ಕೊಪ್ಪಳ: ನಗರದ ಹಮಾಲರ ಕಾಲೋನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಇನ್ನರ ವೀಲ್ ಸಂಸ್ಥೆಯಿಂದ ಉಚಿತ ದಂತ ತಪಾಸಣೆ ನಡೆಸಲಾಯಿತು.
ಇನ್ನರ ವೀಲ್ ಸಂಸ್ಥೆಯು ದತ್ತು ಪಡೆದುಕೊಂಡು ಮೂಲಭೂತ ಸೌಕರ್ಯಗಳನ್ನು ಒದಗಿಸುತಿದ್ದೇವೆ. ಮಕ್ಕಳಿಗೆ ದೇಶಭಕ್ತಿ ಗೀತೆ ಸ್ಪರ್ಧೆಯನ್ನು ಇಟ್ಟು ಪ್ರಥಮ ದ್ವಿತೀಯ ತೃತೀಯ ಪ್ರಶಸ್ತಿಗಳನ್ನು ಕೊಟ್ಟು, ಮಕ್ಕಳ ಸಂಸ್ಕೃತಿಕ ಕಲಿಯನ್ನು ಹೆಚ್ಚಿಸುವ ಉದ್ದೇಶದಿಂದ ಅವರಿಗೆ ಕೋಲಾಟದ ವಸ್ತುಗಳನ್ನು ಇನ್ನರ್ ವಿಲ್ ಸಂಸ್ಥೆಯ ಅಧ್ಯಕ್ಷರು ಒದಗಿಸಿ ಕೊಟ್ಟರು. ದಂತ ವೈದ್ಯರಾದ ಡಾ. ಹೀನಾ ಕೌಸರ್ ಹಾಗೂ ನೂರ್ ಜಾನ್ ಅವರು ಶಾಲೆಯ ಸುಮಾರು 75 ಮಕ್ಕಳಿಗೆ ಉಚಿತ ದಂತ ಪರೀಕ್ಷೆ ಮಾಡಿ, ಉಚಿತವಾಗಿ ಎಲ್ಲ ಮಕ್ಕಳಿಗೂ ಪೇಸ್ಟ್ ಗಳನ್ನು ನೀಡಲಾಯಿತು.
ಹೆಚ್ಚಿನ ಚಿಕಿತ್ಸೆಗಾಗಿ ಅವರು ತಮ್ಮ ಆಸ್ಪತ್ರೆಯಲ್ಲಿ ಆ ಮಕ್ಕಳಿಗೆ ಉಚಿತವಾಗಿ ಚಿಕಿತ್ಸೆ ನೀಡುವುದಾಗಿ ಹೇಳಿದ್ದಾರೆ ಶಾಲೆಯ ಮುಖ್ಯೋಪಾಧ್ಯಾಯರಾದ ರಾಧಾಬಾಯಿ ಅವರು ತುಂಬಾ ಸಂತಸ ಪಟ್ಟರು,ಇನ್ನರ ವೀಲ್ ಸಂಸ್ಥೆಯ ಅಧ್ಯಕ್ಷರಾದ ಮಧು ಶೆಟ್ಟರ್ ಅವರು ಮಕ್ಕಳಿಗೆ ಗಿಡಗಳನ್ನ ನೆಡುವುದು, ಅವುಗಳ ಸಂರಕ್ಷಣೆ, ಅವುಗಳನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ಮಕ್ಕಳಿಗೆ ತಿಳಿಸಿ ನೀವು ಹೇಗೆ ಬೆಳೆಯುತ್ತಿರೋ ಹಾಗೆ ಗಿಡಗಳು ಬೆಳೆಯಬೇಕು ಎಂದು ಮಕ್ಕಳಿಗೆ ಹೇಳಿದರು.
ಶಾಲೆಯ ಮುಖ್ಯೋಪಾಧ್ಯಾಯರು ನಿರೂಪಣೆ ಮಾಡಿ ಎಲ್ಲರನ್ನೂ ಸ್ವಾಗತಿಸಿದರು. ಸಂಸ್ಥೆಯ ಕಾರ್ಯದರ್ಶಿ ರೇಖಾ ಕಡ್ಲಿ ಅವರು ವಂದನಾರ್ಪಣೆ ಮಾಡಿದರು. ಖಜಾಂಚಿ ಸುವರ್ಣ ಶೆಟ್ಟರ್, ISO ಹೇಮಾ ಬಳ್ಳಾರಿ, ಹಿರಿಯ ವೈದ್ಯರಾದ ಡಾ.ರಾಧ ಕುಲಕರ್ಣಿ, ಮಾಜಿ ಅಧ್ಯಕ್ಷರಾದ ಮಮತಾ ಶೆಟ್ಟರ್, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.