
ಕೊಪ್ಪಳ : ಕ್ರಿಕೆಟ್ ನಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳುವುದರಿಂದ ದೇಹ ಮನಸ್ಸು ಸದೃಢಗೊಳ್ಳುತ್ತದೆ, ಕ್ರೀಡೆಯಲ್ಲಿ ಸೋಲು ಗೆಲುವನ್ನು. ಕ್ರೀಡಾಪಟುಗಳು ಸಮಾನವಾಗಿ ಸ್ವೀಕರಿಸಿ ಎಂದು ಕೆಪಿಸಿಸಿ ಸಂಯೋಜಕ ಹಾಗೂ ಉದ್ಯಮಿ ಡಾ.ಕೆ.ಎಂ. ಸೈಯದ್ ಹೇಳಿದರು.
ಅವರು ಮಂಗಳವಾರದಂದು ಕೊಪ್ಪಳದ ಮೆಡಿಕಲ್ ಕಾಲೇಜ್ ಹತ್ತಿರ ಸನ್ ಲೈಟ್ ಟ್ರೋಫಿ-2025 – ಡೇ ನೈಟ್ ಟರ್ಫ್ ಬಾಕ್ಸ್ ಟೂರ್ನಮೆಂಟ್ ಗೆ ಚಾಲನೆ ನೀಡಿ ಮಾತನಾಡಿದರು ಕ್ರಿಕೆಟ್ ವಿಶ್ವದಲ್ಲಿ ಎಲ್ಲರಿಗೂ ಅಚ್ಚುಮೆಚ್ಚಿನ ಕ್ರೀಡೆಯಾಗಿದೆ ಎಲ್ಲರೂ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿರುವುದು ಸಂತಸ ತಂದಿದೆ ಟೂರ್ನಮೆಂಟ್ ನಲ್ಲಿ
ಪ್ರಥಮ ಬಹುಮಾನ 20 ಸಾವಿರ ರೂಪಾಯಿಗಳನ್ನು ಕೊಡುಗೆಯಾಗಿ ನೀಡುತ್ತೇನೆ ಎಂದು ಘೋಷಿಸಿದರು.
ಈ ಸಂದರ್ಭದಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಕಾಟನ್ ಪಾಷಾ, ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೋಮಶೇಖರ್ ಹಿಟ್ನಾಳ್, ಯುವ ಮುಖಂಡ ಮೆಹಮ್ಮದ್ ಬಲ್ಲೆ, ರಮೇಶ್ ಗಿಣಿಗೇರಿ, ಕ್ರಿಕೆಟ್ ಆಯೋಜಕರು ,ಕ್ರಿಕೆಟ್ ಅಭಿಮಾನಿಗಳು ಉಪಸ್ಥಿತರಿದ್ದರು.