ಶಿಕ್ಷಕರಾಗಿ ಸಾರ್ಥಕ ಸೇವೆಗೈದ ಶಂಭುಲಿಂಗೇಗೌಡ ಪಾಟೀಲ್ ಹಲಗೇರಿ.
* ನೌಕರರ- ಶಿಕ್ಷಕರ ಕುಟುಂಬದ ಹಿರಿಯ ಅಣ್ಣನೆಂದೇ ಹೆಸರಾದವರು.
(ಶಂಭುಲಿಂಗಗೌಡ ಪಾಟೀಲ್ ಹಲಗೇರಿ ಇವರು ದಿನಾಂಕ 31-5 -2026ರಂದು ನಿವೃತ್ತಿ ನಿಮಿತ್ತ ಲೇಖನ)
ಕೊಪ್ಪಳ : ಜನನದಿಂದಲೇ ಸರಳತೆ, ಸೇವಾಭಾವ ಮತ್ತು ಸಂಘಟನಾ ಚಾತುರ್ಯವನ್ನು ಜೀವನದ ಮೌಲ್ಯವನ್ನಾಗಿಸಿಕೊಂಡು ಶಿಕ್ಷಣ ಕ್ಷೇತ್ರದಲ್ಲಿಯೂ, ನೌಕರರ ಹಾಗೂ ಶಿಕ್ಷಕರ ಸಂಘಟನೆಗಳಲ್ಲಿಯೂ ಅಪಾರ ಗೌರವ ಗಳಿಸಿರುವ ವ್ಯಕ್ತಿತ್ವವೇ ಶಂಭುಲಿಂಗನಗೌಡ ಪಾಟೀಲ್ ಅವರು 01.06.1966 ರಂದು ಕೊಪ್ಪಳ ಜಿಲ್ಲೆಯ ಹಲಗೇರಿ ಗ್ರಾಮದಲ್ಲಿ ವಿರುಪನಗೌಡ ಪಾಟೀಲ್ ಹಾಗೂ ಶ್ರೀಮತಿ ಈರಮ್ಮ ದಂಪತಿಗಳ ಮೂರನೇ ಮಗನಾಗಿ ಜನಿಸಿದರು. ಏಳು ಸಹೋದರರಿರುವ ಈ ಕುಟುಂಬ ಇಂದಿಗೂ ರಾಮ-ಲಕ್ಷ್ಮಣರಂತೆ ಒಗ್ಗಟ್ಟಿನಿಂದ ಬದುಕುತ್ತಿರುವುದು ಇವರ ಕುಟುಂಬ ಮೌಲ್ಯಗಳ ಪ್ರತೀಕವಾಗಿದೆ.
ಇವರ ಧರ್ಮಪತ್ನಿ ಶ್ರೀಮತಿ ಶಾಂತಮ್ಮ ಅವರು ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಂತರ ಸ್ವಯಂ ನಿವೃತ್ತಿ ಹೊಂದಿದ್ದಾರೆ. ಇವರಿಗೆ ಮಾನಸ ಹಾಗೂ ಮಂಜುನಾಥ ಎಂಬ ಇಬ್ಬರು ಮಕ್ಕಳು ಇದ್ದು, ಇಬ್ಬರ ವಿವಾಹವೂ ನೆರವೇರಿಸಲಾಗಿದೆ.

ಶೈಕ್ಷಣಿಕ ಜೀವನ :
1 ರಿಂದ 7ನೇ ತರಗತಿ – ಸ್ವಗ್ರಾಮ ಹಲಗೇರಿಯಲ್ಲಿ
8 ರಿಂದ 10ನೇ ತರಗತಿ ಕೆವಿಎಸ್ ಆರ್, ಶಿಕ್ಷಣ ಸಂಸ್ಥೆ,ಗದಗ
ಪಿಯುಸಿ – ಸರ್ಕಾರಿ ಪದವಿಪೂರ್ವ ಕಾಲೇಜು, ಕೊಪ್ಪಳ,ಟಿಸಿ ಎಚ್ – ಸರ್ಕಾರಿ ಶಿಕ್ಷಕರ ತರಬೇತಿ ಕೇಂದ್ರ, ಕೊಪ್ಪಳ,ಪದವಿ (B.A.) – ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯ, ಕೊಪ್ಪಳ
ಶಿಕ್ಷಕ ಸೇವೆಯ ಪಯಣ
ಶಿಕ್ಷಕ ವೃತ್ತಿಯನ್ನು ಸೇವೆಯ ರೂಪದಲ್ಲಿ ಕಂಡು ಸಾವಿರಾರು ಮಕ್ಕಳ ಬದುಕಿಗೆ ಬೆಳಕಾದ ಶಂಭುಲಿಂಗನಗೌಡ ಪಾಟೀಲ್ ಗುರುಗಳು ತಮ್ಮ ಶಿಕ್ಷಕ ಜೀವನವನ್ನು ದಿನಾಂಕ 12.08.1988 ರಂದು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಅರಷನಘಟ್ಟ ಶಾಲೆಯಲ್ಲಿ ಪ್ರಾರಂಭಿಸಿದರು.
ಅಲ್ಲಿ 3 ವರ್ಷ 3 ತಿಂಗಳು ಸೇವೆ ಸಲ್ಲಿಸಿದ ನಂತರ:
30.11.1991 ರಿಂದ ಗಂಗಾವತಿ ತಾಲೂಕಿನ ಮಲ್ಲಾಪುರ ಶಾಲೆಯಲ್ಲಿ 6 ವರ್ಷಗಳ ಸೇವೆ
25.05.1998 ರಿಂದ ಎಂಎಚ್ ಪಿ ಎಸ್ ಗಿಣಿಗೇರಿ ಶಾಲೆಯಲ್ಲಿ 4 ವರ್ಷಗಳ ಕಾಲ ಕರ್ತವ್ಯ
2002 ರಿಂದ ಕೊಪ್ಪಳದ ಸರ್ದಾರಗಲ್ಲಿ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ
2010ರಲ್ಲಿ ಮುಖ್ಯೋಪಾಧ್ಯಾಯರಾಗಿ ಬಡ್ತಿ ಪಡೆದು 2023ರವರೆಗೆ 21 ವರ್ಷಗಳ ಸುದೀರ್ಘ ಸೇವೆ
27.06.2023 ರಿಂದ 05.01.2026ರವರೆಗೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮೈನಳ್ಳಿಯಲ್ಲಿ ಹಿರಿಯ ಮುಖ್ಯೋಪಾಧ್ಯಾಯರಾಗಿ ಸೇವೆ
ನಂತರ ಹೆಚ್ಚುವರಿ ವರ್ಗಾವಣೆಯ ಮೂಲಕ ತಮ್ಮ ಜನ್ಮಭೂಮಿ ಹಲಗೇರಿಯಲ್ಲಿ ಸೇವೆ ಸಲ್ಲಿಸುವ ಭಾಗ್ಯ ಇವರದಾಯಿತು.
ಒಟ್ಟಾರೆಯಾಗಿ ಇವರು 37 ವರ್ಷ 5 ತಿಂಗಳು 2 ದಿನಗಳ ಸುದೀರ್ಘ ಹಾಗೂ ಆದರ್ಶ ಶಿಕ್ಷಕ ಸೇವೆ ಪೂರ್ಣಗೊಳಿಸಿ ಇದೇ ವರ್ಷ ಮೇ 31ರಂದು 2026 ನಿವೃತ್ತಿ ಹೊಂದಲಿದ್ದಾರೆ.
ಸಂಘಟನಾ ಜೀವನ : ಸೇವೆಯ ಮತ್ತೊಂದು ಮುಖ
ಶಿಕ್ಷಕ ವೃತ್ತಿಯ ಜೊತೆಗೆ ಸಂಘಟನಾ ಕ್ಷೇತ್ರದಲ್ಲಿಯೂ ಅಪಾರ ಸಾಧನೆ ಮಾಡಿದ ಶಂಭುಲಿಂಗನಗೌಡ ಪಾಟೀಲ್ ಅವರು ಶಿಕ್ಷಕರ ಮತ್ತು ನೌಕರರ ಬದುಕಿನ ಆಶಾಕಿರಣವಾಗಿ ಬೆಳೆದಿದ್ದಾರೆ.
ಸಂಘಟನೆಯಲ್ಲಿ ಇವರ ಬೆಳವಣಿಗೆ
ವಿದ್ಯಾರ್ಥಿ ಜೀವನದಲ್ಲೇ 10ನೇ ತರಗತಿಯಲ್ಲಿ ಜನರಲ್ ಸೆಕ್ರೆಟರಿಯಾಗಿ ಆಯ್ಕೆ
1994ರಲ್ಲಿ ಗಂಗಾವತಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ,
1997ರಲ್ಲಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ
1998ರಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಪಾದಾರ್ಪಣೆ
1999ರಲ್ಲಿ ರಾಜ್ಯ ಪರಿಷತ್ ಸದಸ್ಯರಾಗಿ ನಾಮನಿರ್ದೇಶನ
2002ರಲ್ಲಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿ ಅವಿರೋಧ ಆಯ್ಕೆ
ನಂತರ ಚುನಾವಣೆ ಮೂಲಕ 5 ವರ್ಷಗಳ ಅವಧಿಗೆ ಜಿಲ್ಲಾಧ್ಯಕ್ಷರಾಗಿ ಆಯ್ಕೆ
ನೌಕರರ ಸಂಘಕ್ಕೆ ಸುಸಜ್ಜಿತ ಕಟ್ಟಡ ನಿರ್ಮಿಸಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ
2007ರಲ್ಲಿ ಮೂರನೇ ಬಾರಿಗೆ ಜಿಲ್ಲಾಧ್ಯಕ್ಷರಾಗಿ ಆಯ್ಕೆ
ನೌಕರರ ಸದನ ನಿರ್ಮಾಣಕ್ಕೆ 21 ಲಕ್ಷ ರೂ. ಸಂಗ್ರಹ
ರಾಜ್ಯ ನೌಕರರ ಸಂಘದ ಉಪಾಧ್ಯಕ್ಷರಾಗಿ ಆಯ್ಕೆ
ಸರ್ಕಾರಿ ನೌಕರರ ಗೃಹ ಮಂಡಳಿಯ ಜಿಲ್ಲಾ ಅಧ್ಯಕ್ಷರಾಗಿ 10 ವರ್ಷಗಳಿಂದ ಸೇವೆ
2020 ಡಿಸೆಂಬರ್‌ನಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾಗಿ ಅವಿರೋಧ ಆಯ್ಕೆಗೊಂಡು ಕೊಪ್ಪಳ ಜಿಲ್ಲೆಯ ಹೆಮ್ಮೆ ಹೆಚ್ಚಿಸಿದರು.
ವ್ಯಕ್ತಿತ್ವ ಮತ್ತು ಜನಮಾನ್ಯತೆ
ಶಂಭುಲಿಂಗನಗೌಡ ಪಾಟೀಲ್ ಗುರುಗಳನ್ನು ಪ್ರತಿಯೊಬ್ಬರೂ ಪ್ರೀತಿಯಿಂದ ಶಂಬಣ್ಣ“ಅಣ್ಣಾ” ಎಂದೇ ಕರೆಯುತ್ತಾರೆ. ಶಿಕ್ಷಕರಾಗಲಿ, ನೌಕರರಾಗಲಿ, ಅಧಿಕಾರಿಗಳಾಗಲಿ – ಎಲ್ಲರಿಗೂ ಸಮಾನ ಗೌರವ ನೀಡುವ ಇವರ ವ್ಯಕ್ತಿತ್ವ ಅಪರೂಪದ್ದು.
ಸಭೆ-ಸಮಾರಂಭಗಳಲ್ಲಿ ಇವರ ಉಪಸ್ಥಿತಿ ಎಂದರೆ ಎಲ್ಲರೂ ಎದ್ದು ನಿಂತು ಗೌರವಿಸುವ ಮಟ್ಟದ ಮಾನ್ಯತೆ ಇವರಿಗೆ ಲಭಿಸಿದೆ.
ಸಂಘಟನೆಯಲ್ಲಿ ಇದ್ದವರೆಗೂ ಯಾವುದೇ ಶಿಕ್ಷಕ ಅಥವಾ ನೌಕರರಿಗೆ ತೊಂದರೆ ಆಗದಂತೆ ನೋಡಿಕೊಂಡ ಸೇವಾಭಾವ ಇವರದು.
ಮಕ್ಕಳ ಮೇಲಿನ ಪ್ರೀತಿ, ಪಾಠ ಪ್ರವಚನಗಳಲ್ಲಿನ ಪ್ರಾಮಾಣಿಕತೆ, ಸರಳತೆ, ತಾಳ್ಮೆ, ಸಹನೆ ಹಾಗೂ ಮಂದಹಾಸಭರಿತ ವ್ಯಕ್ತಿತ್ವ ಇವರನ್ನು ಎಲ್ಲರ ಮನಸಿನ ಅಣ್ಣನನ್ನಾಗಿಸಿದೆ.
ಹಲಗೇರಿ ಶಾಲೆಯಲ್ಲಿ ತಮ್ಮ ಸೇವೆಯನ್ನು ಪೂರ್ಣಗೊಳಿಸಿ ನಿವೃತ್ತಿಯಾಗುತ್ತಿರುವ ಶಂಭುಲಿಂಗನಗೌಡ ಪಾಟೀಲ್ ಗುರುಗಳು ಮುಂದಿನ ಜೀವನದಲ್ಲಿ ಸುಖ, ಸಂಪತ್ತು, ಆಯುರಾರೋಗ್ಯ ಹಾಗೂ ನೆಮ್ಮದಿಯಿಂದ ಬಾಳಲಿ.
ಹಲಗೇರಮ್ಮ ಹಾಗೂ ಗವಿಸಿದ್ದೇಶ್ವರರ ಆಶೀರ್ವಾದ ಸದಾ ಇವರ ಮೇಲೆ ಇರಲಿ. ಮುಂದೆಯೂ ಸಮಾಜಸೇವೆ ಮಾಡುವ ಇನ್ನಷ್ಟು ಅವಕಾಶಗಳು ಇವರಿಗೆ ದೊರೆಯಲಿ. ಅವರು ಎಲ್ಲ ಕ್ಷೇತ್ರಗಳಲ್ಲಿಯೂ ಯಶಸ್ಸು ಕಾಣಲಿ ಎಂಬುದು ಎಲ್ಲಾ ಶಿಕ್ಷಕರ ವೃಂದ ನೌಕರರ ವೃಂದ ಹೃದಯದ ಆಳದ ಹಾರೈಕೆ.
ಇವರನ್ನು ಸತ್ಕರಿಸಿ ಬೀಳ್ಕೊಡುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ.
ನಮ್ಮ ಅಭಿಮಾನ, ಪ್ರೀತಿ ಮತ್ತು ಗೌರವ ಸದಾ ನಿಮ್ಮೊಂದಿಗೇ ಇರುತ್ತದೆ ಎಂದು ಹಾರೈಸುತ್ತೇವೆ.
– ಮಹೇಶ್ ಟಂಕಸಾಲಿ
ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೌಲ್ ಪೇಟೆ ಕಿನ್ನಾಳ.ತಾ.ಜಿ. ಕೊಪ್ಪಳ.
