January 15, 2026

ಇನ್ನರ್ ವೀಲ್ ಕ್ಲಬ್ ನಿಂದ:
ಉಚಿತ ಹೃದಯ ತಪಾಸಣಾ ಶಿಬಿರ.
ಕೊಪ್ಪಳ : ಇನ್ನರ್ ವೀಲ್ ಕ್ಲಬ್ ದತ್ತು ಪಡೆದುಕೊಂಡಿರುವ ಬ್ರಹ್ಮನವಾಡಿ ಸರಕಾರಿ ಶಾಲೆಯಲ್ಲಿ ರವಿವಾರದಂದು ಉಚಿತ ಹೃದಯ ತಪಾಸಣೆಯನ್ನು ಶಿಬಿರ
ನಡೆಸಲಾಯಿತು.
ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಮಧು ಶೆಟ್ಟರ್ ಮಾತನಾಡಿ ಅಸೋಸಿಯೇಷನ್, ಮಹಿಳಾ ಫೋರಮ್ ಜಿಲ್ಲಾ ಶಾಖೆ ಕೊಪ್ಪಳ, ಇವರ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಇಂದು ಬಡವರು ಹಿಂದುಳಿದವರು ಮಧ್ಯಮ ವರ್ಗದವರಿಗೆ ಅನುಕೂಲವಾಗುವ ದೃಷ್ಟಿಯಿಂದ
ಎಸ್ ಡಿಎಂ ನಾರಾಯಣ ಹಾರ್ಟ್ ಸೆಂಟರ್ ಮಂಜುಶ್ರೀ ನಗರ, ಧಾರವಾಡ ವೈದ್ಯರು ನೇತೃತ್ವದಲ್ಲಿ ಉಚಿತ ಹೃದಯ ತಪಾಸಣೆಯನ್ನು ನಡೆಸಲಾಗುತ್ತಿದ್ದು ಬಹಳಷ್ಟು ಜನರು ಎಂದು ಉಪಯೋಗವನ್ನು ಪಡೆದುಕೊಂಡರು ಎಂದು ಹೇಳಿದರು.
ರಕ್ತ ಪರೀಕ್ಷೆ, ಇಸಿಜಿ, ಎಕೋ ಟೆಸ್ಟ್ ಗಳನ್ನು ಉಚಿತವಾಗಿ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಕ್ಲಬ್ ನ ISO ಹೇಮಾ ಬಳ್ಳಾರಿ, ಡಿಸ್ಟಿಕ್ ISO ಶರಣಮ್ಮ ಪಾಟೀಲ್, ಸಂಪಾದಕಿ ಸುಧಾ ಶೆಟ್ಟರ್,ಡಾ. ರಾಧಾ ಕುಲಕರ್ಣಿ, ಇನ್ನರ್ ವೀಲ್ ಕ್ಲಬ್ ಸದಸ್ಯರಾದ ಜ್ಯೋತಿ ಮಟ್ಟಿ, ಸುಜಾತ ಹಲಗೇರಿ, ರತ್ನ ಶೆಟ್ಟರ್, ಇನ್ನು ಅನೇಕ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

Leave a Reply

Your email address will not be published. Required fields are marked *