
ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥಗೆ ಸನ್ಮಾನ
ಕೊಪ್ಪಳ: ಕೊಪ್ಪಳ ಜಿಲ್ಲೆಗೆ ಆಗಮಿಸಿದ ಪೌರಕಾರ್ಮಿಕರ ಕಣ್ಮಣಿ ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಿ.ಎಸ್.ಮಂಜುನಾಥ್ ಅವರಿಗೆ ಗುರುವಾರದಂದು ಕೊಪ್ಪಳದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಪೌರ ನೌಕರ ಸಂಘದ ಅಧ್ಯಕ್ಷ ಶಿವಕುಮಾರ್ ಕಟ್ಟಿಮನಿ, ರಾಜ್ಯ ಪರಿಷತ್ ಸದಸ್ಯರಾದ ದುರ್ಗಪ್ಪ ಕಂದಾರಿ, ಶಾಖಾಧ್ಯಕ್ಷರಾದ ಮೈಲಾಪ್ಪ ಕಾರಟಗಿ, ಉಪಾಧ್ಯಕ್ಷರಾದ ಮಾರುತಿ ದೊಡ್ಡಮನಿ, ಯಮನೂರಪ್ಪ ಮಂಗಳಾಪುರ, ಭೀಮಣ್ಣ ನಿಂಗಪ್ಪ ಡೊಳ್ಳಿನ್, ಚಾಂದಪಾಷಾ ಸೋಮಪ್ಪ ದೊಡ್ಡಮನಿ, ದೇವಪ್ಪ ಹಳ್ಳಿಕೇರಿ, ಶಿವಪ್ಪ ಗಿಣಿಗೇರಿ, ನಾಗರಾಜ್ ದೊಡ್ಡಮನಿ, ಮಹಾಬಲೇಶ್ವರ ಲಿಂಗನಬಂಡಿ, ದೇವರಾಜ್ ಕಿನ್ನಾಳ ಸೇರಿದಂತೆ ನೌಕರರು ಪಾಲ್ಗೊಂಡಿದ್ದರು.