
ಕೊಪ್ಪಳ : ಬೆಂಗಳೂರಿನಲ್ಲಿ ಇತ್ತೀಚೆಗೆ ಕೊಪ್ಪಳ ತಾಲೂಕಿನ ಹೊಸ ಬಂಡಿಹರ್ಲಾಪುರ ಗ್ರಾಮದ ಅರುಣ ಶಿಳ್ಳಿಕ್ಯಾತರ ಎಂಬ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆಯಾದ ಬಾಲಕಿ ಮನೆಗೆ ಕೆಪಿಸಿಸಿ ಸಂಯೋಜಕ ಹಾಗೂ ಉದ್ಯಮಿ ಡಾ.ಕೆ.ಎಂ.ಸೈಯದ್ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ವೈಯಕ್ತಿಕ ಸಹಾಯ ಧನ ನೀಡಿ ಧೈರ್ಯ ನೀಡಿ ಸೂಕ್ತ ತನಿಖೆ ನಡೆಸಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಸರಕಾರಕ್ಕೆ ಒತ್ತಾಯಿಸುವುದಾಗಿ ಹೇಳಿದರು.
ನಂತರ ಮಾತನಾಡಿ ಇದು ನಿಜಕ್ಕೂ ತಲೆತಗ್ಗಿಸುವ ಘಟನೆ ಆಗಿದ್ದು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದರು.
ಈ ಸಂದರ್ಭದಲ್ಲಿ ಯುವ ನಾಯಕರಾದ ಇಮಾಮ್ ಹುಸೇನ್ ಹೊಸಮನಿ, ಜಹಾಂಗೀರ್, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ನಂದಕುಮಾರ್, ಗ್ರಾಮ ಪಂಚಾಯತಿ ಸದ್ಯಸರಾದ ರಫಿ ಉಡಾದಪ್ಪ, ಪರಶುರಾಮ್ ಗ್ರಾಮದ ಮುಖಂಡರು ಯುವಕರು ಉಪಸ್ಥಿತರಿದ್ದರು