ಕೊಪ್ಪಳ: 79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹೊಸ ಬಂಡಿ ಹರ್ಲಾಪುರ್ ಅಗಳಕೇರ ಹಳೇ ಬಂಡಿಹರ್ಲಾಪುರ್ ಬಸಾಪುರ ಗ್ರಾಮಗಳ ಮಕ್ಕಳಿಗೆ ಉಚಿತ ನೋಟುಬುಕ್ ಪೆನ್ನುಗಳನ್ನು ಸೈಯದ್ ಫೌಂಡೇಶನ್ ಅಧ್ಯಕ್ಷ ಹಾಗೂ ಸಮಾಜ ಸೇವಕರಾದ ಡಾ.ಕೆ.ಎಂ. ಸೈಯದ್ ಅವರು ವಿತರಿಸಿದರು.
ನಂತರ ಮಾತನಾಡಿ ಫೌಂಡೇಶನ್ ನಿಂದ ಮಕ್ಕಳಿಗೆ ಉಚಿತ ನೋಟ್ ಬುಕ್, ಪೆನ್ನುಗಳನ್ನು ವಿತರಿಸಿದ್ದು ಸಂತಸ ತಂದಿದೆ ಎಂದರು.
ಗ್ರಾಮಸ್ಥರು ಡಾ.ಕೆ.ಎಂ.ಸೈಯದ್ ಅವರನ್ನು ಸನ್ಮಾನಿಸಿ ಗೌರವಿಸಿದರು.
. ಈ ಸಂದರ್ಭದಲ್ಲಿ ಮುಖಂಡರಾದ ರಾಮು ಪೂಜಾರ, ನಿವೃತ್ತ ಮಿಲಿಟರಿ ಅಧಿಕಾರಿ ರಾಜ್ ಶೆಟ್ಟಿ, ಗ್ರಾಮದ ಗಣ್ಯರು, ಗುರು ಹಿರಿಯರು ಜನಪ್ರತಿನಿಧಿಗಳು, ಶಿಕ್ಷಕರ ವೃಂದ ಉಪಸ್ಥಿತರಿದ್ದರು.