
ಕೊಪ್ಪಳ : ಹಳೇ ಬಂಡಿಹರ್ಲಾಪುರ ಗ್ರಾಮ ಶಾಂತಿ ತೋಟವಾಗಿದೆ ಎಲ್ಲಾ ಸಮುದಾಯದವರು ಇಲ್ಲಿ ಸಹೋದರರಂತೆ ಬದುಕುತ್ತಾರೆ ಸರ್ಕಾರದಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗಾಗಿ ಶ್ರಮಿಸುತ್ತೆನೆ ಎಂದು ಕೆಪಿಸಿಸಿ ಸಂಯೋಜಕ ಹಾಗೂ ಉದ್ಯಮಿ
ಡಾ.ಕೆ.ಎಂ.ಸೈಯದ್ ಹೇಳಿದರು.
ಅವರು ತಾಲೂಕಿನ ಹಳೇ ಬಂಡಿಹರ್ಲಾಪುರ ಶ್ರೀ ದುರ್ಗಾದೇವಿಯ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿ ಸೌಹಾರ್ದತೆಯಿಂದ ಮುಖಂಡರು ಸೇರಿ ಸುಂದರವಾಗಿ ಒಗ್ಗಟ್ಟಾಗಿ ಹಬ್ಬ ಹರಿದಿನಗಳನ್ನು ಮಾಡುವುದರಿಂದ ಯಶಸ್ವಿಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಸಹಕಾರಿ ಸಂಘದ ಅಧ್ಯಕ್ಷ ಕೆ ಚಂದ್ರಶೇಖರ್, ಎಪಿಎಂಸಿ ಮಾಜಿ ಅಧ್ಯಕ್ಷ ವಿಶ್ವನಾಥ ರಾಜು, ಯಂಕಪ್ಪ ಹೊಸಳ್ಳಿ ಚನ್ನ ಕೃಷ್ಣ ಗೊಲ್ಲರ ,ಯಮನೂರಪ್ಪ ವಡ್ಡರ್, ಭೀಮರಾಯ ಪತ್ತೆಪುರ, ಸೋಮನಾಥ ವಾಲಿಕಾರ ಸೇರಿದಂತೆ ಶ್ರೀ ದುರ್ಗಾದೇವಿ ಸೇವಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.