
ಕೊಪ್ಪಳ: ತಮ್ಮ ವಾರ್ಡ್ ಗೆ ಸೌಲಭ್ಯ ಕಲ್ಪಿಸುತ್ತಿಲ್ಲ ಎಂದು ಆರೋಪಿಸಿ ಕೊಪ್ಪಳ ನಗರಸಭೆ 16ನೇ ವಾರ್ಡ್ ಸದಸ್ಯ ಸೋಮಣ್ಣ ಹಳ್ಳಿ ತಲೆ ಮೇಲೆ ಕಲ್ಲು ಹೊತ್ತು ವಿನೂತನವಾಗಿ ಪ್ರತಿಭಟಿಸಿದರು.
ವಾರ್ಡಗೆ ಮೂಲ ಸೌಕರ್ಯಗಳಿಲ್ಲ. ಹಲವು ಬಾರಿ ಮನವಿ ಸಲ್ಲಿಸಿದ್ದೇನೆ. ಅಧ್ಯಕ್ಷ, ಪೌರಾಯುಕ್ತ ಹಾಗೂ ಡಿಸಿಗೂ ಮನವಿ ಕೊಟ್ಟಿದ್ದೇನೆ. ಶೌಚಗೃಹ, ಪಾರ್ಕ್,ಸಮುದಾಯ ಭವನ ಯಾವುದೂ ಮಾಡುತ್ತಿಲ್ಲ. ಅನುದಾನ ಹಂಚಿಕೆಯಲ್ಲೂ ತಾರತಮ್ಯ ಮಾಡುತ್ತಿದ್ದಾರೆ. ಇದರಿಂದ ಸಾಕಾಗಿದೆ ಎಂದು ಆರೋಪಿಸಿದರು.
ಮನವೊಲಿಕೆ ಯತ್ನ: ನಗರಸಭೆ ಅಧ್ಯಕ್ಷ
ಅಮ್ಜದ್ ಪಟೇಲ್, ಇತರ ಕಾಂಗ್ರೆಸ್ ಸದಸ್ಯರು ಮನವೊಲಿಕೆಗೆ ಯತ್ನಿಸಿದರೂ ಸೋಮಣ್ಣ ಹಠ ಬಿಡಲಿಲ್ಲ. ನಗರಠಾಣೆ ಪಿಐ ಕೆ.ಜಯಪ್ರಕಾಶ ಹಾಗೂ ಪೊಲೀಸರು ಮನವಿ ನೀಡಿ.ಆದರೆ ಸಾರ್ವಜನಿಕರಿಗೆ ತೊಂದರೆ ಆಗಲು ಬಿಡುವುದಿಲ್ಲ ಎಂದರು.
ಈ ವೇಳೆ ಪರಸ್ಪರ ವಾಗ್ವಾದ ನಡೆದು ಹೈ ಡ್ರಾಮಾ ನಡೆಯಿತು.
ಕಲ್ಲಿಗೆ ನಾಮ : ಸೈಜ್ ಕಲ್ಲು ಹೊತ್ತು ಬಂದ ಸೋಮಣ್ಣ ಹಳ್ಳಿ ಅದಕ್ಕೆ ತಿರುಪತಿ ನಾಮ ಹಾಕಿ ಪ್ರದರ್ಶಿಸಿದರು. ನಾಮ ಹಾಕಿದ ಕಲ್ಲಿಗೆ ಬೆಲೆ ಇದೆ. ನಮ್ಮ ಮನವಿಗೆ ಬೆಲೆ ಇಲ್ಲ ಎಂದು ತಲೆ ಮೇಲೆ ಹೊತ್ತು ಪ್ರದರ್ಶಿಸಿದರು.