ಕೊಪ್ಪಳ,: ಕನಕಗಿರಿ ಪಟ್ಟಣದ ಪಪಂ ಹಂಗಾಮಿ ಅಧ್ಯಕ್ಷರಾಗಿ ಕಂಠಿರಂಗ ನಾಯಕ ಮಂಗಳವಾರ ಅಧಿಕಾರ ಸ್ವೀಕಾರಿಸಿದರು.
ಕನಕಗಿರಿ ಪಟ್ಟಣ ಪಂಚಾಯತ ನಿಕಟಪೂರ್ವ ಅಧ್ಯಕ್ಷೆ ಹುಸೇನಬಿ ಚಳ್ಳಮರದ ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ನೀಡಿದ್ದ ಹಿನ್ನೆಲೆ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಉಪಾಧ್ಯಕ್ಷರಾಗಿದ್ದ ಕಂಠಿರಂಗ ನಾಯಕ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ, ಬ್ಲಾಕ್ ಅಧ್ಯಕ್ಷ ಗಂಗಾಧರ ಸ್ವಾಮಿ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ವಿರೇಶ ಸಮಗಂಡಿ, ವಕ್ತಾರ ಶರಣಬಸಪ್ಪ ಭತ್ತದ, ಸದಸ್ಯ ಸಂಗಪ್ಪ ಸಜ್ಜನ, ಸಿದ್ದೇಶ ಕೆ, ಅನಿಲ್ ಬಿಜ್ಜಾಳ, ಶರಣೆಗೌಡ, ಶೇಷಪ್ಪ ಪೂಜಾರ, ರಾಕೇಶ ಕಂಪ್ಲಿ, ಹನುಮಂತ ಬಸರಿಗಿಡದ, ಪ್ರಮುಖರಾದ ಟಿಜೆ ರಾಮಚಂದ್ರ, ಅನ್ನು ಚಳ್ಳಮರದ, ಮಂಜುನಾಥ ನಾಯಕ, ಸುರೇಶ ಕುರುಗೋಡ ಹಾಗೂ ನಾಮನಿರ್ದೇಶನ, ಆರೋಗ್ಯ ರಕ್ಷಾ ಸಮಿತಿ ಸದಸ್ಯರು ಸೇರಿದಂತೆ ಅನೇಕರು ಇದ್ದರು.
