
ಕೊಪ್ಪಳ: ನಗರದ ಜಿಲ್ಲಾ ಸರಕಾರಿ ನೌಕರರ ಸಾಂಸ್ಕೃತಿಕ ಭವನದಲ್ಲಿ ಕರ್ನಾಟಕ ರಾಜ್ಯ ನದಾಫ್ ಪಿಂಜಾರ ಸಂಘ ಶಿವಮೊಗ್ಗ, ಕೊಪ್ಪಳ ಗ್ರಾಮೀಣ ಘಟಕದಿಂದ ಉಚಿತ ಕನ್ನಡಕ ವಿತರಣೆ, ಸ್ಮಾರ್ಟ್ ಕಾರ್ಡ್ ವಿತರಣೆ, ತಾಲೂಕು ಮತ್ತು ಜಿಲ್ಲೆಯಿಂದ 2025 ರ ಕ್ಯಾಲೆಂಡರ್ ಬಿಡುಗಡೆ ಹಾಗೂ ಕೊಪ್ಪಳ ನಗರ ಘಟಕದ ಸದಸ್ಯರ ಮಾನ್ಯತಾ ಪತ್ರ ನೀಡುವ ಕಾರ್ಯಕ್ರಮದಲ್ಲಿ ಸಂಸದ ಕೆ.ರಾಜಶೇಖರ್ ಹಿಟ್ನಾಳ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ್ ಗುಪ್ತ, ರಾಜ್ಯ ಕೋಶ್ಯಾಧ್ಯಕ್ಷ ಶಹಬ್ಬುದ್ದೀನ್ ಸಾಬ್, ಕೊಪ್ಪಳ ಜಿಲ್ಲಾ ನದಾಫ್ ಪಿಂಜಾರ ಸಮಾಜದ ಅಧ್ಯಕ್ಷ ಕಾಶೀಂಅಲಿ ಮುದ್ದಾಬಳ್ಳಿ,ಭಾಗ್ಯನಗರ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಹೊನ್ನೂರಸಾಬ ಬೈರಾಪುರ,
ಕೊಪ್ಪಳ ತಾಲೂಕು ನದಾಫ್ ಪಿಂಜಾರ್ ಸಮಾಜದ ಅಧ್ಯಕ್ಷ ಅಸ್ಮಾನ್ ಸಾಬ್ , ನಗರಸಭೆ ಮಾಜಿ ಸದಸ್ಯ ಮಾನ್ವಿ ಪಾಶಾ, ವಿಜಯನಗರ ಜಿಲ್ಲಾಧ್ಯಕ್ಷ ಪಿ. ಹೊನ್ನೂರ್ ಸಾಬ್, ಕೊಪ್ಪಳ ತಾಲೂಕು ಉಪಾಧ್ಯಕ್ಷ ಫಕ್ರು ಸಾಬ್ ನದಾಫ್, ಅಲ್ಪಾ ಟ್ರಸ್ಟ್ ಅಧ್ಯಕ್ಷೆ ಶ್ರೀಮತಿ ಸಲೀಮಾ ಜಾನ್, ಮುಸ್ಲಿಂ ಪಂಚ್ ಕಮಿಟಿ ಅಧ್ಯಕ್ಷ ಖಾದರ್ ಸಾಬ್ ಕುದರಿಮೋತಿ, ತಾಲೂಕು ಉಪಾಧ್ಯಕ್ಷ ಮುರ್ತಜಸಾಬ ಚುಟ್ಟದ, ತಾಲೂಕು ಕಾರ್ಯದರ್ಶಿ ಮುಸ್ತಫಾ ಕುದರಿ ಮೋತಿ, ತಾಲೂಕ ಸಹ ಕಾರ್ಯದರ್ಶಿ ಶಕೀರ್ ನದಾಫ್ ಸೇರಿದಂತೆ ಸಮಾಜದ ಪದಾಧಿಕಾರಿಗಳು ಮುಖಂಡರು ಉಪಸ್ಥಿತರಿದ್ದರು.