September 2, 2025
IMG-20250818-WA0052
ಕೊಪ್ಪಳ: ಇನ್ನರ್ ವೀಲ್ ಸಂಸ್ಥೆಯಲ್ಲಿ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಯೋಗಿನಿ ಅಕ್ಕನವರಿಂದ ರಕ್ಷಾ ಬಂಧನ ಕಾರ್ಯಕ್ರಮ ಜರುಗಿತು.
ಯೋಗಿನಿ ಅಕ್ಕನವರು ಮಾತನಾಡಿ ಎಲ್ಲದರಲ್ಲೂ ಸ್ಪರ್ಧಾತ್ಮಕ ಮನೋಭಾವದಿಂದ ಓಡುತಾ ಇರುವ ಯುಗದಲ್ಲಿ ಶಾಂತಿ, ನೆಮ್ಮದಿ, ಆರೋಗ್ಯ ಕದಡುತಾ ಇದೆ. ಒತ್ತಡ ರಹಿತವಾಗಿ ನಾವು ಬದುಕಬೇಕೆಂದರೆ ಪರಮಪಿತಾ ಶಿವ ಬಾಬಾ ನ ಸ್ಮರಿಸಬೇಕು ಎಂದು ನಮಗೆಲ್ಲ ಶಿವ ತಂದೆಯ ಸಾಕ್ಷಾತ್ಕಾರವನ್ನು ಮಾಡಿಸಿದರು. 
  ಇನ್ನರ್ ವೀಲ್ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಪಾರ್ವತಿ ಪಾಟೀಲ್,  ವಿಜಯಲಕ್ಷ್ಮಿ ಹಂಚಾಟೆ ಮಹಿಳೆಯರಿಗೆ ಸಂಬಂಧಪಟ್ಟ ಸೂಕ್ಷ್ಮ ವ್ಯಾಯಾಮಗಳ ಬಗ್ಗೆ ತಿಳಿಸಿದರು.
  ಈ ಸಂದರ್ಭದಲ್ಲಿ ಅಧ್ಯಕ್ಷರಾದ ಮಧು ಶೆಟ್ಟರ್, ಮಾಜಿ ಅಧ್ಯಕ್ಷರಾದ ಪ್ರತಿಮಾ ಪಟ್ಟಣ್ ಶೆಟ್ಟಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ರಾಧಾ ಕುಲಕರ್ಣಿ, ಖಜಾಂಚಿ ಸುವರ್ಣ ಶೆಟ್ಟರ್, iso ಹೇಮಾ ಬಳ್ಳಾರಿ, ಸಂಪಾದಕಿ ಸುಧಾ ಶೆಟ್ಟರ್, ಉಪಾಧ್ಯಕ್ಷೆ ಮೀನಾಕ್ಸಿ ಬಣ್ಣದಬಾವಿ, ಕಾರ್ಯದರ್ಶಿ ರೇಖಾ ಕಡ್ಲಿ, ಮಮತಾ ಶೆಟ್ಟರ್, ಶರಣಮ್ಮ ಪಾಟೀಲ್, ನೀತಾ ತಂಬ್ರಹಳ್ಳಿ, ನಾಗವೇಣಿ, ಜಯಶ್ರೀ, ರತ್ನ, ಸೌಮ್ಯ ಇನ್ನು ಅನೇಕ ಸದಸ್ಯರು ಭಾಗವಹಿಸಿದ್ದರು. 

Leave a Reply

Your email address will not be published. Required fields are marked *