
ಕೊಪ್ಪಳ : ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಸಮಾಜ ಸೇವೆ ನನ್ನ ಉಸಿರು ಎಂದು ಪಣತೊಟ್ಟಿರುವ ಡಾ.ಕೆ.ಎಂ.ಸೈಯದ್ ಅವರಿಗೆ ಇಂದು 44ನೇ ಹುಟ್ಟುಹಬ್ಬದ ಸಂಭ್ರಮ.
ಕೊಪ್ಪಳದಲ್ಲಿ ಸೈಯದ್ ಅವರು ಜನ ಕಲ್ಯಾಣಕ್ಕಾಗಿ ದಿನವಿಡಿ ಶ್ರಮಿಸುತ್ತಿರುವ ಅವರ ಜನಪರ ಕಾಳಜಿಯನ್ನು ಜನತೆ ಪ್ರೀತಿಯಿಂದ ಮೆಚ್ಚಿಕೊಂಡಿದ್ದಾರೆ ಅವರು ಯಾವುದೇ ಜನಪ್ರತಿನಿಧಿಯಾಗದಿದ್ದರೂ ಜನಪ್ರತಿನಿಧಿಗಳಿಗಿಂತ ಅವರ ಜನ ಕಲ್ಯಾಣದ ಸೇವೆಯು ಮೀಗಿಲಾಗಿದೆ, ಜೊತೆಗೆ ಜನರ ಸೇವೆ ಮಾಡುವ ತುಡಿತವನ್ನು ಅವರು ಹೊಂದಿದ್ದಾರೆ, ಯಾವ ಸ್ಥಾನಮಾನವಿಲ್ಲದಿದ್ದರೂ ಅವರು ನಯ-ವಿನಯದಿಂದ ತಾಳ್ಮೆಯಿಂದ ಜನತೆಯೊಂದಿಗೆ ಸಾಮಾಜಿಕ ಸೇವೆಗಳ ಬಗ್ಗೆ ಚರ್ಚಿಸುತ್ತಾರೆ.
ಕೊಪ್ಪಳ ವಿಧಾನ ಸಭಾ ಕ್ಷೇತ್ರದಲ್ಲಿ ಬೇಸಿಗೆಗಾಲದಲ್ಲಿ ಜನತೆಗೆ ಕುಡಿಯುವ ನೀರಿಗಾಗಿ ಉಚಿತವಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿ, ಉಚಿತ ಬೋರವೆಲ್ ಕೊರಿಸುವ ಮೂಲಕ “ನೀರು ಸಾಬು” ಎಂದೇ ಖ್ಯಾತರಾಗಿರುವ ಡಾ.ಕೆ.ಎಂ.ಸೈಯದ್ ಅವರ ಬಗ್ಗೆ ಜನತೆ ಸಾಕಷ್ಟು ಒಲವು ಹೊಂದಿದ್ದಾರೆ.
ಸಯ್ಯದ್ ಫೌಂಡೇಶನ್ ಚಾರಿಟೇಬಲ್ ಮೂಲಕ ಕಿರಿಯರು-ಹಿರಿಯರು ಎಂಬ ಬೇಧ ಭಾವವಿಲ್ಲದೇ ನಿತ್ಯ ಸಾಮಾಜಿಕ ಚಟುವಟಿಕೆಗಳ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಪಡೆಯುತ್ತಿದ್ದಾರೆ, ಕೊಪ್ಪಳ ವಿಧಾನಸಭೆ ಕ್ಷೇತ್ರದಲ್ಲಿ ಯುವ ಪಡೆಯೊಂದಿಗೆ ನಿತ್ಯ ಸಾಮಾಜಿಕ ಸೇವೆಯ ಮೂಲಕ ಸಂಘಟನಾ ಚಾತುರ್ಯ ಸೈಯದ್ ಅವರು ಕೊಪ್ಪಳ ವಿಧಾನಸಭೆ ಕ್ಷೇತ್ರದಲ್ಲಿ ಹೊಸ ಅಲೆಯನ್ನು ಸೃಷ್ಟಿ ಮಾಡಿದ್ದಾರೆ ಎಂಬ ಮಾತು ಈಗ ಕೊಪ್ಪಳ ವಿಧಾನಸಭೆ ಕ್ಷೇತ್ರದಲ್ಲಿ ಕೇಳಿಬರುತ್ತಿದೆ.
ಡಾ.ಕೆ.ಎಂ.ಸೈಯದ್ ಅವರು ಯಾವುದೇ ಜಾತಿ-ಧರ್ಮ-ಪಂತಕ್ಕೆ ಅಂಟಿದವರಲ್ಲ ಹಾಗೂ ಬಡವ-ಶ್ರೀಮಂತ ಎಂಬ ಅಂತಸ್ತಿನ ಬೇಧವಿಲ್ಲದೇ ಸಮಾಜದ ಪ್ರತಿಯೊಬ್ಬರ ಬದುಕು ಹಸನಾಗಬೇಕು ಅವರ ಕಷ್ಟ ಕಾರ್ಪಣೆಗಳನ್ನು ದೂರ ಮಾಡಬೇಕು ಎಂಬ ಧೈಯ ಹೊಂದಿ ಸೈಯದ್ ನಿತ್ಯ ಜನಾನುರಾಗಿಯಾಗಿ ಕ್ಷೇತ್ರದ ಜನರ ಪ್ರೀತಿಯನ್ನು ಗಳಿಸುವ ಕಾಯಕದತ್ತ ನಿರತರಾಗಿದ್ದಾರೆ.
ಮನುಷ್ಯ ಸಮಾಜದ ಶಕ್ತಿಯಾಗಿ ದುಡಿದಾಗ ಅವನನ್ನು ಅವನ ಸಾಧನೆಯನ್ನು ಆತ ಮಾಡಿದ ಕೆಲಸವನ್ನು ಸಮಾಜ ಗುರುತಿಸಿ ಗೌರವಿಸುತ್ತದೆ.
ತಾಲೂಕಿನಲ್ಲಿ ಯುವ ಜನಾಂಗ ಪ್ರೋತ್ಸಾಹಿಸಲು ವಿವಿಧ ಕ್ರೀಡೆ ಗಳನ್ನು ಆಯೋಜಿಸಿ ಫೌಂಡೇಶನ್ ಮೂಲಕ ಸಹಾಯ ಸಹಕಾರ ನೀಡುವ ಮೂಲಕ ಯುವಕರಿಗೆ ಮಾದರಿಯಾಗಿದ್ದಾರೆ, ದುಂದು ವೆಚ್ಚವಿಲ್ಲದ ಸಾಮೂಹಿಕ ವಿವಾಹಗಳಿಗೆ ಪ್ರತಿವರ್ಷ ಉಚಿತ ಮಾಂಗಲ್ಯ ಸೇರಿದಂತೆ ಇತರ ಸಹಾಯವನ್ನು ಮಾಡುತ್ತಾರೆ ಡಾ.ಕೆ.ಎಂ. ಸೈಯದ್.
ಗ್ರಾಮೀಣ ಭಾಗಗಳಲ್ಲಿ ಜಾತ್ರೆ ಉರುಸುಗಳಲ್ಲಿ ಗಂಡು ಮೆಟ್ಟಿದ ರಂಗಭೂಮಿ ಕಲೆಯಾದ ನಾಟಕ ಪ್ರದರ್ಶನಗಳನ್ನು ಉದ್ಘಾಟಿಸಿ ರಂಗಭೂಮಿ ಕಲೆಯನ್ನು ಉಳಿಸಿ ಬೆಳೆಸುವಂತೆ ಮನವಿ ಮಾಡುವರು ಡಾ. ಕೆ ಎಂ. ಸೈಯದ್.
ಸಹಕಾರ ಕ್ಷೇತ್ರದಲ್ಲಿ ಡಾ.ಕೆ.ಎಂ. ಸೈಯದ್ ಅವರು ಡಾ. ಅಬ್ದುಲ್ ಕಲಾಂ ಪತ್ತಿನ ಸಹಕಾರ ಸಂಘ ಸ್ಥಾಪಿಸಿ ಬ್ಯಾಂಕ್ ಮೂಲಕ ಜನತೆಗೆ ಸಾಲ ನೀಡಿ ಅವರನ್ನು ಆರ್ಥಿಕವಾಗಿ ಸದೃಢಗೊಳಿಸಿ ಅಲ್ಲಿ ಸಹ ಜನಪ್ರಿಯತೆ ಹೊಂದಿದ್ದಾರೆ.
ಇವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಇತ್ತೀಚೆಗೆ ಡಾಕ್ಟರೇಟ್ ಪದವಿ ಸಹ ಅವರಿಗೆ ಲಭಿಸಿದೆ.
ಡಾ.ಕೆ.ಎಂ.ಸೈಯದ್ ಅವರು ಈಗ ಕರ್ನಾಟಕ ಪ್ರದೇಶ ಕಾಂಗ್ರೆಸ್(ಕೆಪಿಸಿಸಿ) ಪಕ್ಷದ ಸಂಯೋಜಕರಾಗಿ, ಕೊಪ್ಪಳದ ಜನಪ್ರಿಯ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ್, ಸಂಸದರಾದ ಕೆ.ರಾಜಶೇಖರ್ ಹಿಟ್ನಾಳ್ ಅವರೊಂದಿಗೆ ಜೊತೆಗೂಡಿ ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ.
ಇಂದು 44ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಡಾ.ಕೆ.ಎಂ.ಸೈಯದ್ ಅವರಿಗೆ ಕೊಪ್ಪಳ ವಿಧಾನಸಭಾ ಕ್ಷೇತ್ರದ ಜನತೆ ಶುಭ ಕೋರಿದ್ದಾರೆ.