July 28, 2026
IMG_20260628_144905

ಭಾಗ್ಯನಗರ : ಪಲ್ಸ್‌ ಪೋಲಿಯೋ ಕಾರ್ಯಕ್ರಮಕ್ಕೆ ಬೈರಾಪುರು ಚಾಲನೆ
ಕೊಪ್ಪಳ : ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಭಾಗ್ಯನಗರ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಹೊನ್ನೂರುಸಾಬ್ ಬೈರಾಪುರ ಭಾನುವಾರದಂದು ಚಾಲನೆ ನೀಡಿದರು.
.    ಅವರು ಭಾಗ್ಯನಗರ ಪಟ್ಟಣ ಪಂಚಾಯಿತಿ ಆವರಣದಲ್ಲಿ ಮಗುವಿಗೆ ಪೋಲಿಯೋ ಹಾನಿ ಹಾಕಿ ನಂತರ ಮಾತನಾಡಿ ಪ್ರತಿಯೊಬ್ಬರು ತಪ್ಪದೇ ಮಗುವಿಗೆ ಪೋಲಿಯೋ ಹಾಕಿಸುವಂತೆ ಮನವಿ ಮಾಡಿದರು.
  ಈ ಸಂದರ್ಭದಲ್ಲಿ ಭಾಗ್ಯನಗರ ಪಟ್ಟಣ ಪಂಚಾಯಿತಿಯ ಸದಸ್ಯರಾದ ಶಿವರಾಂ ಮ್ಯಾಗಳ ಮನಿ, ಮೋಹನ್ ಅರ್ಕಲ್, ಪರಶುರಾಮ್ ನಾಯಕ್, ಗವಿಸಿದ್ದಪ್ಪ ನಾಮನಿರ್ದೇಶನ ಸದಸ್ಯರು, ಮುಖ್ಯ ಅಧಿಕಾರಿ ಸುರೇಶ್ ಬಬಲಾದಿ, ಸಿಬ್ಬಂದಿ ಅರುಣ್ ಅಂಗಡಿ,
ಭಾಗ್ಯನಗರ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಪ್ರಶಾಂತ್ ತಟ್ಟಿ, ಆರೋಗ್ಯ ನಿರೀಕ್ಷಣಾಧಿಕಾರಿ ಗೋವಿಂದಪ್ಪ .ಜಿ, ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ ಸಂಜೀವ್ ಕುಮಾರ್, ಸಮುದಾಯ ಅಧಿಕಾರಿ ಹೇಮಾ, ಭಾಗ್ಯನಗರದ ಆಶಾ ಕಾರ್ಯಕರ್ತರು ಹಾಗೂ ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *