
ಕೊಪ್ಪಳ : ಸೈಯದ್ ಫೌಂಡೇಶನ್ ಅಧ್ಯಕ್ಷ, ರಾಜ್ಯ ಕೆಪಿಸಿಸಿ ಸಂಯೋಜಕ ಡಾ.ಕೆ.ಎಂ.ಸೈಯದ್ ಅವರ 44ನೇ ಜನ್ಮ ದಿನಾಚರಣೆ ನಾಳೆ ಜುಲೈ 1 ರಂದು ಕೊಪ್ಪಳ ತಾಲೂಕಿನ ಹುಲಿಗಿ ಹೊಸಳ್ಳಿಯ ಕೆಎಂಎಸ್ ಕಚೇರಿ ಸೇರಿದಂತೆ ವಿವಿಧೆಡೆ ಆಚರಣೆಗೆ ಸೈಯದ್ ಅಭಿಮಾನಿ ಬಳಗ ಭರ್ಜರಿ ಸಿದ್ಧತೆ ನಡೆಸಿದೆ.
ಜನ್ಮದಿನದ ಅಂಗವಾಗಿ, ಹಲವಾರು ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು,ಈ ಕಾರ್ಯಕ್ರಮಗಳಲ್ಲಿ ಪ್ರತಿಯೊಬ್ಬರ ಸಹಭಾಗಿತ್ವ ಬಹುಮುಖ್ಯವಾಗಿದೆ.
ಅಂದು ಉಚಿತ ಕಣ್ಣಿನ ತಪಾಸಣೆ ಶಿಬಿರ,ರಕ್ತದಾನ ಶಿಬಿರ, ವೃದ್ಧಾಶ್ರಮಗಳಿಗೆ ಹಣ್ಣುಗಳ ವಿತರಣೆ, ವೃಕ್ಷಾರೋಪಣಾ ಅಭಿಯಾನ ಈ ಎಲ್ಲಾ ಕಾರ್ಯಕ್ರಮಗಳು ಸಮಾಜದ ಒಳಿತಿಗಾಗಿ ಮತ್ತು ಮಾನವೀಯ ಮೌಲ್ಯಗಳ ಪ್ರಚಾರಕ್ಕಾಗಿ ನಡೆಯುತ್ತಿವೆ,ನಾವು ಎಲ್ಲರೂ ಒಂದಾಗಿ, ಸಹಕಾರದಿಂದ ಈ ವಿಶೇಷ ದಿನವನ್ನು ಅರ್ಥ ಪೂರ್ಣವಾಗಾಗಿ ನಡೆಸೋಣ,ಸೇವೆಯ ಮಾರ್ಗವೇ ನಿಜವಾದ ಹುಟ್ಟುಹಬ್ಬದ ಸಂಭ್ರಮ – ಅದನ್ನು ಪ್ರತಿಬಿಂಬಿಸುತ್ತಿದೆ ಈ ದಿನ ಎಂದು ಅಭಿಮಾನಿಗಳು ತಿಳಿಸಿದ್ದಾರೆ.