ಬಿಜೆಪಿ ಪಕ್ಷದಿಂದ ಶಂಭುಲಿಂಗನಗೌಡ ಪಾಟೀಲ್ ಹಲಿಗೇರಿಗೆ ಸನ್ಮಾನ : ಬಿಜೆಪಿ ಪಕ್ಷಕ್ಕೆ ಆಹ್ವಾನ.
ಕೊಪ್ಪಳ: ಭಾರತೀಯ ಜನತಾ ಪಾಟಿ೯ಯ ಕೊಪ್ಪಳ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ನವೀನಕುಮಾರ ಗುಳಗಣ್ಣನವರ ಶಿಕ್ಷಕ ವೃತ್ತಿಯಿಂದ ಸೇವಾ ನಿವೃತ್ತಿ ಹೊಂದಿದ ಶಂಭುಲಿಂಗನಗೌಡ ಪಾಟೀಲ ಹಲಗೇರಿ ಅವರ ನಿವಾಸಕ್ಕೆ ಭೇಟಿ ನೀಡಿ ಸನ್ಮಾನಿಸಿ ಗೌರವಿಸಿದರು.
ನಂತರ ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಕುಮಾರ್ ಗುಳಗಣ್ಣನವರ್ ಶಂಭುಲಿಂಗನಗೌಡ ಪಾಟೀಲ್ ಹಲಿಗೇರಿ ಅವರೊಂದಿಗೆ ಸುಧೀರ್ಘವಾಗಿ ಚರ್ಚಿಸಿ ಬಿಜೆಪಿ ಪಕ್ಷಕ್ಕೆ ನಿಮ್ಮಂತವರ ಮಾರ್ಗದರ್ಶನ ಅವಶ್ಯವಿದ್ದು ತಾವು ಕೂಡಲೇ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಳ್ಳುವಂತೆ ಆಹ್ವಾನಿಸಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ, ಇದಕ್ಕೆ ಶಂಭುಲಿಂಗನಗೌಡ ಪಾಟೀಲ್ ಹಲಿಗೇರಿ ಅವರು ಸಕರಾತ್ಮಕವಾಗಿ ಸ್ಪಂದಿಸಿ ನನ್ನ ಆತ್ಮೀಯರು, ಬಳಗದೊಂದಿಗೆ, ಎಲ್ಲರೊಂದಿಗೆ ಚರ್ಚಿಸಿ ನಿರ್ಧಾರ ತಿಳಿಸುವುದಾಗಿ ತಿಳಿಸಿದ್ದಾರೆ.
ಶಂಭುಲಿಂಗನಗೌಡ ಪಾಟೀಲ್ ಹಲಿಗೇರಿ ಅವರು ನಿಕಟಪೂವ೯ ರಾಜ್ಯಾಧ್ಯಕ್ಷರು ಕನಾ೯ಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು, ಮಾಜಿ ರಾಜ್ಯ ಹಿರಿಯ ಉಪಾಧ್ಯಕ್ಷರು ಹಾಗೂ ಜಿಲ್ಲಾದ್ಯಕ್ಷರು ಕನಾ೯ಟಕ ರಾಜ್ಯ ಸಕಾ೯ರಿ ನೌಕರರ ಸಂಘ ಬೆಂಗಳೂರು, ಸಕಾ೯ರಿ ನೌಕರರ ಹಾಗೂ ಶಿಕ್ಷಕರ ಕಣ್ಮಣಿ 38 ವಷ೯ಗಳ ಕಾಲ ಸುಧೀಘ೯ ಸಾಥ೯ಕ ಸೇವೆ ಸಲ್ಲಿಸಿ ಎಲ್ಲರೊಂದಿಗೆ ವಿಶ್ವಾಸ ಗಳಿಸಿದ್ದಾರೆ, ಈಗ ನಿವೃತ್ತಿಗೊಂಡಿದ್ದರಿಂದ ಅವರಲ್ಲಿ ಸಂಘಟನಾತ್ಮಕ ಶಕ್ತಿ ಇರುವುದರಿಂದ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪಕ್ಷದವರು ಪಕ್ಷ ಸೇರ್ಪಡೆಗೆ ಪಕ್ಷಗಳ ಮುಖಂಡರು ತುಂಬಾಲು ಬಿದ್ದಿದ್ದಾರೆ ಶೀಘ್ರದಲ್ಲಿ ಅವರ ನಿರ್ಧಾರ ಪ್ರಕಟಗೊಳ್ಳುವುದು.
ಈ ಸಂದರ್ಭದಲ್ಲಿ ಯಲಬುಗಾ೯ ಹಾಗೂ ಕುಕನೂರು ತಾಲ್ಲೂಕಿನ ಮುಖಂಡರುಗಳಾದ ಮುತ್ತಣ್ಣ ಬ್ಯಾಳಿ,ಅಜ್ಜನಗೌಡ್ರು ಪಾಟೀಲ ಹಾಗೂ ಶಿವುಕುಮಾರ ಹೀರೆಮಠ ಹಾಗು ಇನ್ನೂ ಹಲವಾರು ಮುಖಂಡರುಗಳು ಉಪಸ್ಥಿತರಿದ್ದರು.
