ಕೊಪ್ಪಳ: ಭಾಗ್ಯನಗರ ಪಪಂ ಅಧ್ಯಕ್ಷರಾಗಿ ರಮೇಶ್ ಹ್ಯಾಟಿ ಆಯ್ಕೆಗೊಂಡರು.
ಹಾಲಿ ಅಧ್ಯಕ್ಷ ತುಕಾರಾಮಪ್ಪ ಗಡಾದ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು.
ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಮೂರನೇ ವಾರ್ಡಿನ ವಾಸುದೇವ್ ಮೇಘರಾಜ್ ನಾಮಪತ್ರ ಸಲ್ಲಿಸಿದ್ದರು
ಭಾಗ್ಯನಗರ ಪಪಂನಲ್ಲಿ ಒಟ್ಟು19 ಸದಸ್ಯ ಬಲ ಇದ್ದು, ಇದರಲ್ಲಿ ಬಿಜೆಜಿ 9, ಕಾಂಗ್ರೆಸ್ 8 ಹಾಗೂ ಪಕ್ಷೇತರರು 2 ಸದಸ್ಯರಿದ್ದಾರೆ. ಪಕ್ಷೇತರರು ಇಬ್ಬರು ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿರುವುದರಿಂದ ಕಾಂಗ್ರೆಸ್ ಪಕ್ಷ 10 ಸದಸ್ಯ ಬಲ ಜತೆಗೆ ಸಂಸದರು ಮತ್ತು ಶಾಸಕರಿಬ್ಬರ ಮತಗಳು ಬಲವೂ ಕಾಂಗ್ರೆಸ್ ಪಕ್ಷಕ್ಕೆ ದೊರೆತು ಸಹಜವಾಗಿಯೇ ಕಾಂಗ್ರೆಸ್ ಪಕ್ಷಕ್ಕೆ 12 ಸದಸ್ಯ ಬಲ ಹೊಂದಿ, ಬಹುಮತ ಪಡೆಯಿತು.
ಬಿಜೆಪಿ ಪಕ್ಷದ ವಾಸುದೇವ್ ಮೇಘರಾಜ್ ಅವರು 9 ಸ್ಥಾನ ಪಡೆದರು.
ಕೊನೆಗೆ ಚುನಾವಣಾ ಅಧಿಕಾರಿ ಅಧ್ಯಕ್ಷರಾಗಿ ರಮೇಶ್ ಹ್ಯಾಟಿಯವರ ಆಯ್ಕೆಯನ್ನು ಘೋಷಿಸಿದರು.
ಸಂದರ್ಭದಲ್ಲಿ ಸಂಸದ ರಾಜಶೇಖರ್ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ, ನಗರ ಪ್ರಾಧಿಕಾರ ಅಧ್ಯಕ್ಷ ಶ್ರೀನಿವಾಸ್ ಗುಪ್ತ, ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ, ಭಾಗ್ಯನಗರ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಹೊನ್ನೂರಸಾಬ ಬೈರಾಪುರ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಯಮನಪ್ಪ ಕಬ್ಬೇರ್, ಭಾಗ್ಯನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುರೇಶ್ ಬಬಲಾದಿ, ಪಟ್ಟಣ ಪಂಚಾಯಿತಿಯ ಎಲ್ಲಾ ಸದಸ್ಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
