ಮುಸ್ಲಿಂ ಸಮುದಾಯದ ವಿವಿಧ ಬೇಡಿಕೆಗಳ ಈಡೇರಿಸಲು ಶಾಸಕರಿಗೆ ಮನವಿ
ಕೊಪ್ಪಳ: ಕರ್ನಾಟಕ ಮುಸ್ಲಿಂ ಯೂನಿಟಿ ಕೊಪ್ಪಳ ಜಿಲ್ಲಾ ಮತ್ತು ತಾಲೂಕು ಸಮಿತಿ ವತಿಯಿಂದ ಕೊಪ್ಪಳ ನಗರದ ಮುಸ್ಲಿಂ ಸಮುದಾಯದ ವಿವಿಧ ಬೇಡಿಕೆಗಳನ್ನುಈಡೇರಿಸುವ ಕುರಿತು ಶಾಸಕರಿಗೆ ಮನವಿ ಸಲ್ಲಿಸಲಾಯಿತು.
ಕೊಪ್ಪಳ ನಗರದ ಮುಸ್ಲಿಂ ಸಮುದಾಯಯು ಕಳೆದ ಚುನಾವಣೆಯಲ್ಲಿ ತಮಗೆ ಅತ್ಯಧಿಕ ಮತಗಳಿಂದ ಚುನಾವಣೆಯಲ್ಲಿ ಮತ ಹಾಕುವುದರ ಮೂಲಕ ತಮ್ಮನ್ನು ಮೂರು ಬಾರಿ ಶಾಸಕನ್ನಾಗಿ ಆಯ್ಕೆ ಮಾಡಿದ್ದು ಹಲವು ಬಾರಿ ತಮಗೆ ಈಗಾಗಲೆ ಮನವಿಯನ್ನು ಮಾಡಿಕೊಂಡಿದ್ದು ಅದರಂತೆ ಕೊಪ್ಪಳ ನಗರದ ಜನಸಂಖ್ಯೆಯು ಅಧಿಕವಾಗಿದ್ದು ಜನಸಂಖ್ಯೆಗನು ಗುಣವಾಗಿ ನಗರದಲ್ಲಿ ಪ್ರಮುಖವಾಗಿ ಎರಡು ಹಬ್ಬಗಳಲ್ಲಿ ಈದ್ ನಮಾಝ್ ನಿರ್ವಹಿಸಲು ಈಗಿರುವ ಈದ್ಗಾದಲ್ಲಿ ಜಾಗ ಸಾಕಾಗುತ್ತಿಲ್ಲ ಈದ್ ನಮಾಝ್‌ನಲ್ಲಿ ತಾವೂಗಳು ಭಾಗವಿಹಿಸಿದಾಗ ತಮ್ಮ ಗಮನಕ್ಕೆ ಬಂದಿದ್ದು ಇದೆ. ಹಾಗಾಗಿ ಈದ್ಗಾಕ್ಕೆ ನೂತನವಾಗಿ 2 ಎಕರೆ ಜಾಗವನ್ನು ಮಂಜೂರ ಮಾಡಿಸಿಕೊಡಬೇಕು. ಮತ್ತು ನಗರದಲ್ಲಿರುವ ಖಬರಸ್ಥಾನ (ರುಧ್ರಭೂಮಿ) ಜನಸಂಖ್ಯೆಗನುಗುಣವಾಗಿ ಸಾಕಾಗುತ್ತಿಲ್ಲ ಆದ ಕಾರಣ ಖಬರಸ್ಥಾನಗಾಗಿ 5 ಎಕರೆ ಜಾಗವನ್ನು ಮಂಜೂರ ಮಾಡಿಸಬೇಕು. ಮತ್ತು ಈಗಿರುವ ಖಬರಸ್ಥಾನಗಳಲ್ಲಿ ರಾತ್ರಿ ವೇಳೆಯಲ್ಲಿ ದಫನ್‌ಕಾರ್ಯಗಳಿಗಾಗಿ ಹೈಮಾಸ್ ಲೈಟ್‌ಗಳನ್ನು ಅಳವಡಿಸುವುದು, ಹಾಗೂ ಮುಸ್ಲಿಂ ಸಮುದಾಯದ ಶೈಕ್ಷಣಿಕ ಅಭಿವೃದ್ಧಿಗಾಗಿ ಮೌಲಾನಾ ಆಝಾದ್ ಶಾಲೆ ಮತ್ತು ಕಾಲೇಜುಗಳಿಗಾಗಿ ಸ್ವಂತ ಜಾಗದಲ್ಲಿ ಸರ್ಕಾರದ ನಿಯಮಾನುಸಾರ ಕಟ್ಟಡ ಮತ್ತು ಆಟದ ಮೈದಾನ ಇತರೆ ಸೌಲಭ್ಯಗಳಿರುವ ಕಟ್ಟಡಕ್ಕಾಗಿ ಭೂಮಿಯನ್ನು ಖರೀದಿಸಿ ನಿರ್ಮಾಣ ಮಾಡಿಕೊಡುವುದು ಮತ್ತು ಹಳೆಯ ಉರ್ದು ಫ್ರೌಢ ಶಾಲೆಯ (ಅಂಚೆ ಕಛೇರಿ ಹತ್ತಿರವಿರುವ) ಕಟ್ಟಡವು ಶಿತಿಲಗೊಂಡಿದ್ದು ಶಾಲೆಗೆ ಸಕಲ ಸೌಲಭ್ಯಗಳುಳ್ಳ ನೂತನ ಕಟ್ಟಡ ನಿರ್ಮಾಣ ಮಾಡುವುದು. ಹಾಗೂ ನಗರದ ಪ್ರಸಿದ್ಧ ಹಜ್ರತ್ ಮರ್ದಾನೆ ಗೈಬ್ ದರ್ಗಾದಲ್ಲಿರುವ ಶಾದಿಮಹಲ್ ಕಾಮಗಾರಿಯು ಸುಮಾರು ವರ್ಷಗಳಿಂದ ನಡೆಯುತ್ತಿದ್ದು ಈತನಕ ಕಾಮಗಾರಿಯು ಆಮೆಗತಿಯಲ್ಲಿ ನಡೆಯುತ್ತಿದೆ. ಈ ಕೂಡಲೆ ಶಾದಿಮಹಲ್ ಕಾಮಗಾರಿಗೆ ಸೂಕ್ತ ಅನುದಾನವನ್ನು ನೀಡಿ ಕಾಮಗಾರಿಯನ್ನು ಪೂರ್ಣ ಗೋಳಿಸಬೇಕು ಅಲ್ಲದೆ ದರ್ಗಾಕ್ಕೆ ಮತ್ತು ಹುಲಿಕೇರೆಗೆ ಹೋಗುವ ಮುಖ್ಯ ರಸ್ತೆಯ ಎರಡುಬದಿಯಲ್ಲಿ ಸುರಕ್ಷತೆಗಾಗಿ ತಡೆಗೋಡೆ ನಿರ್ಮಾಣ ಮಾಡಿಕೊಡಬೇಕು ಹಾಗೂ ದರ್ಗಾದ ಮೋತಿ ಕೆರೆಯನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿ ಮಾರ್ಪಡಿಸಬೇಕೆಂದು ಇದಕ್ಕೆ ಸೂಕ್ತ ಅನುದಾನವನ್ನು ಮಂಜೂರಮಾಡಿಸಿ ಮುಸ್ಲಿಂ ಸಮಾಜದ ಶೆಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ತಾವೂಗಳು ಮೇಲಿನ ಎಲ್ಲಾ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸಬೇಕೆಂದು ಸಮಾಜದ ಪರವಾಗಿ ಕರ್ನಾಟಕ ಮುಸ್ಲಿಂ ಯೂನಿಟಿ ಕೊಪ್ಪಳ ಜಿಲ್ಲಾ ಮತ್ತು ತಾಲೂಕು ಸಮಿತಿ ವತಿಯಿಂದ ಮನವಿ ಪತ್ರವನ್ನು ಸಲ್ಲಿಸಿದರು.
ಈ ಸಂಧರ್ಭದಲ್ಲಿ ಸಮಾಜದ ಮುಖಂಡರಾದ ಕೆ.ಎಂ.ಸೈಯದ್, ಜಿಲ್ಲಾಧ್ಯಕ್ಷರಾದ ಮೊಹ್ಮದ್ ಜೀಲಾನ್ ಕಿಲ್ಲೇದಾರ ಜಿಲ್ಲಾ ಉಪಾಧ್ಯಕ್ಷರಾದ ಸೀರಾಜ ಮನಿಯಾರ್ ಪ್ರಧಾನ ಕಾರ್ಯದರ್ಶಿ ಮುಸ್ತಫಾ ಕುದರಿಮೋತಿ, ಜಿಲ್ಲಾ ವಕ್ತಾರರಾದ ನಜೀರ ಅಹ್ಮದ್ ಮುದಗಲ್, ತಾಲೂಕ ಅಧ್ಯಕ್ಷರಾದ ಫಕ್ರುಸಾಬ ನದಾಫ್, ರ್ಯದರ್ಶಿಯಾದ ಹಜರತ್‌ಅಲಿ ಮುಜಾವರ್, ಅಂಜುಮನ್ ಅಧ್ಯಕ್ಷರಾದ ಆಸೀಫ್ ಕರ್ಕಿಹಳ್ಳಿ, ಪಾಷಾ ಖಾಜಾವಲಿ ಗುಡಗೇರಿ, ಸಾಸೀರುದ್ದೀನ್ ಹುಸೈನಿ, ಅಜೀಜ್ ಮಾನ್ವಿಕರ್, ಮಾಜಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಹೊನ್ನೂರಸಾಬ ಬೈರಾಪುರ, ಮೀರಾಸಾಬ ನದಾಫ್, ಮಾಜಿ ನಗರಸಭೆ ಸದಸ್ಯರಾದ ಅಜೀಮ್ ಅತ್ತಾರ, ಖಾಸಿಂ ಡೋಣಿ, ಜಾಫರ್ ಸಂಗಟಿ, ನಜೀರ ಹಾಗೂ ಇತರರು ಉಪಸ್ಥಿತರಿದ್ದರು.
