April 18, 2026
IMG_20250629_165232
ಕೊಪ್ಪಳ : ಸರ್ದಾರ್ ಗಲ್ಲಿಯಲ್ಲಿ ಪ್ರತಿ ವರ್ಷ ನಡೆಯುವ ಸಾಮೂಹಿಕ ವಿವಾಹದಲ್ಲಿ ನೂತನ ಜೋಡಿಗಳಿಗೆ  ಚಿನ್ನದ ತಾಳಿಯನ್ನು ಉಡುಗೊರೆಯಾಗಿ ಕೆಪಿಸಿಸಿ ಸಂಯೋಜಕ ಹಾಗೂ ಉದ್ಯಮಿ ಡಾ.ಕೆ.ಎಂ.ಸೈಯದ್ ಪ್ರತಿ ವರ್ಷ ನೀಡಿ ಸಾಮೂಹಿಕ ವಿವಾಹ ನೆರವೇರಿಸುವ ಸಂಘಟನೆಗೆ ನೆರವಾಗುತ್ತಾರೆ.
ಅವರನ್ನು ರವಿವಾರ ನಡೆದ 21ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಡಾ. ಕೆ.ಎಂ. ಸೈಯದ್ ಅವರನ್ನು ಸಂಘಟಕರು ಪ್ರೀತಿಯಿಂದ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶ್ರೀನಿವಾಸ್ ಗುಪ್ತ, ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಸುರೇಶ್ ಭೂಮರೆಡ್ಡಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಕಾಟನ್ ಪಾಷಾ, ಸಮಾಜದ ಗುರುಗಳು, ನದಾಫ್ ಸಮಾಜದ ಜಿಲ್ಲಾಧ್ಯಕ್ಷ ಕೆ.ಎಫ್ ಮುದ್ದಾಬಳ್ಳಿ,ಕೊಪ್ಪಳ ತಾಲೂಕ ನದಾಫ್ ಸಂಘದ ಅಧ್ಯಕ್ಷರಾದ ಅಸ್ಮನ್ ಸಾಬ್, ಉಪಾಧ್ಯಕ್ಷರಾದ ಫಕ್ರುಸಾಬ್, ಮಹಿಳಾ ಜಿಲ್ಲಾ ಅಧ್ಯಕ್ಷರಾದ ಸಲೀಂ ಜಾನ್,  ಮುಸ್ಲಿಂ ಪಿಂಜಾರ್ ಪಂಚ ಕಮಿಟಿಯ ಗೌರವ ಅಧ್ಯಕ್ಷರು ಹಾಗೂ ನದಾಫ್ ಪಿಂಜಾರ್ ಸಂಘದ ರಾಜ್ಯ ಕೋಶಾಧಿಕಾರಿ ಶಹಾಬುದ್ದೀನ್ ಸಾಬ್ ನೂರಬಾಷ್, ಪಂಚ ಕಮಿಟಿಯ ಅಧ್ಯಕ್ಷರಾದ ಖಾದರ್ ಸಾಬ್ ಕುದುರಿಮೋತಿ, ನಗರಸಭೆ ಮಾಜಿ ಸದಸ್ಯ, ಪಂಚ ಕಮಿಟಿಯ ಕಾರ್ಯದರ್ಶಿ ಮೆಹಬೂಬ್ ಬಾಷಾ ಮಾನ್ವಿ, ಖಜಾಂಚಿಯಾದ ಮೀರಾಸಾಬ್, ಝಂಡಾ ಕಟ್ಟಿ ಅಧ್ಯಕ್ಷ ಮರ್ದಾನ್ ಸಾಬ್ ಲುಂಗಿ, ಪಂಚ ಕಮಿಟಿಯ ಇತರ ಸದಸ್ಯರಾದ ರಿಯಾಜ್ ಕುದ್ರಿಮೋತಿ, ರಶೀದ್ ನೀರಲಗಿ, ಅಬ್ದುಲ್ ರೆಹಮಾನ್, ವಾಸಿಮ್, ಇಸ್ಮಾಯಿಲ್ ಸಾಬ್, ನಬಿಸಾಬ್ , ಕುತ್ತುಬುದ್ದೀನ್, ಖಾಜಾಸಾಬ್ ನಗರ ಘಟಕ ಕಾರ್ಯದರ್ಶಿ ಬಾಬುಸಾಬ, ಅಮೀರ್ ಹಮ್ಜಾ ನಿವೃತ್ತ ಶಿಕ್ಷಕರು, ರಮಜಾನ್ ಸಾಬ್ ಸೇರಿದಂತೆ ಸರ್ವ ಸದಸ್ಯರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *