
ಕೊಪ್ಪಳ : ಕ್ರೀಡೆಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳೋದು ಮುಖ್ಯ ಸೋಲು ಗೆಲುವು ಅಲ್ಲ ಎಂದು ರಿಯಲ್ ಎಸ್ಟೇಟ್ ಉದ್ಯಮಿ ಫಕ್ರುದ್ದೀನ್ ನದಾಫ್ ಹೇಳಿದರು.
ಅವರು ತಾಲೂಕಿನ ಚುಕ್ಕನಕಲ್ ಗ್ರಾಮದಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಕ್ರಿಕೆಟ್ ಟೂರ್ನಮೆಂಟ್ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು.
ಟೂರ್ನಿಯಲ್ಲಿ ಪ್ರಥಮ ಬಹುಮಾನವನ್ನು ಬಿಗ್ ಬಾಸ್ ತಂಡ, ದ್ವಿತೀಯ ಬಹುಮಾನವನ್ನು ಮೂನ್ ಸ್ಟಾರ್ ತಂಡ ಗೆದ್ದುಕೊಂಡಿತು. ಈ ಟೂರ್ನಮೆಂಟ್ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಬಹದ್ದೂರ್ ಬಂಡಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಯೋಗಾನಂದ ಪ್ರಭುಗೌಡ ಮಾಲಿಪಾಟೀಲ್, ಸಿದ್ದನಗೌಡ ಪೊಲೀಸ್ ಪಾಟೀಲ್, ರಾಮನಗೌಡ ಮುಂಡರಗಿ, ಹನುಮಂತ ಹರಿಜನ್, ಫಕ್ಕಿರೆಡ್ಡಿ ಪ್ಯಾಟಿ, ರಾಮು ತಿಮ್ಮಲಾಪುರ, ಮರಿಯಪ್ಪ ಹರಿಜನ್, ಟೂರ್ನಿಯಾ ಆಯೋಜಕರಾಗಿರುವ ಸಿಪಿಎಲ್ ತಂಡದ ಎಲ್ಲಾ ಆಟಗಾರರು ಗ್ರಾಮದ ಗುರು -ಹಿರಿಯರು ಮತ್ತು ಎಲ್ಲಾ ಯುವಕರು ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.