆ ಹೊಂದಿದವರು ಆಕಸ್ಮಿಕ ಅಪಘಾತದಿಂದ ಕಾಲು ಕಳೆದುಕೊಂಡವರು ಸೇರಿದಂತೆ ಯಾವುದೇ ರೀತಿಯ ಕಾಲಿನ ಅಂಗವಿಕಲತೆ ಹೊಂದಿದವರು ಈ ಶಿಬಿರದ ಪ್ರಯೋಜನವನ್ನು ಉಚಿತವಾಗಿ ಪಡೆದುಕೊಳ್ಳಬಹುದು ಮತ್ತು ಇತರರಿಗೆ ಮಾಹಿತಿ ನೀಡಿ ಕೊಪ್ಪಳದಲ್ಲಿ ಇಂದಿನಿಂದ ಮೂರು ದಿನಗಳವರೆಗೆ ಜರುಗುವ ಈ ಶಿಬೀರದ ಸಂಪೂರ್ಣ ಸಹಕಾರ ಪಡೆದುಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಎಚ್.ಕೆ ರಮೇಶ್ ಆರಂಭದಲ್ಲಿ ಸ್ವಾಗತಿಸಿ ಪ್ರಾಸ್ತಾವಕವಾಗಿ ಮಾತನಾಡಿದರು. ಕೊಪ್ಪಳ ನಗರಸಭೆಯ ಪೌರಾಯುಕ್ತಾರಾದ ಸುರೇಶ್ ಬಬಲಾದ್, ಉಪ ತಹಶೀಲ್ದಾರ್ ಗವಿಶಿದಪ್ಪ ಮಣ್ಣೂರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಎಂ.ಎಸ್.ಪಿ.ಎಲ್ ಸಂಸ್ಥೆಯ ಪರವಾಗಿ ಅತಿಥಿಗಳನ್ನು ಸನ್ಮಾನಿಸಲಾಯಿತು. ಮೊದಲನೇ ದಿನದ ಶಿಬಿರದಲ್ಲಿ ಸುಮಾರು 80 ಅಧಿಕ ಅಂಗವಿಕಲರು ಪಾಲ್ಗೊಂಡು ಇದರ ಸದುಪಯೋಗ ಪಡೆದುಕೊಂಡರು.