June 2, 2026
IMG-20260529-WA0031

ಶಂಭುಲಿಂಗನಗೌಡ ಪಾಟೀಲ್ ಹಲಗೇರಿ ಶಿಕ್ಷಕರ ಧ್ರುವತಾರೆ
(ಶಂಭುಲಿಂಗನಗೌಡ ಪಾಟೀಲ್ ಹಲಗೇರಿ ಇವರು ದಿನಾಂಕ 31.05.2026ರಂದು ನಿವೃತ್ತಿ ನಿಮಿತ್ತ ಲೇಖನ)
ಕೊಪ್ಪಳ : ಬದುಕಿನಲ್ಲಿ ಸಂಸ್ಕಾರ ಮರೆಯದ, ಶಿಕ್ಷಕರೆಲ್ಲರಿಗೂ ಧ್ರುವತಾರೆ ಶಂಭುಲಿಂಗನಗೌಡ ಪಾಟೀಲ ಹಲಿಗೇರಿ ಎಂದು ಹೆಮ್ಮೆಯಿಂದ ಹೇಳಬಹುದು.
ಇದೇ 31- 05 -2026 ರಂದು 60 ವರ್ಷ ಸಂಪೂರ್ಣ ಪೂರ್ಣಗೊಳಿಸಿ ಸರಕಾರಿ ಸೇವೆಯಿಂದ ನಿವೃತ್ತಿಯಾಗುತ್ತಿರುವುದು ಕೊಪ್ಪಳ ತಾಲೂಕಿನ ಶಿಕ್ಷಕರಿಗೆ, ಸಾರ್ವಜನಿಕ ಬಂಧುಗಳಿಗೆ ಉತ್ಸಾಹ, ಹುಮ್ಮಸ್ಸು ಏಕೆಂದರೆ ಇನ್ನೂ ಮೇಲೆ ಶಂಬಣ್ಣದ ಸಾರ್ವಜನಿಕ ಸೇವೆಗೆ ಬರಬೇಕು ಎನ್ನುವ ಅಭಿಲಾಷೆ, ಅತ್ಯಂತ ಬಡತನ ಮಧ್ಯೆ ಸದಾ ಲವಲವಿಕೆಯಿಂದ ಗೆಳೆಯರ ಬಳಗ ಕಟ್ಟಿಕೊಂಡು ಶಿಕ್ಷಣ ಕ್ಷೇತ್ರ, ಕೊಪ್ಪಳ ಜಿಲ್ಲಾ ಸರಕಾರಿ ನೌಕರರ ಸಂಘ ಗಟ್ಟಿಗೊಳಿಸಿ ಎರಡನೇಯ ಹಂತದ, ಶಿಕ್ಷಕರ, ಅಖಂಡ ಸರಕಾರಿ ನೌಕರರ ಸಮಸ್ಯೆಗಳನ್ನು ಅಧಿಕಾರಿಗಳೊಂದಿಗೆ ಅತ್ಯಂತ ಹೃದಯ ಪೂರ್ವಕ ಮನಸು ಗೆದ್ದಿರುವ ಧೀಮಂತ ನಾಯಕನಾಗಿ ಹೊರಹೋಮ್ಮಿ ರಾಜ್ಯ ಸರಕಾರಿ ನೌಕರ ಸಂಘದ ಹಿರಿಯ ಉಪಾಧ್ಯಕ್ಷರಾಗಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದವರು.

  ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ ಅವರು ಬೈದವರು ಬಂಧುಗಳು ಎಂಬ ಭಾವನೆ ಮೂಲಕ ಎಲ್ಲರ ಹೃದಯ ಗೆದ್ದವರು, ಸೋತಾಗ ಕುಗ್ಗದೆ, ಗೆದ್ದಾಗ ಹಮ್ಮು ಇರದೇ ಅಜಾತಶತ್ರು ನಮ್ಮ ಶಂಬಣ್ಣ, ಬರೆದರೆ ಒಂದು ಗ್ರಂಥವೆ ಆಗುತ್ತದೆ, ಹಲಗೇರಿ ಗ್ರಾಮ ದೇವತೆ ಶಾಂಭವಿ ಆಶೀರ್ವಾದ ಪಡೆದು ಊರಿನ ಗುರು ಹಿರಿಯರ ಆಶೀರ್ವಾದ ಪಡೆದು ತಾಲೂಕ ಜಿಲ್ಲಾ ರಾಜ್ಯ ನಾಯಕರಾಗುವ ಎಲ್ಲಾ ಗುಣ ಪಡೆದ ಜಿಲ್ಲೆಯ ಹೆಮ್ಮೆಯ ಪುತ್ರ, ತಂದೆ ತಾಯಿ ಅಣ್ಣ ತಮ್ಮ ಇಡೀ ಕುಟುಂಬಕ್ಕೆ ಕಾಯಕ ಪ್ರಜ್ಞೆ ಕೊಟ್ಟ ಶಂಬಣ್ಣ ಅವರು ಧರಿಸುವ ಉಡುಪಿನಲ್ಲಿ ರಾಜಿ ಇರದೇ ಅತ್ಯಂತ ಶುಭ್ರ ಬಟ್ಟೆ ತೊಟ್ಟು ತಾಲೂಕಿನ ಜನರೇ ಬೆಚ್ಚಿಬಿದ್ದು ಮೆಚ್ಚುಗೆ ವ್ಯಕ್ತ ಪಟ್ಟಿದ್ದು ನಾನು ಕಣ್ಣಾರೆ ಕಂಡಿರುವೇ, ವಿಶೇಷ ಅಂದರೆ ನನ್ನ,ಶಂಬಣ್ಣ ಕಾಣುವ ದೃಷ್ಠಿನೆ ಬೇರೆ ಯಾವಾಗಲು ನನ್ನ ಬೆಳವಣಿಗೆಯಲ್ಲಿ ಅತ್ಯಂತ ಖುಷಿ ಪಟ್ಟ ಮೊದಲಿಗರು, ನನ್ನ ಮಾತಿಗೆ ಪ್ರತಿ ಮಾತಾಡದೆ ಅತ್ಯಂತ ಗೌರವಯುತ ಕಂಡವರು, ಶಂಬಣ್ಣ ಉನ್ನತ ಹುದ್ದೆಗಳಿಗೆ ಹೋಗುವಾಗ ಖುಷಿ ಪಟ್ಟವರಲ್ಲಿ ನಾನು ಕೂಡಾ ಒಬ್ಬ, ಒಂದು ಸಮಯದಲ್ಲಿ ಕೊಪ್ಪಳ ತಾಲೂಕಿನ ಕಾಂಗ್ರೆಸ್ ಎಂಎಲ್ಎ ಟಿಕೆಟ್ ಸಿಗುವ ಪ್ರಸಂಗ ಬಂದರೂ ತಿರಸ್ಕರಿಸಿ ನೌಕರಿ ಮುಂದುವರಿಸಿದರು, ಒಮ್ಮೆ ಜಿಲ್ಲಾ ಪಂಚಾಯತ್ ಸದಸ್ಯ ಆಗುವ ಅವಕಾಶ ಬಂದರೂ ಒಪ್ಪಿ ಕೊಂಡವರಲ್ಲ, ಅರೋಗ್ಯವಂತರಾದ ಶಂಬಣ್ಣ ನಿವೃತ್ತಿ ಆಗಿ ಕೊಪ್ಪಳ ತಾಲೂಕಿನ ಭವಿಷ್ಯದ ರಾಜಕೀಯ ನಾಯಕ ಆಗಬೇಕೆನ್ನುವ ಬಯಕೆ ನನ್ನದು, ಜಾತಿಯಿಂದ ವೀರಶೈವ ಲಿಂಗಾಯತ ಪಂಚಮಸಾಲಿ ಆದರೂ ಎಲ್ಲಾ ಸಮುದಾಯದ, ಎಲ್ಲಾ ಧರ್ಮದ ಪ್ರೀತಿ ಗೆದ್ದಿರುವ ಶಂಬಣ್ಣ 01-06- 2026 ಕ್ಕೆ ಅಧಿಕೃತ ಸಾರ್ವಜನಿಕ ಕ್ಷೇತ್ರಕ್ಕೆ ಬರಲಿ, ಉತ್ತಮ ಸೇವೆಗೆ ಸಿದ್ದರಾಗಿ ಬದ್ಧತೆಯಿಂದ ಕಾರ್ಯ ನಿರ್ವಸಲಿ ಎಂಬುದೇ ನನ್ನ ಆಸೆ ನಿವೃತ್ತಿ ಬದುಕು ಹೊಸ ಪರ್ವಕ್ಕೆ ನಾಂದಿಯಾಗಲಿ ಶುಭವಾಗಲಿ.
—ಸೋಮನಗೌಡ ಎಂ.ಪಾಟೀಲ್
ಅಧ್ಯಕ್ಷರು
ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ಬೆಂಗಳೂರು.

Leave a Reply

Your email address will not be published. Required fields are marked *