ಕೊಪ್ಪಳ : ನಗರದ ದದೆಗಲ್ ಬಳಿ ಎಸ್.ಎ.ನಿಂಗೋಜಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆ ಮತ್ತು ಮಾತೋಶ್ರೀ ರತ್ನಮ್ಮ ವೀರಣ್ಣ ನಿಂಗೋಜಿ ಆಸ್ಪತ್ರೆ ಆವರಣದಲ್ಲಿ ಕಂಚಿಕಾಮಕೋಟೆ ಮೆಡಿಕಲ್ ಟ್ರಸ್ಟ್, ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ, ಕುಷ್ಟಗಿಯ ಆದಿಶಕ್ತಿ ದುರ್ಗಾಪರಮೇಶ್ವರಿ ಚಾರಿಟೇಬಲ್ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಮೇ.೩೧ರ ಬೆಳಗ್ಗೆ ೯ ಗಂಟೆಗೆ ಉಚಿತ ನೇತ್ರ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸೆ ಶಿಬಿರ ಏರ್ಪಡಿಸಲಾಗಿದೆ ಎಂದು ನ್ಯಾಯವಾದಿ ಹಾಗೂ ಸಂಸ್ಥೆಯ ಅಧ್ಯಕ್ಷ ಎಸ್.ಎ.ನಿಂಗೋಜಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಪಾನ್ ತಂತ್ರಜ್ಞಾನ ಆದರಿತ ಕಂಪ್ಯೂಟರನಿAದ ಕಣ್ಣಿನ ತಪಾಸಣೆ ಮಾಡಲಾಗುವುದು. ಶಿಬಿರಕ್ಕೆ ಆಗಮಿಸುವವರು ಎರಡು ಫೋಟೋ, ರೇಶನ್ ಕಾರ್ಡ್, ಓಟರ್ ಐಡಿ ಅಥವಾ ಆಧಾರ್ ಕಾರ್ಡ್ನ ಎರಡು ಪ್ರತಿ ಝರಾಕ್ಷ್ ಕಡ್ಡಾಯವಾಗಿ ತರಬೇಕು. ಶಿಬಿರದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದವರನ್ನು ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆಯವರು ಉಚಿತ ಸಾರಿಗೆ ಮತ್ತು ಊಟದ ವ್ಯವಸ್ಥೆಯೊಂದಿಗೆ
ಉಚಿತವಾಗಿ ಶಸ್ತ್ರಚಿಕಿತ್ಸೆ ಲೆನ್ಸ್ ಅಳವಡಿಸಲಾಗುವುದು. ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಬಂದವರಿಗೆ ಆಸ್ಪತ್ರೆಯವರು ತಿಳಿಸಿದ ಸ್ಥಳ ಮತ್ತು ದಿನಾಂಕದAದು ಮರುಪರೀಕ್ಷೆಗೆ ಬರಬೇಕು. ಶಿಬಿರಕ್ಕೆ ಬರುವವರು ಅವರ ಮನೆಯಿಂದ ಒಬ್ಬ ಸಹಾಯಕನನ್ನು ಕಡ್ಡಾಯವಾಗಿ ಕರೆದುಕೊಂಡು ಬರಬೇಕು. ಶಸ್ತ್ರ ಚಿಕಿತ್ಸೆಯಾದವರಿಗೆ ರಿಯಾಯಿತಿ ದರದಲ್ಲಿ ಕನ್ನಡಕ ವಿತರಿಸಲಾಗುವುದು. ಶಸ್ತ್ರ ಚಿಕಿತ್ಸೆ ಮುಗಿದ ನಂತರ ಮರಳಿ ಎಸ್.ಎ.ನಿಂಗೋಜಿ ಆಯುರ್ವೇದಿಕ ಕಾಲೇಜು ಹಾಗೂ ಆಸ್ಪತ್ರೆ ಆವರಣ ದದೇಗಲ್-ಕೊಪ್ಪಳದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗುವದು ಎಂದು ಸಲಹೆ ನೀಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ: ಡಾ.ಪ್ರವೀಣಕುಮಾರ-೯೯೬೪೮೯೯೭೮೪, ವೈಷ್ಣದೇವಿ-೯೩೮೦೧೮೬೯೧೮, ಡಾ.ಭೀಮಗೋಪಾಲ-೮೬೧೮೨೧೫೪೯೧,ಡಾ.ಎ.ಪ್ರಭಾಕರ-೯೮೮೬೧೨೨೫೧೧, ರವಿಕುಮಾರ-೭೭೬೦೫೫೩೫೫೪ ಇವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
