ಕೊಪ್ಪಳ: ಮನುಷ್ಯನ ಜೀವನವನ್ನು ಕಾಲಚಕ್ರಕ್ಕೆ ಹೋಲಿಸಲಾಗಿದೆ ಒಂದು ಕ್ಷಣ ಮೇಲೆ ಮತ್ತೊಂದು ಕ್ಷಣ ಕೆಳಗೆ ,,ಒಂದು ಕ್ಷಣ ದುಃಖ ಒಂದು ಕ್ಷಣ ಸುಖ ..ಹೀಗೆ ಕಾಲಚಕ್ರದಡಿಯಲ್ಲಿ ಬದುಕುತ್ತಿರುವ ನಾವುಗಳು ನಮ್ಮ ದೈನಂದಿನ ಜೀವನದಲ್ಲಿ ಅನೇಕ ಪಾತ್ರಗಳನ್ನು ನಿಭಾಯಿಸುತ್ತೇವೆ….
ಆಧುನಿಕ ಜೀವನಶೈಲಿಯು ಯಾಂತ್ರಿಕವಾಗಿದೆ ಮನುಷ್ಯನು ಓಡುತ್ತಿದ್ದಾನೆ, ದಣಿವೆಯ ಪರಿವಿಲ್ಲದೆ ಏನನ್ನು ಸಾಧಿಸಲು ಮತ್ತೆ ನನ್ನು ಪಡೆಯಲು ಹವಣಿಸುತ್ತಿದ್ದಾನೆ, ತನಗರಿವಿಲ್ಲದೆ”ಒತ್ತಡ “ಎಂಬ ಬಲೆಯಲ್ಲಿ ಸಿಕ್ಕಿ ಒದ್ದಾಡುತ್ತಿದ್ದಾನೆ…..
ಒತ್ತಡ ಎಂಬುದು ಬರಿ ಮೂರಕ್ಷರದ ಪದವಿರಬಹುದು ಆದರೆ ಆನೆ ಗಾತ್ರದ ಮನುಷ್ಯನನ್ನು ಬುಡಮೇಲು ಮಾಡುವುದು ಇದನ್ನು ಆಹ್ವಾನಿಸಿಕೊಂಡಿದ್ದು ಯಾರು?? ನಾವೇ ಅಲ್ಲವೇ, ಈಗ ಮನುಷ್ಯನಲ್ಲಿ ಎಲ್ಲವೂ ಇದೆ ಹಣ ,ಅಧಿಕಾರ, ಅಂತಸ್ತು, ಎಲ್ಲವೂ ಇದೆ ಆದರೆ ನೆಮ್ಮದಿ ಇಲ್ಲ ನೆಮ್ಮದಿಯಿಂದ ಆರೋಗ್ಯವಿಲ್ಲ ,ಸಂತೋಷವಂತು ಮೊದಲೇ ಇಲ್ಲ ಕಾರಣ ಒತ್ತಡ ಯಾವುದೇ ಕೆಲಸ ಕಾರ್ಯಗಳು ಒತ್ತಡದಿಂದ ಕೂಡಿದ್ದರೆ ಅದು ಹಿತವಾಗಿರುವುದಿಲ್ಲ ಅದು ನಮ್ಮ ಎಲ್ಲವನ್ನು ಕಸಿದುಕೊಳ್ಳುತ್ತದೆ….
ಒತ್ತಡದಿಂದಾಗಿ ಅನೇಕ ವ್ಯತಿರಿಕ್ತ ಪರಿಣಾಮಗಳು ಆಗುತ್ತವೆ, ಮೊದಲನೆಯದಾಗಿ ದೈಹಿಕ ಸಮಸ್ಯೆಗಳು ಶುರುವಾಗುತ್ತವೆ, ಬಿಪಿ ,ಶುಗರ್, ನಿದ್ರಾಹೀನತೆ, ಮೈಗ್ರೇನ್, ಹೃದಯ ರೋಗ, , ಹೀಗೆ ಅನೇಕ ದೈಹಿಕ ಸಮಸ್ಯೆಗಳ ಸರಮಾಲೆಯೇ ಶುರುವಾಗಿಬಿಡುತ್ತದೆ..
ಮಾನಸಿಕಆರೋಗ್ಯದ ಮೇಲು ಕೂಡ ಅನೇಕ ಆತಂಕಕಾರಿ ಪರಿಣಾಮಗಳಾಗುತ್ತವೆ ಯಾವುದೇ ಕೆಲಸದಲ್ಲಿ ಏಕಾಗ್ರತೆ ಇಲ್ಲದೆ ಇರುವುದು, ಚಿಕ್ಕಪುಟ್ಟ ವಿಷಯಗಳಿಗೂ ಕೋಪ ಮಾಡಿಕೊಳ್ಳುವುದು, ಯಾವಾಗಲೂ ಆತಂಕದಿಂದ ಇರುವುದು, ಖಿನ್ನತೆಯಿಂದ ಬಳಲುವುದು ಸದಾಕಾಲ ಕಿರಿಕಿರಿ ಯುಕ್ತ ಮನಸ್ಥಿತಿಯಲ್ಲಿರುವುದು ಹೀಗೆ ಮಾನಸಿಕ ವ್ಯವಸ್ಥೆಯ ಮೇಲೆ ಪರಿಣಾಮಗಳಾಗುತ್ತವೆ…..
ಇದರಿಂದ ಸಾಮಾಜಿಕ ಜೀವನದ ಮೇಲೆಯೂ ಪ್ರಭಾವ ಬೀರುತ್ತದೆ ಆರ್ಥಿಕ ಪರಿಸ್ಥಿತಿಯು ಮೇಲು ಕೂಡ ಪರಿಣಾಮವಾಗುತ್ತದೆ ಕೌಟುಂಬಿಕ ವಾತಾವರಣವಿರಲಿ, ಸಂಬಂಧಗಳಲ್ಲಿ ಸ್ನೇಹಗಳಲ್ಲಿ ಪರಿಣಾಮಗಳಾಗುತ್ತವೆ…
ಹಾಗಾದರೆ ಈ ಒತ್ತಡ ಉಂಟಾಗಲು ಕಾರಣಗಳು ಏನು????
೧ ಹಿಂದಿನ ಕಹಿ ಘಟನೆಗಳು ನೋವುಗಳು
೨ ಆರೋಗ್ಯದಲ್ಲಿರುವ ಸಮಸ್ಯೆಗಳು
೩ ಕೌಟುಂಬಿಕ ಘರ್ಷಣೆಗಳು ಜಗಳಗಳು
೪ ಕೆಲಸ ಮಾಡುತ್ತಿರುವ ಸ್ಥಳದಲ್ಲಿ ಉದ್ಯೋಗದಲ್ಲಿ ಅತಿಯಾದ ಬೇಡಿಕೆ ಮತ್ತು ಗಡುವುಗಳು , ಮೇಲಾಧಿಕಾರಿಗಳ ಕಿರಿಕಿರಿ
೫ ಬದುಕಿನಲ್ಲಿ ಬಂದಂತಹ ಕೆಲವೊಂದು ಅನಿರೀಕ್ಷಿತ ಬದಲಾವಣೆಗಳು ಘಟನೆಗಳು
ಹೀಗೆ ಹತ್ತು ಹಲವಾರು ಕಾರಣಗಳಿಂದ ಒತ್ತಡ ಉಂಟಾಗುತ್ತದೆ ಇವುಗಳನ್ನು ಸರಿಯಾದ ಸಮಯದಲ್ಲಿ ಗುರುತಿಸಿ ಸರಿಯಾದ ಕ್ರಮ ತೆಗೆದುಕೊಳ್ಳಬೇಕು ಇಲ್ಲವಾದರೆ ಯಾವ ಮಟ್ಟಕ್ಕಾದರೂ ಹೋಗಿ ಸರಿಪಡಿಸದೇ ಇರುವ ಸ್ಥಿತಿ ತಲುಪಬಹುದು….
“ಒತ್ತಡ ರಹಿತ ಬದುಕಿಗೆ ಕೆಲವೊಂದು ಮಾರ್ಗಗಳು”
• ಯೋಗ ಧ್ಯಾನ: ನಮ್ಮ ಪರಂಪರೆ ಯೋಗ ಧ್ಯಾನಕ್ಕೆ ಪೂಜನೆಯ ಸ್ಥಾನಮಾನವಿದೆ, ಯೋಗವು ಮನುಷ್ಯನನ್ನು ಶಾರೀರಿಕವಾಗಿ ಸದೃಢ ಮಾಡಿದರೆ ,,ಧ್ಯಾನವು ಮನುಷ್ಯನನ್ನು ಮಾನಸಿಕವಾಗಿ ಸದೃಢವಾಗಿ ಮಾಡುತ್ತದೆ ಇದು ನಮ್ಮನ್ನು ಒತ್ತಡದಿಂದ ಹೊರ ತರಲು ಉತ್ತಮ ಮಾರ್ಗವಾಗಿದೆ….
• ಸಮಾಧಾನ ಚಿತ್ತ: ಒತ್ತಡವನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕಾದರೆ ಮೈಂಡ್ ಪವರ್ ಬೇಕು ಉತ್ತಮ ಉಸಿರಾಟದ ತಂತ್ರಗಳಿಂದ ನಮ್ಮ ನಕಾರಾತ್ಮಕ ಭಾವನೆಗಳನ್ನು ನಾವು ಗೆಲ್ಲಬಹುದು ನಕಾರಾತ್ಮಕತೆಯಿಂದ ದೂರಾದಾಗ ಒತ್ತಡವನ್ನು ಗೆಲ್ಲಬಹುದು ಮನಸ್ಸು ಉಸಿರಾಟದ ತಂತ್ರದಿಂದ ಸಮಚಿತ್ತದಿಂದ ಇದ್ದಾಗ ಒತ್ತಡ ನಿವಾರಿಸಿಕೊಳ್ಳಬಹುದು….
• ದೈನಂದಿನ ಜೀವನದಲ್ಲಿ ಸಮಯದ ಪರಿಪಾಲನೆ: ನಾವು ಸಮಯಕ್ಕೆ ಎಷ್ಟು ಮಹತ್ವ ಕೊಡುತ್ತೇವೆಯೋ ಅಷ್ಟು ಸಮಯ ಎನ್ನುವುದು ನಮ್ಮನ್ನು ಕಾಪಾಡುತ್ತದೆ ನಮ್ಮ ಜೀವನ ಶೈಲಿಯಲ್ಲಿ ನಾವು ಶಿಸ್ತುಬದ್ಧರಾಗಿ ಸಮಯದ ಪರಿಪಾಲನೆ ಮಾಡಿ ನಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡಾಗ ಅಂದು ಮಾಡಬೇಕಾದ ಕಾರ್ಯ ಅಂದೆ ಮಾಡಿದಾಗ ಸಮತೋಲಿತವಾದ ಸಮಯದ ನಿರ್ವಹಣೆಯಿಂದ ಒತ್ತಡವನ್ನು ನಿಯಂತ್ರಿಸಬಹುದು….
• ಪ್ರೀತಿ ಪಾತ್ರರೊಂದಿಗೆ ಕಾಲ ಕಳೆಯುವುದು: ದಣಿದು ಮನೆಗೆ ಬಂದಾಗ ನಮ್ಮ ಪ್ರೀತಿ ಪಾತ್ರದೊಡನೆ ನಾವು ಸಮಯ ಕಳೆಯಬೇಕು ವಾಯುವಿಹಾರ ಸ್ನೇಹಿತರೊಂದಿಗೆ ಹರಟೆ, ಇದರಿಂದ ಅನೇಕ ವಿಷಯಗಳ ವಿನಿಮಯವಾಗಿ ಮನಸ್ಸು ಪ್ರಸನ್ನವಾಗುತ್ತದೆ ಮತ್ತು ಒತ್ತಡದಿಂದ ಹೊರಬರಲು ದಾರಿಯಾಗುತ್ತದೆ
• ಉತ್ತಮ ಆಹಾರ: ಇದೊಂದು ಪ್ರಮುಖ ಅಂಶ ಒತ್ತಡ ಉಂಟಾದಾಗ ಕೆಲವರಿಗೆ ತಿನ್ನುವ ಹವ್ಯಾಸವಿರುತ್ತದೆ ಹಾಗಂತ ಜಂಕ್ ಫುಡ್ ತಿನ್ನದೆ ಸತ್ವಯುತ ಕ್ವಾಲಿಟಿ ಆಹಾರವನ್ನು ನಾವು ತಿನ್ನಬೇಕು ಉತ್ತಮ ಪೋಷಕಾಂಶಗಳು ಕೂಡ ಉತ್ತಮ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತವೆ. ಉತ್ತಮ ಗುಣಮಟ್ಟದ ಆಹಾರವು ಕೂಡ ಒತ್ತಡ ಮುಕ್ತ ಜೀವನಕ್ಕೆ ಒಂದು ದಾರಿ..
• ಉತ್ತಮ ಹವ್ಯಾಸಗಳು: ಉತ್ತಮ ಹವ್ಯಾಸಗಳು ಕೂಡ ನಾವು ಒತ್ತಡದಿಂದ ಹೊರಬರಲು ಸಹಾಯಕವಾಗುತ್ತವೆ ಸಂಗೀತ, ಚಿತ್ರಕಲೆ, ಓದುವುದು, ಪ್ರವಾಸ, ಉತ್ತಮವಾದ ಹವ್ಯಾಸಗಳು ಕೂಡ ನಮ್ಮ ಒತ್ತಡ ರೈತ ಬದುಕಿಗೆ ಕಾರಣವಾಗುತ್ತದೆ…
ಹೀಗೆ ಉತ್ತಮ ಮಾರ್ಗಗಳನ್ನು ಹುಡಿಕೊಂಡ್ ಹುಡುಕಿಕೊಂಡು ಅವುಗಳನ್ನು ಅನುಸರಿಸಿದಾಗ ನಾವು ಒತ್ತಡ ಮುಕ್ತ ಜೀವನಶೈಲಿಯನ್ನು ರೂಡಿಸಿಕೊಂಡು ಉತ್ತಮ ಜೀವನವನ್ನು ನಡೆಸಬಹುದು…
ಹಿರಿಯರು ಅನುಭವಿಗಳು ,ದಾರ್ಶನಿಕರು, ಇವತ್ತಡ ನಿರ್ವಹಣೆಯ ಬಗ್ಗೆ ತಮ್ಮ ತತ್ವಗಳಲ್ಲಿಯೇ ಹೇಳಿದ್ದಾರೆ ಅವುಗಳನ್ನು ಅರಿತು ಬಾಳಿದರೆ ಬಾಳು ಹಸನಾದಿತು….
ಒತ್ತಡ ಮುಕ್ತ ಜೀವನಕ್ಕೆ ಈಗ ಹತ್ತು ಹಲವಾರು ಟ್ರೈನಿಂಗ್ ಸೆಂಟರ್ ಗಳು ತೆರೆದುಕೊಂಡಿವೆ. ಅವರುಗಳು ಸಹ ತಮ್ಮ ಬಳಿ ಬರುವವರಿಗೆ ಅದರಿಂದ ಹೊರಬರುವ ದಾರಿಯನ್ನು ತಿಳಿಸಿ ಕೊಡುತ್ತಾರೆ ಆದರೆ ನಿಜವಾಗಿಯೂ ಅದನ್ನು ಗೆಲ್ಲುವ ಮನಸ್ಥಿತಿ ನಮಗೆ ಬಂದರೆ ಅದರಲ್ಲಿ ಖಂಡಿತವಾಗಿಯೂ ನಾವು ಜಯಶಾಲಿಗಳಾಗುತ್ತೇವೆ…
ನಮ್ಮ ಆಲೋಚನೆಗಳೇ ನಮ್ಮ ಉನ್ನತಿ ಅವನತಿಗಳಿಗೆ ಕಾರಣ ನಮ್ಮ ಯೋಚನೆಗಳು ನಮ್ಮನ್ನು ವಂಚಿಸಿದಷ್ಟು ಬೇರೆ ಯಾರು ವಂಚಿಸಲಾರರು,, ಅತಿಯಾದ ಆಲೋಚನೆ, ಬೇರೆಯವರೊಂದಿಗೆ ನಮ್ಮನ್ನು ಹೋಲಿಸಿಕೊಳ್ಳುವುದು ,ಆಗದೆ ಇರುವ ಘಟನೆಗಳ ಬಗ್ಗೆ ಊಹಾಪೋಹ, ಬೇರೆಯವರೊಂದಿಗೆಸ್ಪರ್ಧೆಗೆ ಇಳಿಯುವುದು ಇವೆಲ್ಲ ಬಲಹೀನ ಮನಸ್ಥಿತಿಯ ಲಕ್ಷಣಗಳು,.. ಮನಸ್ಸು ಪ್ರಬಲವಾಗಿದ್ದಾಗ ದೃಷ್ಟಿ ಸ್ಪಷ್ಟವಾಗಿರುತ್ತದೆ ದೃಷ್ಟಿ ಸ್ಪಷ್ಟವಿದ್ದಾಗ ನಮ್ಮ ಮೇಲೆ ನಮಗೆ ಆತ್ಮವಿಶ್ವಾಸ ಬರುತ್ತದೆ ಆತ್ಮವಿಶ್ವಾಸದಿಂದ ಇದ್ದಾಗ ಮನಸ್ಸು ಪ್ರಫು ಲೀತ ವಾಗಿರುತ್ತದೆ ಪ್ರಬಲ ಮನಸ್ಸಿನ ಕಡೆ ಒತ್ತಡ ಸುಳಿಯುವುದಿಲ್ಲ ಹಾಗೆ ನಾವು ಮಾನಸಿಕವಾಗಿ ಪ್ರಬಲರಾಗಿರಲು ಸಿದ್ಧರಾಗಬೇಕು ..ನಾವು ಉತ್ತಮ ಆಲೋಚನೆಗಳನ್ನು ಮನಸ್ಸಿನಲ್ಲಿ ,ತಲೆಯಲ್ಲಿ ತುಂಬಿದಾಗ ಎಲ್ಲವೂ ಉತ್ತಮವಾಗಿಯೇ ಇರುತ್ತದೆ . ನಾವು ನಮ್ಮ ಮನಸ್ಸಿನ ಮಾಲೀಕರ ಹೊರತು ಗುಲಾಮರಲ್ಲ…
ಒತ್ತಡವನ್ನು ಗೆಲ್ಲುವುದು ಕಷ್ಟ ಸಾಧ್ಯವಲ್ಲ ಪ್ರಯತ್ನ ಪಟ್ಟಾಗ ನಾವು ಒತ್ತಡ ರಹಿತರಾಗಿ ಬದುಕಬಹುದು ..
ಇಂದಿನ ನಮ್ಮ ಆಧುನಿಕ ಜೀವನಶೈಲಿಯಲ್ಲಿ ಸ್ಟ್ರೆಸ್ ಮ್ಯಾನೇಜ್ಮೆಂಟ್ ಅನ್ನು ಸೆಲ್ಫಾಗಿ ಕಲಿತು ಆರಾಮದಾಯಕ ಬದುಕನ್ನು ನಮ್ಮದಾಗಿಸಿಕೊಳ್ಳೋಣ….. ಆರೋಗ್ಯದ ಜೀವನವನ್ನು ನಡೆಸೋಣ……
—–ಶ್ರೀಮತಿ ಚೈತ್ರ ವೀರೇಶ್ ಕೊಪ್ಪಳ
ನ್ಯಾಯವಾದಿಗಳು ,ಅಧ್ಯಕ್ಷರು
ಶ್ರೀ ದಾನೇಶ್ವರಿ ಮಹಿಳಾ ವೇದಿಕೆ ಕೊಪ್ಪಳ.
