ಕೊಪ್ಪಳ : ನಗರದ ಶ್ರೀ ಮಳೇ ಮಲ್ಲೇಶ್ವರ ದೇವಸ್ಥಾನದಲ್ಲಿ ನಡೆದ, ಕೊಪ್ಪಳ ಕಿರು ಜಾತ್ರೆ 2025,ಕೊಪ್ಪಳ ಕೋಗಿಲೆ ಸೀಸನ್ -5 ಗ್ರಾಂಡ್ ಫಿನಾಲೆ ಹಾಗೂ ಕೊಪ್ಪಳ ಕಿರು ಜಾತ್ರೆ ಸೀಸನ್ -2 ರ ಟೈಲರ್ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಕೊಪ್ಪಳದಲ್ಲಿ ಮಜಾ ಭಾರತ, ಕನ್ನಡ ಕೋಗಿಲೆ, ಸರಿಗಮಪ ಹಾಗೂ ಇನ್ನೂ ಅನೇಕ ಕಲಾವಿದರು ಆಗಮಿಸಲಿದ್ದಾರೆ, ಡಿಕೆಡಿ, ನೃತ್ಯ ತಂಡ ಹಾಗೂ ಬಂಜಾರ ನೃತ್ಯ ತಂಡದವರು ಆಗಮಿಸಲಿದ್ದಾರೆ.ಕೊಪ್ಪಳದಲ್ಲಿ ಪ್ರಪ್ರಥಮ ಬಾರಿಗೆ ಲೈವ್ ಮ್ಯೂಸಿಕ್ ಮಾನಸಾ ಹೊಳ್ಳಿ ಹಾಗೂ ಮೈಸೂರು ತಂಡದಿಂದ ಅದ್ದೂರಿ ಕಾರ್ಯಕ್ರಮಗಳು, ಇದೇ ತಿಂಗಳ ದಿನಾಂಕ “20” ಏಪ್ರಿಲ್ 2025 ರಂದು ನಗರದ ತಾಲೂಕು ಕ್ರೀಡಾಂಗಣ ಕೊಪ್ಪಳದಲ್ಲಿ ನಡೆಯಲಿದ್ದು ಈ ಕಾರ್ಯಕ್ರಮವನ್ನು ವೀಕ್ಷಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದರು.
ಈ ಸಂದರ್ಭದಲ್ಲಿ ಶರಣಪ್ಪ ಸಜ್ಜನ್, ಮಂಜುಳಾ ಅಮರೇಶ್ ಕರಡಿ, ಶಿವಕುಮಾರ್ ಕೋಣಂಗಿ, ಮುತ್ತುಸ್ವಾಮಿ ನರೇಗಲ್ ಮಠ, ಅಜ್ಜಪ್ಪಸ್ವಾಮಿ ಚೆನ್ನವಡಯರ ಮಠ, ಶ್ರವಣ್ ಕುಮಾರ್ ಶರ್ಮಾ, ನಾಗರಾಜ್ ಕಂದಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.