ಕೊಪ್ಪಳ : ಮೇ 10 : ಹಾಲುಮತ ಮಹಾಸಭಾದಿಂದ ಕೊಪ್ಪಳ ತಾಲೂಕಿನ ಕುರುಬ ಸಮಾಜದ ಪ್ರತಿಭಾನ್ವಿತ 2025-26 ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಹಾಲುಮತ ಮಹಾಸಭಾ ಜಿಲ್ಲಾಧ್ಯಕ್ಷ ಹನುಮಂತಪ್ಪ ಕೌದಿ ತಿಳಿಸಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕೊಪ್ಪಳ ತಾಲೂಕಿನ ಕುರುಬ ಸಮಾಜದ ಪ್ರತಿಭಾನ್ವಿತ 2025-26 ನೇ ಸಾಲಿನ ಎಸ್ ಎಸ್ ಎಲ್ ಸಿ ದ್ವಿತೀಯ ವರ್ಷದ ಪಿಯುಸಿ ಪರೀಕ್ಷೆಯಲ್ಲಿ ಪ್ರತಿಶತ 90 ಕ್ಕಿಂತ ಹೆಚ್ಚು ಅಂಕ ಪಡೆದ ಮತ್ತು ಮತ್ತು ವಿಶೇಷವಾಗಿ ದ್ವಿತೀಯ ವರ್ಷದ ಪಿಯುಸಿ ಯ ವಿಜ್ಞಾನ ವಿಭಾಗದಲ್ಲಿ ಪ್ರತಿಶತ 85ಕ್ಕಿಂತ ಹೆಚ್ಚು ಅಂಕ ಪಡೆದ ಕೊಪ್ಪಳ ತಾಲೂಕಿನ ಕುರುಬ ಸಮಾಜದ ವಿದ್ಯಾರ್ಥಿಗಳಿಗೆ ಅರ್ಜಿ ಆಹ್ವಾನಿಸಿದ್ದು , ಆಸಕ್ತರು 1)ಅರ್ಜಿ ಪ್ರತಿ (ಕಂಪ್ಯೂಟರ್ ಸೆಂಟರ್ ನಲ್ಲಿ ಸಿಗುತ್ತದೆ).
2)ಅಂಕಪಟ್ಟಿ 3)ಜಾತಿ ಪ್ರಮಾಣ ಪತ್ರ/ ವರ್ಗಾವಣೆ ಪ್ರಮಾಣ ಪತ್ರ.4) ವಿದ್ಯಾರ್ಥಿಯ 2 ಫೋಟೋ /ಭಾವಚಿತ್ರ.5)ವಿದ್ಯಾರ್ಥಿ ಆಧಾರ್ ಕಾರ್ಡ್ ದೊಂದಿಗೆ ಅರ್ಜಿ ಸಲ್ಲಿಸುವ ಸ್ಥಳ- *ವೆಂಕಿ ಡಾಟ್ ಕಾಮ್*
CSC COMPUTER CENTER ಎಲ್ಐಸಿ ಆಫೀಸ್ ಹತ್ತಿರ, ಕೇಂದ್ರೀಯ ಬಸ್ ನಿಲ್ದಾಣ ಕೊಪ್ಪಳ ಮೊ ನಂ-9743796108,8310611314.ಮತ್ತು *ಬೀರಲಿಂಗೇಶ್ವರ ಕಂಪ್ಯೂಟರ್ ಸೆಂಟರ್* , ಕುಣಿಕೇರಿ ಕ್ರಾಸ್ ಗವಿಮಠದ ಕೆರೆ ಹತ್ತಿರ ಕೊಪ್ಪಳ ಮೊ ನo-8431343458,7349070208. ಇಲ್ಲಿಗೆ ಮೇ 17ರ ಒಳಗೆ ಅರ್ಜಿ ಸಲ್ಲಿಸಬೇಕು ಎಂದು ಕೊಪ್ಪಳ ತಾಲೂಕು ಹಾಲುಮತ ಮಹಾಸಭಾದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಹಾಲಮತ ಮಹಾಸಭಾ ತಾಲೂಕ ಗೌರವಾಧ್ಯಕ್ಷ ದ್ಯಾಮನಗೌಡ ಭೀಮನೂರು ಮೊ -99 017 41295, ತಾಲೂಕ ಪ್ರಧಾನ ಕಾರ್ಯದರ್ಶಿ ಗವಿಸಿದ್ದಪ್ಪ ಗೊರವರ್- ಮೊ-90355 123 75, ಕಾರ್ಯಧ್ಯಕ್ಷ ಅನ್ನದಾನಿಸ್ವಾಮಿ ಮೊ -70221 7 6178, ಮತ್ತು ನಗರ ಘಟಕದ ಗೌರವಾಧ್ಯಕ್ಷ ದ್ಯಾಮಣ್ಣ ಡೊಳ್ಳಿನ್ ಮೊ -8073711 463 ಇವರನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು ಎಂದು ರಾಜ್ಯ ಸಂಘಟನಾ ಕಾರ್ಯದರ್ಶಿ ದ್ಯಾಮಣ್ಣ ಕರಿಗಾರ ತಾಲೂಕ ಅಧ್ಯಕ್ಷ ಮುದ್ದಪ್ಪ ಗೊಂದಿಹೊಸಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ ಅಣ್ಣಿಗೇರಿ, ಕಾರ್ಯಧ್ಯಕ್ಷ ಅಣ್ಣಪ್ಪ ಅಂಗಡಿ, ಜಿಲ್ಲಾ ಸಂಚಾಲಕ ಲಿಂಗರಾಜ ಚಳಗೇರಿ, ಮಂಜುನಾಥ್ ಬಂಗಾಳಿ, ಹಿರಿಯ ಉಪಾಧ್ಯಕ್ಷ ಹನುಮಂತಪ್ಪ ಹನುಮಾಪುರ್ ಇತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.