
ಕೊಪ್ಪಳ : ಗಂಗಾವತಿ ಮತ್ತು ಕನಕಗಿರಿ ಭಾಗದ ವಿಜಯನಗರ ಕಾಲದ ತುಂಗಭದ್ರಾ ಮೇಲ್ದಂಡೆ ಬಲದಂಡೆ ಕಾಲುವೆಗಳ ಕೆಳಬಾಗದ ರೈತರ ಕೃಷಿಗೆ ನೀರು ತಲುಪುತ್ತಿಲ್ಲ ಕೂಡಲೇ ನೀರು ತಲುಪಲು ನೀರಾವರಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಕೊಪ್ಪಳ ಜಿಲ್ಲಾ ಗ್ಯಾರೆಂಟಿ ಯೋಜನೆ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ್ ಒತ್ತಾಯಿಸಿದ್ದಾರೆ.
ಅವರು ಎರಡು ಕಾಲುವೆಗಳನ್ನು ಅಧಿಕಾರಿಗಳೊಂದಿಗೆ ವೀಕ್ಷಿಸಿ ಮಾತನಾಡಿ ವಿಜಯನಗರ ಕಾಲದ ತುಂಗಭದ್ರಾ ಮೇಲ್ದಂಡೆ ಬಲದಂಡೆ ಕಾಲುವೆಗಳ ಅಧುನೀಕರಣಕ್ಕಾಗಿ ಆರ್ ಎನ್ ಎಸ್ ಕಂಪನಿಯವರಿಗೆ ಗುತ್ತಿಗೆ ನೀಡಲಾಗಿತ್ತು ಆದರೆ ಈ ಕಾಮಗಾರಿ ಸರಿಯಾಗಿ ನಿರ್ವಹಿಸದೆ ಅಲ್ಲಲ್ಲಿ ಸುಮಾರು ನಾಲ್ಕು-ಐದು ಕಿಲೋಮೀಟರ್ ಕಾಮಗಾರಿ ಮಾಡದೆ ಇರುವುದರಿಂದ ಅಂತ ಸ್ಥಳದಲ್ಲಿ ಕಸ ಕಡ್ಡಿ, ಜಾಲಿ ಕಂಠಿ, ಕೆಲವು ಗಿಡಗಳು ಬೆಳೆದು ಗಂಗಾವತಿ, ಹಿರೇ ಜಂತಕಲ್, ಚಿಕ್ಕ ಜಂತಕಲ್,ಅಯೋಧ್ಯ,ಹೊಸಳ್ಳಿ ಭಾಗ,ಅಚಲಾಪುರ,ಡಣಾಪುರ ಸೇರಿದಂತೆ ಇತರ ಗ್ರಾಮಗಳ ಕೆಳಭಾಗದ ರೈತರಿಗೆ ನೀರು ತಲುಪುತ್ತಿಲ್ಲ, ಹೀಗಾಗಿ ರೈತರ ಕೃಷಿ ಚಟುವಟಿಕೆಗಳಿಗೆ ತುಂಬಾ ತೊಂದರೆಯಾಗುತ್ತಿದ್ದು ಈ ಕುರಿತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರಿಗೆ ರೈತರಿಗೆ ಆಗುತ್ತಿರುವ ತೊಂದರೆ ಬಗ್ಗೆ ತಿಳಿಸಿದ್ದು ಅವರು ನೀರಾವರಿ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾತನಾಡಿ ಕೂಡಲೇ ಕ್ರಮ ಕೈಗೊಂಡು ರೈತರಿಗೆ ಅನುಕೂಲ ಮಾಡಿಕೊಡುವಂತೆ ಸೂಚನೆ ನೀಡಿದ್ದಾರೆ, ಹಾಗೂ ಕೂಡಲೇ ಕಾಮಗಾರಿ ನಿರ್ವಹಿಸಿದ ಆರ್ ಎನ್ ಎಸ್ ಕಂಪನಿಯವರಿಗೆ ನೀರಾವರಿ ಅಧಿಕಾರಿಗಳು ಸೂಚನೆ ನೀಡಿ ಕಾಮಗಾರಿ ನಿರ್ವಹಿಸಿ ರೈತರಿಗೆ ಅನುಕೂಲ ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಇಇ ವೆಂಕಟೇಶ್, ಇಂಜಿನಿಯರ್ ರಾಜಶೇಖರ್, ಹಿರಿಯ ರೈತರಾದ ನಾರಾಯಣಪ್ಪ, ರಾಘವೇಂದ್ರ, ಅಯೋಧ್ಯ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರೇಣುಕಾನಂದಗೌಡ, ನೀರು ಬಳಕೆದಾರ ಸಂಘದ ವಿರುಪಾಕ್ಷಿ ಗೌಡ, ವಿನೋದ್, ಅನೇಕ ರೈತರು ಉಪಸ್ಥಿತರಿದ್ದರು.